– ಏಕಕಾಲದಲ್ಲಿ 2 ಟ್ರೈನ್ ಪಾಸ್
ಭೋಪಾಲ್: ಏಕಕಾಲದಲ್ಲಿ ಎರಡು ರೈಲುಗಳು ವೇಗವಾಗಿ ಪಾಸ್ ಆಗಿದ್ದರಿಂದ ರೈಲ್ವೇ ನಿಲ್ದಾಣದ ಕಟ್ಟಡ ಬಿದ್ದಿರುವ ಘಟನೆ ಮಧ್ಯಪ್ರದೇಶದ ಬುರ್ಹಾನಪುರದ ಚಾಂದನಿಯಲ್ಲಿ ನಡೆದಿದೆ. ಇಂದು ಮಧ್ಯಾಹ್ನ 3 ಗಂಟೆ 55 ನಿಮಿಷಕ್ಕೆ ನಿಲ್ದಾಣದ ಕಟ್ಟಡ ಬಿದ್ದಿದೆ.
Advertisement
ನೇಪಾನಗರ ಮತ್ತು ಅಲಿಗಢ ನಡುವಿನ ಚಾಂದನಿ ರೈಲ್ವೇ ನಿಲ್ದಾಣದ ಮುಂಭಾಗ ಸೇರಿದಂತೆ ಕಟ್ಟಡ ಸಂಪೂರ್ಣ ಬಿದ್ದಿದೆ. ಇಂದು ಮಧ್ಯಾಹ್ನ 3.30 ನಿಮಿಷಕ್ಕೆ ಖಂಡವಾದಿಂದ ಬಂದ ಪವನ್ ಎಕ್ಸ್ ಪ್ರೆಸ್ ಮತ್ತು ಬುರ್ಹಾನಪುರದಿಂದ ಆಗಮಿಸಿದ ಗುವಾಹಟಿ ಎಕ್ಸ್ ಪ್ರೆಸ್ ಚಾಂದಿನಿ ರೈಲ್ವೇ ನಿಲ್ದಾಣಗಳಲ್ಲಿ ಏಕಕಾಲದಲ್ಲಿಯೇ ಪಾಸ್ ಆಗಿವೆ. ಮೊದಲೇ ಶಿಥಿಲಾವ್ಯಸ್ಥೆಯಲ್ಲಿದ್ದ ನಿಲ್ದಾಣದ ಕಟ್ಟಡ ರೈಲುಗಳ ವೇಗಕ್ಕೆ ಬಿದ್ದಿದೆ.
Advertisement
Advertisement
ರೈಲ್ವೇ ನಿಲ್ದಾಣದ ಮುಂಭಾಗದ ಛಾವಣಿ ಬಿದ್ದು, ಕಿಟಕಿಯ ಗಾಜುಗಳು ಪುಡಿಪುಡಿಯಾಗಿವೆ. ಕಟ್ಟಡದ ಮೇಲ್ಭಾಗದ ಗೋಡೆ ಭಾಗಶಃ ನೆಲಸಮವಾಗಿದ್ದು, ಇನ್ನುಳಿದ ಭಾಗ ಬೀಳುವ ಹಂತದಲ್ಲಿದೆ. ಘಟನೆ ವೇಳೆ ಪ್ರಯಾಣಿಕರು ಇರದಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಕಟ್ಟಡ ಬೀಳುತ್ತಿದ್ದಂತೆ ಸಿಬ್ಬಂದಿ ಓಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ.
Advertisement
ಮಧ್ಯಾಹ್ನ 3.30ಕ್ಕೆ ಎರಡೂ ರೈಲುಗಳ ಪಾಸ್ ಆಗುತ್ತಿದ್ದಂತೆ ಕಟ್ಟಡದ ಕೆಲ ಭಾಗಗಳು ಬೀಳಲಾರಂಭಿಸಿದವು. ಕೂಡಲೇ ಎಲ್ಲ ಸಿಬ್ಬಂದಿ ಹೊರ ಬಂದು ನಿಂತ ಕೆಲವೇ ನಿಮಿಷಗಳಲ್ಲಿಯೇ ಕಟ್ಟಡ ಬಿತ್ತು ಎಂದು ರೈಲ್ವೇ ನಿಲ್ದಾಣದ ಮಾಸ್ಟರ್ ಆಶಾರಾಮ್ ನಾವಂಶಿ ಹೇಳಿದ್ದಾರೆ.
ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ರೈಲ್ವೇ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದೆ. ನಿಲ್ದಾಣದ ಒಂದು ಟ್ರ್ಯಾಕ್ ಮೇಲೆ ಕಲ್ಲು ಮಣ್ಣು ಬಿದ್ದಿದ್ದು ಜಖಂ ಆಗಿದೆ. ಹಾಗಾಗಿ ಒಂದೇ ಟ್ರ್ಯಾಕ್ ಮೇಲೆ ರೈಲುಗಳ ಸಂಚಾರ ಅನುಮತಿ ನೀಡಿದ್ದು, ಟ್ರೈನ್ ಗಳ ಸಂಚಾರದಲ್ಲಿ ಒಂದು ಗಂಟೆ ವಿಳಂಬವಾಗಿದೆ.