– ಗೆಳೆಯರೊಂದಿಗೆ ಕ್ರಿಕೆಟ್ ಆಡಿದ್ದ ಯುವಕ
– ಮೂವರನ್ನ ವಶಕ್ಕೆ ಪಡೆದ ಪೊಲೀಸರು
ಪಾಟ್ನಾ: ರಾಡ್ನಿಂದ ಹೊಡೆದು ಅರೆಜೀವದಲ್ಲಿರುವಾಗ ಯುವಕ ಮರ್ಮಾಂಗ ಕತ್ತರಿಸಿ ನಂತರ ಕತ್ತು ಕೊಯ್ದು ಕೊಲೆಗೈದಿರುವ ಭಯಾನಕ ಘಟನೆ ಬಿಹಾರದ ಮುಝಫರ್ ನಗರದ ಮನುಷ್ಯಮಾರಾ ನದಿ ಬಳಿ ನಡೆದಿದೆ. ಶನಿವಾರ ಸಂಜೆ ಹೋಗಿದ್ದ ಯುವಕ ಭಾನುವಾರ ಬೆಳಗ್ಗೆ ಗ್ರಾಮದ ಹೊರ ವಲಯದಲ್ಲಿರುವ ಶೌಚಾಲಯದ ಬಳಿ ಶವವಾಗಿ ಪತ್ತೆಯಾಗಿದ್ದಾನೆ.
ಜಾಫರ್ಪುರ ಗ್ರಾಮದ ಸುಹೈಲ್ (18) ಮೃತ ಯುವಕ. ಸುಹೈಲ್ ಶವ ಸಿಗುತ್ತಿದ್ದಂತೆ ಸ್ಥಳೀಯರು ಪೊಲೀಸರು ಮತ್ತು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು. ತಡವಾಗಿ ಸ್ಥಳಕ್ಕಾಗಮಿಸಿದ ಪೊಲೀಸರು ಶವವನ್ನ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನ ಆಸ್ಪತ್ರೆಗೆ ರವಾನಿಸಲು ಸಿದ್ಧರಾಗಿದ್ದರು. ಆದ್ರೆ ಗ್ರಾಮಸ್ಥರು ಸ್ಥಳಕ್ಕೆ ಶ್ವಾನದಳ ಕರೆಸಿ ಪರಿಶೀಲನೆ ನಡೆಸಬೇಕೆಂದು ಆಗ್ರಹಿಸಿದರು.
ಗ್ರಾಮಸ್ಥರು ಆಕ್ರೋಶ ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಶ್ವಾನದಳ ಕರೆಸಿದ್ದಾರೆ. ಆದ್ರೆ ಶ್ವಾನಗಳು ಪಕ್ಕದ ನದಿಯ ಬಳಿ ಹೋಗಿ ನಿಂತಿವೆ. ಕೊನೆಗೆ ಪೊಲೀಸರು ಕೊಲೆಗೆ ಮೃತದೇಹವನ್ನ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಕೊಲೆ ನಡೆದ ಸ್ಥಳದಲ್ಲಿ ಸಿಕ್ಕಿ ರಾಡ್ ಸಹ ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.
ಸಂಜೆಯವರೆಗೂ ಮನೆಯಲ್ಲಿದ್ದ: ಕ್ರಿಕೆಟ್ ಆಡಿ ಬಂದಿದ್ದ ಸುಹೈಲ್ ಸಂಜೆ ಏಳು ಗಂಟೆವರೆಗೂ ಮನೆಯಲ್ಲಿದ್ದನು. 7 ಗಂಟೆ ನಂತರ ಸುಹೈಲ್ ಹೊರಗೆ ಹೋಗಿದ್ದನು. ಊಟಕ್ಕೆ ಕರೆದಾಗಲೂ ಆತ ಮನೆಯಲ್ಲಿ ಇರಲಿಲ್ಲ. ತಡರಾತಿಯಾದರು ಮನೆಗೆ ಬಾರದಿದ್ದಾಗ ಹುಡುಕಾಟ ನಡೆಸಲಾಗಿತ್ತು. ಬೆಳಗ್ಗೆ ಗ್ರಾಮಸ್ಥರು ಶವ ಶೌಚಾಲಯದ ಕಟ್ಟಡದ ಕೆಳಗೆ ಪತ್ತೆಯಾಗಿರುವ ಬಗ್ಗೆ ಹೇಳಿದಾಗ ಕೊಲೆಯ ವಿಷಯ ತಿಳಿಯಿತು ಎಂದು ಸುಹೈಲ್ ಸಂಬಂಧಿ ಹೈದರ್ ಹೇಳಿದ್ದಾರೆ.
ಮೂವರು ಪೊಲೀಸರ ವಶಕ್ಕೆ: ಸುಹೈಲ್ ದೇಹದ ಮೇಲೆ ರಾಡ್ ನಿಂದ ಬಲವಾಗಿ ಹೊಡೆದಿರುವ ಗುರುತುಗಳು ಪತ್ತೆಯಾಗಿವೆ. ರಾಡ್ ನಿಂದ ಹಲವು ಬಾರಿ ಹೊಡೆದಿದ್ದಾರೆ. ನಂತರ ಹರಿತವಾದ ವಸ್ತುವಿನಿಂದ ಮರ್ಮಾಂಗ ಮತ್ತು ಕತ್ತು ಕತ್ತಿರಿಸಿದ್ದಾರೆ. ತಲೆಯನ್ನ ಸಹ ಒಡೆಯಲಾಗಿದೆ. ಸದ್ಯ ಘಟನೆ ಸಂಬಂಧ ಅನುಮಾನಸ್ಪದ ಮೇಲೆ ಮೂವರರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಠಾಣಾ ಅಧಿಕಾರಿ ರಾಕೇಶ್ ಕುಮಾರ್ ತಿಳಿಸಿದ್ದಾರೆ.