ಮುಂಬೈ: ಭಾರತೀಯ ಕ್ರಿಕೆಟ್ ತಂಡದ ಆಟಗಾರ ಅಂಬಟಿ ರಾಯುಡು ದಂಪತಿಗೆ ಹೆಣ್ಣು ಮಗು ಜನಿಸಿದೆ.
ರಾಯುಡು ಪತ್ನಿ ಚೆನ್ನುಪಲ್ಲಿ ವಿದ್ಯಾ ಅವರು ಭಾನುವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಐಪಿಎಲ್ನಲ್ಲಿ ರಾಯುಡು ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಆಡುತ್ತಿದ್ದು, ರಾಯುಡು ತಂದೆಯಾದ ವಿಚಾರವನ್ನು, ಸಿಎಸ್ಕೆ ತಂಡ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.
Advertisement
Now the off-field lessons from the #DaddiesArmy shall all be put to use! #WhistlePodu ???????? pic.twitter.com/JpA7drQ2TC
— Chennai Super Kings (@ChennaiIPL) July 12, 2020
Advertisement
ರಾಯುಡು ದಂಪತಿಗೆ ಹೆಣ್ಣು ಮಗು ಜನಿಸಿದೆ ಎಂಬ ವಿಚಾರ ತಿಳಿಯುತ್ತಿದಂತೆ ಅವರ ಅಭಿಮಾನಿಗಳು ಮತ್ತು ಸಾವಿರಾರು ನೆಟ್ಟಿಗರು ಸಾಮಾಜಿಕ ಜಾಲತಾಣದ ಮೂಲಕ ವಿಶ್ ಮಾಡುತ್ತಿದ್ದಾರೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈಗ ಡ್ಯಾಡೀಸ್ ಆರ್ಮಿಯಿಂದ ಆಫ್-ಫೀಲ್ಡ್ ಪಾಠಗಳನ್ನು ಬಳಸಲಾಗುವುದು. ವಿಸಿಲ್ ಪೋಡು ಎಂದು ಬರೆದು ಅಂಬಟಿ ರಾಯುಡು ಮತ್ತು ಅವರು ಮಗಳು ಹಾಗೂ ಅವರ ಪತ್ನಿ ಜೊತೆಗಿರುವ ಮುದ್ದಾದ ಸೆಲ್ಫಿಯನ್ನು ಹಂಚಿಕೊಂಡಿದೆ.
Advertisement
Heartiest congratulations @RayuduAmbati & Vidya on the birth of your daughter. Such a blessing! Cherish each & every moment with the little one & wishing you all lots of love & happiness! ????????????????
— Suresh Raina???????? (@ImRaina) July 12, 2020
Advertisement
ತನ್ನ ತಂಡದ ಸಹ ಆಟಗಾರ ಅಂಬಟಿ ರಾಯುಡು ಅವರಿಗೆ ವಿಶ್ ಮಾಡಿರುವ ಸುರೇಶ್ ರೈನಾ ಅವರು, ಮಗಳ ಜನನವಾಗಿದ್ದಕ್ಕೆ ಅಂಬಟಿ ರಾಯುಡು ಹಾಗೂ ವಿದ್ಯಾ ಅವರಿಗೆ ಶುಭಾಶಯಗಳು. ನಿಮ್ಮ ಮುದ್ದು ಮಗಳ ಜೊತೆಗೆ ಪ್ರತಿ ಕ್ಷಣವನ್ನು ಆನಂದಿಸಿ. ನಿಮಗೆ ದೇವರು ಹೆಚ್ಚಿನ ಖುಷಿ ಕೊಡಲಿ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಉತ್ತರಿಸಿದ ರಾಯಡು ಅವರು, ಧನ್ಯವಾದಗಳು ಸಹೋದರ ಎಂದು ರೈನಾ ಅವರಿಗೆ ತಿಳಿಸಿದ್ದಾರೆ.
ರಾಯುಡು ಅವರು ಭಾರತ ತಂಡದ ಮಿಡಲ್ ಆರ್ಡರ್ ಬ್ಯಾಟ್ಸ್ ಮ್ಯಾನ್ ಆಗಿದ್ದು, ಭಾರತದ ಪರವಾಗಿ 55 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಜೊತೆಗೆ ಮೂರು ಸೆಂಚುರಿಗಳನ್ನು ಹೊಡೆದಿದ್ದಾರೆ. ಭಾರತದ ಪರವಾಗಿ ಅಂಬಟಿ ರಾಯುಡು ಅವರು, ಆರು ಟಿ-೨೦ ಪಂದ್ಯಗಳನ್ನು ಆಡಿದ್ದಾರೆ. ಐಪಿಎಲ್ನಲ್ಲಿ ಹೆಚ್ಚು ಗುರುತಿಸಿಕೊಂಡಿರುವ ಅಂಬಟಿ 2010ರಲ್ಲಿ ಮುಂಬೈ ಇಂಡಿಯನ್ಸ್ ತಂಡದಿಂದ ಐಪಿಎಲ್ಗೆ ಪಾದಾರ್ಪಣೆ ಮಾಡಿದರು. ಈವರೆಗೂ ಸುಮಾರು 147 ಐಪಿಎಲ್ ಪಂದ್ಯಗಳನ್ನು ರಾಯುಡು ಆಡಿದ್ದಾರೆ.
ಕಾಲೇಜು ಗೆಳತಿ ಚೆನ್ನುಪಲ್ಲಿ ವಿದ್ಯಾ ಅವರನ್ನು 2009ರ ಫೆಬ್ರವರಿ14ರಂದು ಹೈದರಾಬಾದಿನಲ್ಲಿ ಅಂಬಟಿ ರಾಯುಡು ವರಿಸಿದ್ದರು.