– ಬೆಂಗಳೂರಿನಲ್ಲಿ ಮೂರಂಕಿಗೆ ಇಳಿದ ಕೋವಿಡ್
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿದ್ದು, ಇಂದು 1,157 ಜನರಿಗೆ ಸೋಂಕು ತಗುಲಿದೆ. ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಮೂರಂಕಿಗೆ ಇಳಿಕೆಯಾದ್ರೆ ರಾಜ್ಯದ 12 ಜಿಲ್ಲೆಗಳಲ್ಲಿ ಒಂದಂಕಿಗೆ ಇಳಿಕೆ ಕಂಡಿದೆ.
Advertisement
ಇಂದು ಕೊರೊನಾದಿಂದ ಗುಣಮುಖರಾಗಿ 2,118 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಕೊರೊನಾ ಒಟ್ಟು ಸೋಂಕಿತರ ಸಂಖ್ಯೆ 8,62,804ಕ್ಕೆ ಏರಿಕೆಯಾಗಿದ್ದು, 26,103 ಸಕ್ರಿಯ ಪ್ರಕರಣಗಳಿವೆ. ಇಂದು ಕೊರೊನಾದಿಂದ 12 ಸೋಂಕಿತರು ಪ್ರಾಣ ಕಳೆದುಕೊಂಡಿದ್ದು, ಸಾವನ್ನಪ್ಪಿದವರ ಸಂಖ್ಯೆ 11,541ಕ್ಕೆ ಏರಿಕೆಯಾಗಿದೆ.
Advertisement
Advertisement
ರಾಜ್ಯದಲ್ಲಿ 730 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕೋವಿಡ್-19 ಸೋಂಕಿನ ಖಚಿತ ಪ್ರಕರಣಗಳ ಸಂಖ್ಯೆ ಶೇ.1.51 ಮತ್ತು ಮರಣ ಪ್ರಮಾಣ ಶೇ.1.04ರಷ್ಟಿದೆ. ಸಿಲಿಕಾನ್ ಸಿಟಿಯಲ್ಲಿಂದು 597 ಮಂದಿಗೆ ಸೋಂಕು ತಗುಲಿದ್ದು, 17,929 ಸಕ್ರಿಯ ಪ್ರಕರಣಗಳಿವೆ. ಇಂದು ಬೆಂಗಳೂರಿನಲ್ಲಿ ಆರು ಜನರನ್ನು ಕೊರೊನಾ ಬಲಿ ಪಡೆದುಕೊಂಡಿದೆ.
Advertisement
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 6 ಬಳ್ಳಾರಿ 15, ಬೆಳಗಾವಿ 29, ಬೆಂಗಳೂರು ಗ್ರಾಮಾಂತರ 46, ಬೆಂಗಳೂರು ನಗರ 597, ಬೀದರ್ 9, ಚಾಮರಾಜನಗರ 6, ಚಿಕ್ಕಬಳ್ಳಾಪುರ 26, ಚಿಕ್ಕಮಗಳೂರು 17, ಚಿತ್ರದುರ್ಗ 16, ದಕ್ಷಿಣ ಕನ್ನಡ 50, ದಾವಣಗೆರೆ 22, ಧಾರವಾಡ 5, ಗದಗ 9, ಹಾಸನ 52, ಹಾವೇರಿ 4, ಕಲಬುರಗಿ 21, ಕೊಡಗು 2, ಕೋಲಾರ 9, ಕೊಪ್ಪಳ 2, ಮಂಡ್ಯ 56, ಮೈಸೂರು 64, ರಾಯಚೂರು 15, ರಾಮನಗರ 7, ಶಿವಮೊಗ್ಗ 4, ತುಮಕೂರು 15, ಉಡುಪಿ 10, ಉತ್ತರ ಕನ್ನಡ 19, ವಿಜಯಪುರ 19 ಮತ್ತು ಯಾದಗಿರಿಯಲ್ಲಿ 5 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.