ಭೋಪಾಲ್: ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ರಾಜ್ಯ ಸರ್ಕಾರದ ವತಿಯಿಂದ 4 ಸಾವಿರ ರೂ.ಗಳನ್ನು ನೇರ ರೈತರ ಖಾತೆಗೆ ಎರಡು ಕಂತುಗಳಲ್ಲಿ ವರ್ಗಾವಣೆ ಮಾಡುವುದಾಗಿ ಘೋಷಿಸಿದ್ದಾರೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮನ್ ನಿಧಿ ಯೋಜನೆಯಡಿ ದಾಖಲಿಸಿಕೊಂಡಿರುವ ರೈತರಿಗೆ ಯೋಜನೆಯ ಲಾಭ ದೊರೆಯಲಿದೆ.
Advertisement
Madhya Pradesh CM Shivraj Singh Chouhan announces his government will transfer Rs 4,000 into bank accounts of farmers in state in two equal instalments in a financial year
— Press Trust of India (@PTI_News) September 22, 2020
Advertisement
ರೈತರ ಒಟ್ಟಾರೆ ಅಭಿವೃದ್ಧಿಗಾಗಿ ಕಿಸಾನ್ ಸಮ್ಮನ್ ನಿಧಿ, ಶೂನ್ಯ ಬಡ್ಡಿ ದರದಲ್ಲಿ ಸಾಲ ಮತ್ತು ಪ್ರಧಾನಿ ಬೆಳೆ ವಿಮೆ ಮುಂತಾದ ಯೋಜನೆಗಳೊಂದಿಗೆ ರೈತರ ಹಿತದೃಷ್ಟಿಯಿಂದ ನಡೆಸಬೇಕೆಂದು ನಾವು ನಿರ್ಧರಿಸಿದ್ದು, ಎಲ್ಲಾ ಯೋಜನೆಗಳನ್ನು ವಿಶೇಷ ಪ್ಯಾಕೇಜ್ ಆಗಿ ಅನುಷ್ಠಾನ ಮಾಡುತ್ತೇವೆ ಎಂದು ಸಿಎಂ ಚೌಹಾಣ್ ಹೇಳಿದ್ದಾರೆ.
Advertisement
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ರೈತ ಕಲ್ಯಾಣ ಯೋಜನೆಯನ್ನು ರಾಜ್ಯದಲ್ಲಿ ಪ್ರಾರಂಭಿಸಲಾಗುತ್ತಿದೆ. ಯೋಜನೆಯ ಅಡಿ ರೈತರಿಗೆ ವಾರ್ಷಿಕವಾಗಿ 4 ಸಾವಿರ ರೂ. ಪಾವತಿಸಲಾಗುವುದು. ರೈತರ ಕಲ್ಯಾಣ ನನ್ನ ಜೀವನದ ಗುರಿಯಾಗಿದೆ ಎಂದು ಚೌಹಾಣ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
Advertisement
2022ರ ವೇಳೆಗೆ ರೈತರು ತಮ್ಮ ಆದಾಯವನ್ನು ದ್ವಿಗುಣಗೊಳಿಸಲು ತಮ್ಮ ಸರ್ಕಾರ ಸಹಾಯ ಮಾಡುತ್ತದೆ. ರೈತರು ಬೆಳೆದ ಆಹಾರ ಬೆಳೆಗಳ ಖರೀದಿಗೆ 27 ಸಾವಿರ ಕೋಟಿ ರೂ. ವ್ಯಯ ಮಾಡಲಿದ್ದೇವೆ ಎಂದು ಹೇಳಿದ್ದಾರೆ.