-ಡ್ರಗ್ ಡೀಲರ್ ಜೊತೆ ರಿಯಾ ಸಂಪರ್ಕ
-ಬಗೆದಷ್ಟು ಹೊಸ ಸ್ವರೂಪ ಪಡೆದುಕೊಳ್ತಿರೋ ಕೇಸ್
ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣ ಅಕ್ರಮ ಹಣ ವರ್ಗಾವಣೆ ಬಳಿಕ ಮತ್ತೊಂದು ಆಯಾಮವನ್ನು ಪಡೆದುಕೊಂಡಿದೆ. ನಟ ಸುಶಾಂತ್ ಸಿಂಗ್ ರಜಪೂತ್ ಮತ್ತು ಗೆಳತಿ, ನಟಿ ರಿಯಾ ಚಕ್ರವರ್ತಿ ವಾಟ್ಸಪ್ ಸಂದೇಶಗಳ ಸ್ಕ್ರೀನ್ ಶಾಟ್ಗಳ ಮಾಹಿತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ-ಮಾದಕ ವಸ್ತುಗಳ ನಿಯಂತ್ರಕ ಬ್ಯೂರೋ)ಗೆ ವರ್ಗಾಯಿಸಿದ್ದಾರೆ.
Advertisement
ಆರಂಭದಲ್ಲಿ ಪ್ರಕರಣದ ತನಿಖೆ ಆರಂಭಿಸಿದ್ದ ಮುಂಬೈ ಪೊಲೀಸರಿಗೆ ಅಕ್ರಮ ಹಣ ವರ್ಗಾವಣೆಯ ಬಗ್ಗೆ ಅನುಮಾನಗಳ ವ್ಯಕ್ತವಾಗಿತ್ತು. ಈ ಹಿನ್ನೆಲೆ ಅಕ್ರಮ ಹಣ ವರ್ಗಾವಣೆ ಪ್ರಕರಣದ ಮಾಹಿತಿಯನ್ನ ಮುಂಬೈ ಪೊಲೀಸರು ಇಡಿಗೆ ವರ್ಗಾಯಿಸಿದ್ದರು. ಪ್ರಕರಣ ಕೈಗೆತ್ತಿಕೊಂಡಿರುವ ಇಡಿ ಸುಶಾಂತ್ ಮತ್ತು ರಿಯಾ ನಡುವಿನ ಮಾತುಕತೆಯ ಮಾಹಿತಿಯನ್ನು ಎನ್ಸಿಬಿಗೆ ನೀಡಿದೆ. ಎನ್ಸಿಬಿ ನಿರ್ದೇಶಕ ರಾಕೇಶ್ ಅಸ್ಥಾನ್ ಸಹ ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾಹಿತಿ ವರ್ಗಾವಣೆ ಆಗಿರೋದನ್ನು ಖಚಿತಪಡಿಸಿದ್ದಾರೆ. ಇದನ್ನೂ ಓದಿ: ಪ್ರಕರಣಕ್ಕೆ ಹೊಸ ತಿರುವು ನೀಡಿದ ಸುಶಾಂತ್ ಪಕ್ಕದ್ಮನೆ ಮಹಿಳೆ ಹೇಳಿಕೆ
Advertisement
Advertisement
ಸುಶಾಂತ್ ಜೊತೆಗಿದ್ದವರು ಮಾದಕ ವಸ್ತು ಸೇವನೆ ಮಾಡುತ್ತಿದ್ದರು ಮತ್ತು ಕೆಲವರು ಡ್ರಗ್ಸ್ ಡೀಲರ್ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದರು. ರಿಯಾ ಡ್ರಗ್ ಸೇವನೆ ಜೊತೆ ಡೀಲಿಂಗ್ ಸಹ ಮಾಡುತ್ತಿದ್ದರು. ಸೋಮವಾರ ಬಿಜೆಪಿ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಸಹ ಸುಶಾಂತ್ ನಿಧನದ ದಿನ ಡ್ರಗ್ ಡೀಲರ್ ಒಬ್ಬರನ್ನ ಭೇಟಿಯಾಗಿದ್ರು ಎಂದು ಆರೋಪಿಸಿದ್ದರು. ಇದನ್ನೂ ಓದಿ: ಸುಶಾಂತ್ ಸಾವಿಗೆ ಭೂಗತ ಲೋಕದ ಲಿಂಕ್: ಸುಬ್ರಮಣಿಯನ್ ಸ್ವಾಮಿ
Advertisement
ಸುಳಿವು ನೀಡಿತ್ತು ರಿಯಾ ಮೊಬೈಲ್: ಆಗಸ್ಟ್ 10ರಂದು ಜಾರಿ ನಿರ್ದೇಶನಾಲಯ ರಿಯಾ ಬಳಸುತ್ತಿದ್ದ ಎರಡು ಮೊಬೈಲ್, ಸೋದರನ ಒಂದು ಮೊಬೈಲ್ ಮತ್ತು ತಂದೆಯ ಒಂದು ಫೋನ್ ವಶಕ್ಕೆ ಪಡೆದುಕೊಂಡಿದ್ದರು. ಜೊತೆಗೆ ಒಂದು ಐಪ್ಯಾಡ್ ಮತ್ತು ಲ್ಯಾಪ್ಟ್ಯಾಪ್ ಸಹ ಪಡೆದುಕೊಂಡಿದ್ದರು. ವಶ ಪಡಿಸಿಕೊಂಡ ಡಿವೈಸ್ ಗಳನ್ನು ಅಧಿಕಾರಿಗಳು ಫೊರೆನ್ಸಿಕ್ ಲ್ಯಾಬ್ ಗೆ ಕಳುಹಿಸಲಾಗಿತ್ತು. ಈ ವೇಳೆ ಮಾದಕ ವಸ್ತು ಬಳಕೆ ಮತ್ತು ಮಾರಾಟದ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ಮಾಧ್ಯಮ ವರದಿ ಮಾಡಿದೆ.
ಸುಶಾಂತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಇದುವರೆಗೂ ರಿಯಾ ಚಕ್ರವರ್ತಿ, ಸೋದರ ಶೌವಿಕ್ ಚಕ್ರವರ್ತಿ, ಸುಶಾಂತ್ ತಂದೆ ಕೆ ಕೆ ಸಿಂಗ್, ಸೋದರಿ ಮಿತು, ನಿರ್ಮಾಪಕ ರೂಮಿ ಜಾಫರಿ, ಗೆಳೆಯ ಸಿದ್ಧಾರ್ಥ್ ಪಿಠಾಣಿ, ಮಾಜಿ ಉದ್ಯೋಗಿ ಶೃತಿ ಮೋದಿ, ಹೌಸ್ ಮ್ಯಾನೇಜರ್ ಸೆಮ್ಯೂಯಲ್ ಮಿರಂಡಾ ಸೇರಿದಂತೆ ಹಲವರನ್ನು ವಿಚಾರಣಗೆ ಒಳಪಡಿಸಿದ್ದಾರೆ.
ಡ್ರಗ್ಸ್ ಸಿಗರೇಟ್ ಸೇವನೆ: ಇದಕ್ಕೂ ಮೊದಲು ಸುಶಾಂತ್ ಕುಕ್ ನೀರಜ್ ಸಿಂಗ್ ಖಾಸಗಿ ವಾಹಿನಿ ಜೊತೆ ಮಾತನಾಡುವಾಗ ಸರ್ ಡ್ರಗ್ಸ್ ಸಿಗರೇಟ್ ಸೇದುತ್ತಿದ್ದರು. ನಿಧನಕ್ಕೂ ಮುನ್ನ ಕೆಲವರಿಗಾಗಿ ಡ್ರಗ್ಸ್ ಸಿಗರೇಟ್ ರೋಲ್ ಮಾಡಿದ್ದರು. ಸುಶಾಂತ್ ಮತ್ತು ರಿಯಾ ಗೆಳೆಯರ ಜೊತೆ ಸೇರಿ ಮನೆಯಲ್ಲಿ ಪಾರ್ಟಿ ಮಾಡುತ್ತಿದ್ದರು.
ಸುಶಾಂತ್ ಪ್ರಕರಣ- ಸಿಬಿಐನಿಂದ ಘಟನೆಯ ಮರುಸೃಷ್ಟಿhttps://t.co/rlBouOVJ8c#SushantSinghRajput #CBIInMumbai
— PublicTV (@publictvnews) August 23, 2020
ಪಾರ್ಟಿ ವೇಳೆ ಎಲ್ಲರೂ ಮದ್ಯ ಮತ್ತು ಡ್ರಗ್ಸ್ ಸೇವನೆ ಮಾಡುತ್ತಿದ್ದರು. ಸೆಮ್ಯೂಯೆಲ್ ಈ ಸಿಗರೇಟ್ ತರುತ್ತಿದ್ದರು. ಸುಶಾಂತ್ ನಿಧನಕ್ಕೂ ಮೂರು ದಿನಗಳ ಮುಂದೆ ಸೆಮ್ಯೂಯೆಲ್ ಡ್ರಗ್ಸ್ ಸಿಗರೇಟ್ ರೋಲ್ ಮಾಡಿದ್ದರು. ಜೂನ್ 14ರಂದು ಸುಶಾಂತ್ ನಿಧನದ ಬಳಿಕ ಮನೆಯಲ್ಲಿ ಚೆಕ್ ಮಾಡಿದಾಗ ಸಿಗರೇಟ್ ಸಿಗಲಿಲ್ಲ ಎಂದು ಹೇಳಿದ್ದರು.