– ನಿಷೇಧದ ನಡುವೆಯೂ ಕಲ್ಮಲ ಕರಿಯಪ್ಪ ತಾತನ ಜಾತ್ರೆ
– ಸುಮಾರು ಎರಡು ಕಿ.ಮೀ ವರೆಗೆ ತೆಂಗಿನಕಾಯಿ ಮಾರಾಟ
ರಾಯಚೂರು: ಶ್ರಾವಣ ಮಾಸದ ಕೊನೆ ಸೋಮವಾರ ಹಿನ್ನೆಲೆ ರಾಯಚೂರಿನ ದೇವಾಲಯಗಳಲ್ಲಿ ಭಕ್ತರ ದಂಡೆ ಹರಿದು ಬಂದಿದೆ. ಕಲ್ಮಲದ ಕರಿಯಪ್ಪ ತಾತನ ದೇವಾಲಯಕ್ಕಂತೂ ಕೊರೊನಾ ಸೋಂಕಿನ ಹರಡುವಿಕೆ ಭೀತಿಯನ್ನೂ ಮರೆತು ಸಾವಿರಾರು ಭಕ್ತರು ಬಂದಿದ್ದಾರೆ. ದೇವಾಲಯಕ್ಕೆ ಪ್ರವೇಶ ನಿಷೇಧಿಸಿರುವುದರಿಂದ ದೇವಾಲಯದ ಹೊರಗಡೆ ಸಿಕ್ಕಸಿಕ್ಕಲ್ಲೆ ತೆಂಗಿನಕಾಯಿ ಒಡೆದು ಕೈ ಮುಗಿದು ಹೋಗುತ್ತಿದ್ದಾರೆ.
Advertisement
ದೇವಾಲಯ ಬಳಿ ತೆಂಗಿನಕಾಯಿ ಮಾರಾಟಕ್ಕೆ ಅವಕಾಶ ನೀಡದ ಹಿನ್ನೆಲೆ ಕಲ್ಮಲದಿಂದ ರಾಯಚೂರು ಮಾರ್ಗದಲ್ಲಿ ಸುಮಾರು ಎರಡು ಕಿ.ಮೀವರೆಗೆ ರಸ್ತೆ ಪಕ್ಕ ಕುಳಿತು ತೆಂಗಿನಕಾಯಿ ಮಾರಾಟ ಮಾಡುತ್ತಿದ್ದಾರೆ. ದೇವಾಲಯ ಬಳಿ ಭಕ್ತರು ಗುಂಪುಗುಂಪಾಗಿ ಸೇರುತ್ತಿದ್ದು ಸಾಮಾಜಿಕ ಅಂತರವನ್ನ ಮರೆತಿದ್ದಾರೆ. ಮಾಸ್ಕ್ ಧರಿಸದೇ ಭಕ್ತರು ಬೆಳಗ್ಗೆಯಿಂದ ಬರುತ್ತಲೇ ಇದ್ದಾರೆ. ಇದನ್ನೂ ಓದಿ: ಕೊರೊನಾ ಭೀತಿ ನಡುವೆಯೂ ಜೋರಾಗಿ ನಡೆದ ಜಾತ್ರೆ: ಸಾವಿರಾರು ಭಕ್ತರು ಭಾಗಿ
Advertisement
Advertisement
ಪ್ರತೀ ವರ್ಷ ಕರಿಯಪ್ಪ ತಾತಾನ ಜಾತ್ರೆ ಅದ್ಧೂರಿಯಿಂದ ನಡೆಯುತ್ತಿತ್ತು. ಒಂದು ತಿಂಗಳ ಕಾಲ ನಡೆಯುವ ಜಾತ್ರೆಯ ಮಹಾರಥೋತ್ಸವ ವೇಳೆ ಲಕ್ಷಾಂತರ ಜನ ಭಾಗಿಯಾಗುತ್ತಿದ್ದರು. ಆದ್ರೆ ಈ ವರ್ಷ ಕೊರೊನಾ ಭೀತಿ ಸಂಭ್ರಮಕ್ಕೆ ತೆರೆ ಎಳೆದಿದೆ. ಜಿಲ್ಲಾಡಳಿತ ಜನ ಸೇರುವುದನ್ನ ನಿಷೇಧಿಸಿದ್ದರು ಭಕ್ತರ ದಂಡು ಬರುತ್ತಿದೆ.
Advertisement