ನವದೆಹಲಿ: ಬುಧವಾರ ರಾಜ್ಯಸಭೆಯಲ್ಲಿ ಭಾರೀ ಹೈಡ್ರಾಮಾ ನಡೆದಿತ್ತು. ಈ ವೇಳೆ ಕಾಂಗ್ರೆಸ್ ಸಂಸದರು ಮಹಿಳಾ ಮಾರ್ಷಲ್ಗಳ ಮೇಲೆ ಕೈ ಮಾಡಿರುವ ದೃಶ್ಯ ಬಿಡುಗಡೆಯಾಗಿದೆ.
ನಿನ್ನೆ ಸರ್ಕಾರಿ ಸ್ವಾಮ್ಯದ ವಿಮಾ ಕಂಪನಿಗಳ ಖಾಸಗೀಕರಣಕ್ಕೆ ಅನುಕೂಲ ಮಾಡಿಕೊಡುವ ದಿ ಜನರಲ್ ಇನ್ಶುರೆನ್ಸ್ ಬಿಸಿನೆಸ್ ಬಿಲ್ಗೆ ಗದ್ದಲದ ಮಧ್ಯೆ ಕೇಂದ್ರ ಅನುಮೋದನೆ ಪಡೆದುಕೊಂಡಿತ್ತು. ಇದನ್ನು ಟಿಎಂಸಿ, ಡಿಎಂಕೆ, ಎಡ ಪಕ್ಷಗಳು ತೀವ್ರವಾಗಿ ವಿರೋಧಿಸಿದ್ದವು.
Advertisement
Advertisement
ಈ ಹಂತದಲ್ಲಿ ಮತ್ತೆ ಮೇಜಿನ ಮೇಲೆ ತ್ತಲು ಹೋದ ವಿಪಕ್ಷಗಳನ್ನು ತಡೆಯಲು ಮಾರ್ಷಲ್ಗಳು ಮುಂದಾಗಿದ್ದರು. ಈ ಹಂತದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಈ ವೇಳೆ ವಿಪಕ್ಷ ಕಾಂಗ್ರೆಸ್ನ ಮಹಿಳಾ ಸದಸ್ಯರು, ಮಹಿಳಾ ಮಾರ್ಷಲ್ಗಳ ಮೇಲೆಯೇ ಹಲ್ಲೆ ನಡೆಸಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Advertisement
ಈ ಘಟನೆಯಲ್ಲಿ ಇಬ್ಬರು ಮಾರ್ಷಲ್ ಗಳು ಗಂಭೀರವಾಗಿ ಗಾಯಗೊಂಡಿದ್ದು, ಒಬ್ಬರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಇದು ಪ್ರಜಾಪ್ರಭುತ್ವದ ಅಣಕ. ಇಂತಹ ದೃಶ್ಯ ಎಲ್ಲೂ ಕಂಡಿರಲಿಲ್ಲ. ಇದು ಕರಾಳ ದಿನ. ವಿಪಕ್ಷಗಳಿಗೆ ನಾಚಿಕೆ ಆಗಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ರೈತರಿಗೆ ಪರಿಹಾರದ ಮೊತ್ತ ಹೆಚ್ಚಳಕ್ಕೆ ಮುರುಗೇಶ್ ನಿರಾಣಿ ಮನವಿ
ನಿನ್ನೆ ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ರಾಜ್ಯಸಭಾ ಸದಸ್ಯರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ದೂರಿದ್ದರು.
ಶರದ್ ಪವಾರ್ ಪ್ರತಿಕ್ರಿಯಿಸಿ, ಮಹಿಳಾ ಸದಸ್ಯರ ಮೇಲೆ ಹಲ್ಲೆ ನಡೆಸಲಾಗಿದೆ. ಸದಸ್ಯರನ್ನು ನಿಯಂತ್ರಣ ಮಾಡಲು ಹೊರಗಡೆಯಿಂದ 40ಕ್ಕೂ ಹೆಚ್ಚು ಮಾರ್ಷಲ್ ಗಳು ಬಂದಿದ್ದರು ಎಂದು ಹೇಳಿದ್ದಾರೆ.