– ರಾಜಕೀಯ ತಿರುವು ಪಡೆದುಕೊಂಡ ಪ್ರಕರಣ
ಕೋಲ್ಕತ್ತಾ: ಡ್ರಗ್ಸ್ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಬಾಲಿವುಡ್ ನಟಿ ರಿಯಾ ಚಕ್ರವರ್ತಿಯ ಬೆನ್ನಿಗೆ ಪಶ್ಚಿಮಾ ಬಂಗಾಳದ ಕಾಂಗ್ರೆಸ್ ನಿಂತುಕೊಂಡಿದ್ದು, ಆಕೆ ಪರವಾಗಿ ರ್ಯಾಲಿ ಕೂಡ ಮಾಡಿದೆ.
ಕಳೆದ ಜೂನ್ ತಿಂಗಳಲ್ಲಿ ಮೃತಪಟ್ಟ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಫೋಟೋವನ್ನು ಬಿಹಾರದಲ್ಲಿ ಬಿಜೆಪಿ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿದೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ಈಗ ನಟಿ ರಿಯಾ ಚಕ್ರವರ್ತಿ ಪಶ್ಚಿಮಾ ಬಂಗಾಳ ಮೂಲದವಳಾದ ಕಾರಣ ಬಂಗಾಳದ ಕಾಂಗ್ರೆಸ್ ಆಕೆಯ ಪರವಾಗಿ ನಿಂತಿದೆ.
Advertisement
Advertisement
ರಿಯಾ ಬಂಗಾಳದ ಮಗಳು ಎಂಬ ಬ್ಯಾನರ್ ಹಿಡಿದು ಕಾಂಗ್ರೆಸ್ ಪಕ್ಷ ಪಶ್ಚಿಮ ಬಂಗಾಳ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಅವರ ಸೂಚನೆಯ ಮೇರೆಗೆ ಪ್ರಾಂತೀಯ ಕಾಂಗ್ರೆಸ್ ಕಚೇರಿಯಿಂದ ವೆಲ್ಲಿಂಗ್ಟನ್ ಜಂಕ್ಷನ್ಗೆ ಪ್ರತಿಭಟನೆ ನಡಸಿದೆ. ಜೊತೆಗೆ ಬಂಗಾಳದ ಮಗಳು ರಿಯಾ ಚಕ್ರವರ್ತಿ ವಿರುದ್ಧ ರಾಜಕೀಯ ಪಿತೂರಿ ಮತ್ತು ಪ್ರತೀಕಾರದ ನಡವಳಿಕೆಯನ್ನು ನಾವು ಸಹಿಸಲಾಗುವುದಿಲ್ಲ ಎಂದು ಕಾಂಗ್ರೆಸ್ ಪಕ್ಷ ಶನಿವಾರ ಟ್ವೀಟ್ ಕೂಡ ಮಾಡಿದೆ.
Advertisement
Advertisement
ಈ ವಿಚಾರವಾಗಿ ಮಾತನಾಡಿರುವ ಪಶ್ಚಿಮ ಬಂಗಾಳ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಅಧೀರ್ ರಂಜನ್ ಚೌಧರಿ, ಮೃತ ಸುಶಾಂತ್ ಸಿಂಗ್ ರಜಪೂತ್ ಓರ್ವ ಭಾರತೀಯ ನಟ. ಆದರೆ ಆತನನ್ನು ಬಿಹಾರದ ಬಿಜೆಪಿ ಪಕ್ಷ ಬಿಹಾರದ ನಟ ಎಂಬಂತೆ ಬಿಂಬಿಸುತ್ತಿದೆ. ಜೊತೆಗೆ ಇದರಿಂದ ರಾಜಕೀಯ ಲಾಭ ಪಡೆಯಲು ಮುಂದಾಗಿದೆ. ಹೀಗಾಗಿ ರಿಯಾಳನ್ನು ಸುಶಾಂತ್ ಪ್ರಕರಣದಲ್ಲಿ ಅರೆಸ್ಟ್ ಮಾಡದೇ ಆಕೆಯನ್ನು ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಜೂನ್ ತಿಂಗಳಲ್ಲಿ ತನ್ನ ಮುಂಬೈನ ಮನೆಯಲ್ಲೇ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದರು. ಇದಾದ ಬಳಿಕ ಆತನನ್ನು ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ನಂತರ ಸುಶಾಂತ್ ತಂದೆ ನಟಿ ರಿಯಾ ಚಕ್ರವರ್ತಿ ವಿರುದ್ಧ ಬಿಹಾರದಲ್ಲಿ ದೂರು ನೀಡಿದ್ದರು. ಆದರೆ ಸುಶಾಂತ್ ವಿಚಾರದಲ್ಲಿ ಮುಂಬೈ ಪೊಲೀಸರು ಸರಿಯಾದ ತನಿಖೆ ಮಾಡುತ್ತಿಲ್ಲ ಎಂದು ಆರೋಪ ಕೇಳಿ ಬಂದಿತ್ತು.
ಈ ನಡುವೆ ಸುಶಾಂತ್ ಸಿಂಗ್ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಸಾಮಾಜಿಕ ಜಾಲತಾಣದ ಮೂಲಕ ಜನರು ಕೇಳಿಕೊಂಡಿದ್ದರು. ಜೊತೆಗೆ ಬಿಹಾರದ ಮುಖ್ಯ ಮಂತ್ರಿ ನಿತೀಶ್ ಕುಮಾರ್ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿದ್ದರು. ಕೊನೆಗೂ ಸುಪ್ರೀಂ ಕೋರ್ಟ್ ಸುಶಾಂತ್ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಇಲ್ಲಿಂದ ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿತ್ತು.
ಸದ್ಯ ರಿಯಾ ಚಕ್ರವರ್ತಿಯನ್ನು ಎನ್ಸಿಬಿ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಆಕೆ ಜಾಮೀನು ಆರ್ಜಿ ಕೋರ್ಟಿನಲ್ಲಿ ವಜಾ ಆದ ಕಾರಣ ಆಕೆ ಸದ್ಯ ಬೈಲಕುಲ್ಲಾ ಜೈಲಿನಲ್ಲಿ ಇದ್ದಾಳೆ. ವಿಚಾರಣೆ ವೇಳೆ ನನ್ನ ಜೊತೆ ನಟಿ ರಕುಲ್ ಪ್ರೀತ್ ಸಿಂಗ್, ಸಾರಾ ಅಲಿಖಾನ್, ಡಿಸೈನರ್ ಸಿಮೋನ್ ಖಂಬಟ್ಟಾ, ಸುಶಾಂತ್ ಗೆಳತಿ, ಮಾಜಿ ಮ್ಯಾನೇಜರ್ ರೋಹಿಣಿ ಅಯ್ಯರ್ ಮತ್ತು ನಿರ್ಮಾಪಕ ಮುಕೇಶ್ ಛಾಬ್ರಾ ಡ್ರಗ್ಸ್ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದು, ಎನ್ಸಿಬಿ ಅವರಿಗೆ ಸಮನ್ಸ್ ನೀಡಿದೆ.
ಎನ್ಸಿಬಿ ವಿಚಾರಣೆ ವೇಳೆ ಪಾರ್ಟಿಗಳಲ್ಲಿ ಬಾಲಿವುಡ್ ಐವರು ಸೆಲೆಬ್ರಿಟಿಗಳು ನನ್ನ ಜೊತೆ ಡ್ರಗ್ಸ್ ಸೇವನೆ ಮಾಡುತ್ತಿದ್ದರು ಎಂಬ ವಿಚಾರವನ್ನ ರಿಯಾ ಹೊರ ಹಾಕಿದ್ದಾಳೆ ಎನ್ನಲಾಗಿದೆ. ರಿಯಾ ತನ್ನ ಹೇಳಿಕೆಯಲ್ಲಿ 25 ಕಲಾವಿದರ ಹೆಸರು ಹೇಳಿದ್ದಾರೆ ಎನ್ನಲಾಗಿದ್ದು, ಶೇ.80ರಷ್ಟು ಬಾಲಿವುಡ್ ಸ್ಟಾರ್ ಗಳು ಡ್ರಗ್ಸ್ ಸೇವನೆ ಮಾಡುತ್ತಿರುವ ಬಗ್ಗೆ ಎನ್ಸಿಬಿ ಅನುಮಾನ ವ್ಯಕ್ತಪಡಿಸಿದೆ. 15 ಜನ ಬಿ ಟೌನ್ ಸ್ಟಾರ್ ಗಳು ಮತ್ತು ಉಳಿದವರು ಬಿ ಕೆಟಗರಿ ಕಲಾವಿದರು ಎನ್ನಲಾಗಿದೆ.