-ಬೆಂಗಳೂರಿನಲ್ಲಿ 45 ಮಂದಿ ಕೊರೊನಾಗೆ ಬಲಿ
-ಸಿಲಿಕಾನ್ ಸಿಟಿಯಲ್ಲಿ ರಾಕೆಟ್ ವೇಗ ಪಡೆದ ಕೋವಿಡ್
ಬೆಂಗಳೂರು: ರಾಜ್ಯದಲ್ಲಿಂದು ಸಹ ಮಹಾಮಾರಿ ಕೊರೊನಾ ವೈರಸ್ ತನ್ನು ರುದ್ರ ನರ್ತನವನ್ನು ಮುಂದುವರಿಸಿದೆ. ಇಂದು ಒಂದೇ ದಿನ 2,627 ಕೊರೊನ ಪ್ರಕರಣಗಳು ಕರುನಾಡಿನಲ್ಲಿ ವರದಿಯಾಗಿವೆ. ಇಂದು 71 ಜನ ಕೋವಿಡ್-19 ಸೋಂಕಿನಿಂದ ಮೃತಪಟ್ಟಿದ್ದಾರೆ.
Advertisement
ಉದ್ಯಾನ ನಗರಿ ಬೆಂಗಳೂರಿನಲ್ಲಿ ಇಂದು 1,525 ಜನರಲ್ಲಿ ಸೋಂಕು ಸೇರಿಕೊಂಡಿದೆ. ಇಂದು ಬೆಂಗಳೂರಿನಲ್ಲಿ 206 ಜನರು ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ್ರೆ ನಗರದಲ್ಲಿ 14,067 ಸಕ್ರಿಯ ಪ್ರಕರಣಗಳಿವೆ. ಇಂದು ಬೆಂಗಳೂರಿನಲ್ಲಿ ಒಂದೇ ದಿನ 45 ಜನರನ್ನು ಕೊರೊನಾ ರಾಕ್ಷಸಿ ಬಲಿ ಪಡೆದಿದೆ.
Advertisement
Advertisement
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬೆಂಗಳೂರು ನಗರ 1,525, ದಕ್ಷಿಣ ಕನ್ನಡ 196, ಧಾರವಾಡ 129, ಯಾದಗಿರಿ 120, ಕಲಬುರಗಿ 79, ಬಳ್ಳಾರಿ 63, ಬೀದರ್ 62, ರಾಯಚೂರು 48, ಉಡುಪಿ 43, ಮೈಸೂರು 42, ಶಿವಮೊಗ್ಗ 42, ಚಿಕ್ಕಬಳ್ಳಾಪುರ 39, ಹಾಸನ 31, ಕೊಪ್ಪಳ 27, ತುಮಕೂರು 26, ಕೋಲಾರ 24, ದಾವಣಗೆರೆ 20, ಬೆಂಗಳೂರು ಗ್ರಾಮಾಂತರ 19, ಕೊಡಗು 15, ಗದಗ 14, ಚಾಮರಾಜನಗರ 13, ಉತ್ತರ ಕನ್ನಡ 12, ಹಾವೇರಿ 12, ಚಿಕ್ಕಮಗಳೂರು 10, ಬಾಗಲಕೋಟೆ 7, ಮಂಡ್ಯ 4, ರಾಮನಗರ 3 ಮತ್ತು ಬೆಳಗಾವಿಯಲ್ಲಿ 2 ಪ್ರಕರಣಗಳು ಬೆಳಕಿಗೆ ಬಂದಿವೆ.
Advertisement
2627 Covid cases were reported in the state today out of which 1525 cases are in Bengaluru. With 693 recoveries across the state and 206 in Bengaluru, state's fatality rate stands at 1.76% & 1.47% in Bengaluru. 20,105 tests were conducted across Karnataka today.@CMofKarnataka pic.twitter.com/wJJGO4PhFt
— Dr Sudhakar K (@mla_sudhakar) July 12, 2020
ರಾಜ್ಯದಲ್ಲಿ ಇಂದು 693 ಮಂದಿ ಡಿಸ್ಚಾರ್ಜ್ ಆಗಿದ್ದು, ಒಟ್ಟು 22,746 ಸಕ್ರಿಯ ಪ್ರಕರಣಗಳಿವೆ. 532 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.