-ಆರು ಜನ ಕೋವಿಡ್ ಆಸ್ಪತ್ರೆ ಸಿಬ್ಬಂದಿಗೆ ತಗುಲಿದ ಸೋಂಕು
ರಾಯಚೂರು: ಜಿಲ್ಲೆಯಲ್ಲಿ ಆರು ಜನ ಕೋವಿಡ್ ಆಸ್ಪತ್ರೆ ಸಿಬ್ಬಂದಿ ಸೇರಿ ಇಂದು 14 ಜನರಲ್ಲಿ ಕೊರೊನಾ ಪಾಸಿಟಿವ್ ಧೃಡವಾಗಿದೆ. ಈ ಮೂಲಕ ಜಿಲ್ಲೆಯ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 375 ಕ್ಕೇರಿದೆ ಅಂತ ರಾಯಚೂರು ಜಿಲ್ಲಾಧಿಕಾರಿ ವೆಂಕಟೇಶ ಕುಮಾರ ತಿಳಿಸಿದ್ದಾರೆ.
Advertisement
ಕೊರೊನಾ ಪಾಸಿಟಿವ್ ಧೃಡವಾದ 60 ವರ್ಷದ ವೃದ್ಧ ಸಾವನ್ನಪ್ಪಿದ್ದು, ಕೊರೊನಾದಿಂದ ಅಲ್ಲ ಅಂತ ಜಿಲ್ಲಾಧಿಕಾರಿ ಹೇಳಿದ್ದಾರೆ. ಮೃತ ವ್ಯಕ್ತಿ ಹೃದಯ, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಜೂನ್ 9 ರಂದು ಸಾವನ್ನಪ್ಪಿದ್ದಾನೆ. ವ್ಯಕ್ತಿ ಸಾವಿಗೆ ಕೊರೊನಾ ಸೋಂಕು ಹೊರತಾದ ಕಾರಣಗಳಿವೆ ಅಂತ ಹೇಳಿದ್ದಾರೆ.
Advertisement
ಇಂದು ನಾಲ್ಕು ಜನ ಕೋವಿಡ್ ಆಸ್ಪತ್ರೆ ಓಪೆಕ್ ನ ಸ್ಟಾಫ್ ನರ್ಸ್ ಇಬ್ಬರು ಅಟೆಂಡರ್ ಗೆ ಪಾಸಿಟಿವ್ ಧೃಡವಾಗಿದೆ. ಸೋಂಕಿತ ರೋಗಿಗಳ ಸಂಪರ್ಕದಿಂದ ಜಿಲ್ಲೆಯ ಇಬ್ಬರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಐದು ಜನ ಮಹಾರಾಷ್ಟ್ರದಿಂದ ಮರಳಿದವರು ಹಾಗೂ ಒಬ್ಬರು ತೀವ್ರ ಉಸಿರಾಟ ತೊಂದರೆ ಇರುವವರಿಗೆ ಪಾಸಿಟಿವ್ ಬಂದಿದೆ.
Advertisement
Advertisement
6 ಜನ ಆಸ್ಪತ್ರೆ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವುದು ಜಿಲ್ಲೆಯಲ್ಲಿ ಆತಂಕ ಹೆಚ್ಚಿಸಿದೆ. ಕೋವಿಡ್ ವಾರ್ಡ್ ನಲ್ಲಿ ಕರ್ತವ್ಯ ನಿರ್ವಹಿಸಿದ ನಂತರ ರಿಮ್ಸ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಹಾಸ್ಪಿಟಲ್ ಸಿಬ್ಬಂದಿ ತುಂಬಾ ಜನರನ್ನ ಸಂಪರ್ಕಿಸಿದ್ದಾರೆ. ಇನ್ನೂ ಕೊರೊನಾ ಪಾಸಿಟಿವ್ ಬಂದವರು ಈವರೆಗೆ ನಾಲ್ಕು ಜನ ಸಾವನ್ನಪ್ಪಿದ್ದಾರೆ. ಆದ್ರೆ ಇದುವರೆಗೆ ಎರಡು ಮಾತ್ರ ಕೋವಿಡ್ ಸಾವು ಅಂತ ಘೋಷಿಸಲಾಗಿದೆ.