ಬೆಂಗಳೂರು: ಕರ್ನಾಟಕದಲ್ಲಿ ಒಂದೇ ದಿನ ಕೊರೋನಾ ಸ್ಫೋಟಗೊಂಡಿದ್ದು, ಇವತ್ತು ಒಂದೇ ದಿನ 149 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತ ಸಂಖ್ಯೆ 1,395ಕ್ಕೇರಿದೆ.
ಇಂದು ಬೆಳಗ್ಗೆ ಬಿಡುಗಡೆಯಾದ ಬುಲೆಟಿನ್ ನಲ್ಲಿ 127 ಮಂದಿಗೆ ಸೋಂಕು ತಗುಲಿರೋದು ದೃಢಪಟ್ಟಿತ್ತು. ಸಂಜೆಯ ಬುಲೆಟಿನ್ ನಲ್ಲಿ ಈ ಸಂಖ್ಯೆ 149ಕ್ಕೆ ಏರಿದೆ. ಇದರೊಂದಿಗೆ ಸದ್ಯ ರಾಜ್ಯದಲ್ಲಿ 811 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದರೆ, 543 ಮಂದಿ ಕೊರೊನಾದಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೂ 40 ಮಂದಿ ಕೋವಿಡ್ಗೆ ಬಲಿಯಾಗಿದ್ದು, 6 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement
Advertisement
ರಾಜ್ಯದಲ್ಲಿ ಒಟ್ಟು 23,187 ಮಂದಿ ಸೋಂಕಿನ ಶಂಕಿತರ ಮೇಲೆ ನಿಗಾ ವಹಿಸಲಾಗಿದೆ. ಮಂಡ್ಯ 71, ದಾವರಣಗೆರೆ 22, ಕಲಬುರಗಿ 13, ಶಿವಮೊಗ್ಗ 10, ಬೆಂಗಳೂರು 6, ಚಿಕ್ಕಮಗಳೂರು 5, ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ತಲಾ 4, ವಿಜಯಪುರ, ಬೀದರ್, ಯಾದಗಿರಿ, ಗದಗ, ರಾಯಚೂರು ಜಿಲ್ಲೆಗಳಲ್ಲಿ ತಲಾ 1 ಕೊರೊನಾ ಪಾಸಿಟಿವ್ ಪ್ರಕರಣ ಇಂದು ವರದಿಯಾಗಿದೆ. ಇದರಲ್ಲಿ 113 ಮಂದಿ ಹೊರ ರಾಜ್ಯದ ಟ್ರಾವೆಲ್ ಹಿಸ್ಟರಿ ಹೊಂದಿದ್ದು, ಮಂಡ್ಯದ 71 ಸೋಂಕಿತರು ಮುಂಬೈ ಹಿನ್ನೆಲೆಯನ್ನು ಹೊಂದಿದ್ದಾರೆ.
Advertisement
ರಾಜ್ಯಕ್ಕೆ ಮೇ 16ರಿಂದ ಇದುವರೆಗೂ 5 ರೈಲುಗಳು ಆಗಮಿಸಿದ್ದು, ದೆಹಲಿಯಿಂದ ಬೆಂಗಳೂರಿಗೆ ಕಳೆದ ಐದು ದಿನಗಳಲ್ಲಿ 1,527 ಮಂದಿ ರೈಲಿನಲ್ಲಿ ಆಗಮಿಸಿದ್ದಾರೆ. ಇದರೊಂದಿಗೆ ಕರ್ನಾಟಕ್ಕೆ ಮುಂಬೈನಿಂದ ಆಗಮಿಸಿದವರು ಬಹುದೊಡ್ಡ ಅಘಾತವನ್ನು ನೀಡಿದ್ದಾರೆ. ರಾಜ್ಯದಲ್ಲಿ ಮೂರು ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ರೋಗಿ ಸಂಖ್ಯೆ 1,185, 61 ವರ್ಷದ ಪುರುಷ, ಬಳ್ಳಾರಿ ಜಿಲೆಯ ನಿವಾಸಿಯಾಗಿದ್ದು, ತೀವ್ರ ಉಸಿರಾಟದ ತೊಂದರೆಯಿದ್ದು, ಬೆಂಗಳೂರಿಗೆ ಪ್ರಯಾಣ ಮಾಡಿರುವ ಹಿನ್ನಲೆ ಹೊಂದಿದ್ದರು. ಐ.ಹೆಚ್.ಡಿ. ಕೇಸ್ನೊಂದಿಗೆ, ಇತ್ತೀಚಿಗೆ ಹೃದಯ ಶಸ್ತ್ರ ಚಿಕಿತ್ಸತೆಗೆ ಒಳಪಟ್ಟಿದ್ದರು. ಮೇ 19 ರಂದು ಬಳ್ಳಾರಿಯ ಜಿಲ್ಲೆಯ ನಿಗಧಿತ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಇಂದು ನಿಧನ ಹೊಂದಿದ್ದಾರೆ. ಕೋವಿಡ್ ಪರೀಕ್ಷೆಯ ಬಳಿಕ ಅವರಿಗೆ ಪಾಸಿಟಿವ್ ಎಂದು ದೃಢಪಟ್ಟಿತ್ತು.
Advertisement
ರೋಗಿ ಸಂಖ್ಯೆ 1,291, 65 ವರ್ಷದ ಪುರುಷ, ವಿಜಯಪುರ ಜಿಲ್ಲೆಯ ನಿವಾಸಿಯಾಗಿದ್ದು, ಹೆಚ್.ಟಿ.ಎನ್., ಡಿ.ಎಂ. ಮತ್ತು ಐ.ಹೆಚ್.ಡಿ. ಯಿಂದ ಬಳಲುತ್ತಿದ್ದರು. ಮೇ 18 ರಂದು ಸಾವನ್ನಪ್ಪಿದ್ದ ನಂತರ ವಿಜಯಪುರ ಜಿಲ್ಲೆಯ ನಿಗಧಿತ ಆಸ್ಪತ್ರೆಗೆ ಕರೆ ತಂದಿದ್ದರು. ಕೋವಿಡ್ ಪರೀಕ್ಷೆಯ ಪಲಿತಾಂಶವು ಪಾಸಿಟಿವ್ ಎಂದು ದೃಢಪಟ್ಟಿತ್ತು. ರೋಗಿ ಸಂಖ್ಯೆ 1,364, 54 ವರ್ಷದ ಪುರುಷ ಬೆಂಗಳೂರು ನಗರದ ನಿವಾಸಿಯಾಗಿದ್ದು, ಐ.ಹೆಚ್.ಡಿ. ಯಿಂದ ಬಳಲುತ್ತಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಮೇ 18ರಂದು ಇವರು ಮರಣ ಹೊಂದಿದ್ದು, ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಎಂದು ದೃಢಪಟ್ಟಿರುತ್ತದೆ.
128. ರೋಗಿ- 1374: ಬೀದರ್ ನ 2 ವರ್ಷ 6 ತಿಂಗಳ ಗಂಡು ಮಗು- ರೋಗಿ 939ರ ಸಂಪರ್ಕ
129. ರೋಗಿ- 1375: ರಾಯಚೂರಿನ 29 ವರ್ಷದ ಯುವತಿ- ಸೋಲಾಪುರ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
130. ರೋಗಿ- 1376: ಕಲಬುರಗಿಯ 6 ವರ್ಷದ ಬಾಲಕಿ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
131. ರೋಗಿ- 1377: ಕಲಬುರಗಿಯ 35 ವರ್ಷದ ಯುವತಿ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
132. ರೋಗಿ- 1378: ದಾವಣಗೆರೆಯ 69 ವರ್ಷದ ಯುವಕ- ಜಿಲ್ಲೆಯ ಕಂಟೈನ್ಮೆಂಟ್ ಝೋನ್ ಗೆ ಭೇಟಿ
133. ರೋಗಿ- 1379: ಮಂಡ್ಯದ 36 ವರ್ಷದ ಯುವತಿ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
134. ರೋಗಿ- 1380: ಮಂಡ್ಯದ 30 ವರ್ಷದ ಯುವಕ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
135. ರೋಗಿ- 1381: ಮಂಡ್ಯದ 26 ವರ್ಷದ ಯುವಕ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
136. ರೋಗಿ- 1382: ಮಂಡ್ಯದ 13 ವರ್ಷದ ಬಾಲಕಿ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
137. ರೋಗಿ- 1383: ಮಂಡ್ಯದ 48 ವರ್ಷದ ವ್ಯಕಿ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
138. ರೋಗಿ- 1384: ಮಂಡ್ಯದ 20 ವರ್ಷದ ಯುವಕ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
139. ರೋಗಿ- 1385: ಮಂಡ್ಯದ 17 ವರ್ಷದ ಹುಡುಗಿ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
140. ರೋಗಿ- 1386: ಮಂಡ್ಯದ 37 ವರ್ಷದ ಮಹಿಳೆ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
140. ರೋಗಿ -1386: ಮಂಡ್ಯ ಜಿಲ್ಲೆಯ 37 ವರ್ಷದ ಮಹಿಳೆ, ಮುಂಬೈ ಪ್ರಯಾಣ ಹಿನ್ನೆಲೆ
141. ರೋಗಿ -1387: ಮಂಡ್ಯ ಜಿಲ್ಲೆಯ 21 ವರ್ಷದ ಪುರುಷ, ಮುಂಬೈ ಪ್ರಯಾಣ ಹಿನ್ನೆಲೆ
142. ರೋಗಿ -1388: ಚಿಕ್ಕಮಗಳೂರು ಜಿಲ್ಲೆಯ 7 ವರ್ಷದ ಗಂಡು ಮಗು, ಮುಂಬೈ ಪ್ರಯಾಣ ಹಿನ್ನೆಲೆ
143. ರೋಗಿ -1389: ಚಿಕ್ಕಮಗಳೂರು ಜಿಲ್ಲೆಯ 17 ವರ್ಷದ ಬಾಲಕಿ, ಮುಂಬೈ ಪ್ರಯಾಣ ಹಿನ್ನೆಲೆ
144. ರೋಗಿ 1390: ಚಿಕ್ಕಮಗಳೂರಿನ 10 ವರ್ಷದ ಬಾಲಕ, ಮುಂಬೈ ಪ್ರಯಾಣ ಹಿನ್ನೆಲೆ
145. ರೋಗಿ 1391: ಬಾಗಲಕೋಟೆಯ 38 ವರ್ಷದ ಪುರುಷ, ಕೊಲ್ಲಾಪುರ ಪ್ರಯಾಣ ಹಿನ್ನೆಲೆ
146. ರೋಗಿ 1392: ಬಾಗಲಕೋಟೆಯ 11 ವರ್ಷ ಬಾಲಕಿ, ರೋಗಿ 607ರ ಸಂಪರ್ಕ
147. ರೋಗಿ 1393: ಬಾಗಲಕೋಟೆಯ 40 ವರ್ಷದ ವ್ಯಕ್ತಿ, ರೋಗಿ 607ರ ಸಂಪರ್ಕ
148. ರೋಗಿ 1394: ಬಾಗಲಕೋಟೆಯ 23 ವರ್ಷದ ಯುವಕ, ರೋಗಿ 607ರ ಸಂಪರ್ಕ
149. ರೋಗಿ 1395: ಬಾಗಲಕೋಟೆಯ 43 ವರ್ಷದ ವ್ಯಕ್ತಿ, ರೋಗಿ 607ರ ಸಂಪರ್ಕ