Connect with us

Corona

ರಾಮನಗರದಲ್ಲಿ ಇಂದಿನಿಂದ ಜುಲೈ 1ರವರೆಗೂ ಸ್ವಯಂ ಲಾಕ್‍ಡೌನ್

Published

on

ರಾಮನಗರ: ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾಗೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಕೊರೊನಾ ಸೋಂಕು ಭೀತಿಯಲ್ಲಿ ರಾಮನಗರ ಪಟ್ಟಣ ಇಂದಿನಿಂದ ಲಾಕ್‍ಡೌನ್ ಆಗಿದೆ.

ಜಿಲ್ಲೆಯಲ್ಲಿ ಸ್ವಯಂ ಪ್ರೇರಿತವಾಗಿ ಲಾಕ್‍ಡೌನ್ ಘೋಷಣೆ ಮಾಡಲಾಗಿದ್ದು, ಈಗಾಗಲೇ ಜಿಲ್ಲೆಯ ಮಾಗಡಿ ಪಟ್ಟಣ ಮತ್ತು ಕನಕಪುರ ಲಾಕ್‍ಡೌನ್ ಮಾಡಲಾಗಿದೆ. ಇಂದಿನಿಂದ ರಾಮನಗರ ಪಟ್ಟಣ ಕೂಡ ಲಾಕ್‍ಡೌನ್ ಆಗಿದೆ. ಕಳೆದ ದಿನವೇ ಅಂಗಡಿ, ಮುಂಗಟ್ಟುಗಳನ್ನು ವರ್ತಕರು ಬಂದ್ ಮಾಡುವ ಮೂಲಕ ಲಾಕ್‍ಡೌನ್‍ಗೆ ಸ್ವಯಂ ಪ್ರೇರಿತರಾಗಿ ಬೆಂಬಲ ಸೂಚಿಸಿದ್ದಾರೆ.

ಸ್ವಯಂ ಪ್ರೇರಿತವಾಗಿ ಪಟ್ಟಣದ ಜನತೆ ಬಂದ್ ಮಾಡಿದ್ದಾರೆ. ಅಗತ್ಯ ವಸ್ತು ಖರೀದಿಗೆ ಮಾತ್ರ ಅವಕಾಶ ನೀಡಲಾಗಿದೆ. ಜುಲೈ 1 ರವರೆಗೂ ಲಾಕ್‍ಡೌನ್ ವಿಸ್ತರಣೆ ಮಾಡಲಾಗಿದೆ. ಬೆಳಗ್ಗೆ 7 ರಿಂದ 11 ಗಂಟೆಯವರೆಗೂ ಅಂಗಡಿಗಳನ್ನು ತೆರೆಯಲು ಮತ್ತು ಅಗತ್ಯ ವಸ್ತಗಳುಗಳನ್ನ ಖರೀದಿ ಮಾಡಲು ಅವಕಾಶ ನೀಡಲಾಗಿದೆ.

ಮಂಗಳವಾರ ನಡೆದ ಸಭೆಯಲ್ಲಿ ಲಾಕ್‍ಡೌನ್ ಘೋಷಣೆ ಮಾಡಲಾಗಿತ್ತು. ಹೀಗಾಗಿ ಇಂದಿನಿಂದ ರಾಮನಗರದ ಮೂರು ತಾಲೂಕಿನಲ್ಲಿ ಲಾಕ್‍ಡೌನ್ ಮಾಡಲಾಗಿದೆ. ಸಭೆಯಲ್ಲಿ ವರ್ತಕರ ಸಂಘ, ಬಟ್ಟೆ ಅಂಗಡಿ ಮಾಲೀಕರ ಸಂಘ, ಸೇರಿದಂತೆ ಸ್ಥಳೀಯ ಮುಖಂಡರು ಭಾಗಿಯಾಗಿದ್ದರು. ನಗರ ಪ್ರದೇಶದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಮಾಡಲಾಗಿದೆ. ಜುಲೈ 1ರ ವರೆಗೂ ಲಾಕ್‍ಡೌನ್ ವಿಸ್ತರಣೆ ಮಾಡಲಾಗಿದೆ.

Click to comment

Leave a Reply

Your email address will not be published. Required fields are marked *