– 93 ಮಂದಿ ಕೊರೊನಾಗೆ ಬಲಿ
ಬೆಂಗಳೂರು: ರಾಜ್ಯದಲ್ಲಿ ಇಂದು 7,330 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 2,71,876ಕ್ಕೆ ಏರಿಕೆಯಾಗಿದೆ.
ಇಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ಪ್ರಕಾರ, 93 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಇಲ್ಲಿಯವರೆಗೆ 4,615 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.
Advertisement
Advertisement
ಇಂದು ರಾಜ್ಯದಲ್ಲಿ 7,626 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 2,71,876 ಸೋಂಕಿತರ ಪೈಕಿ 82,677 ಸಕ್ರಿಯ ಪ್ರಕರಣಗಳಾಗಿದ್ದು, ಆಸ್ಪತ್ರೆಯಿಂದ 1,84,568 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು 727 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement
Advertisement
ಇಂದು 19,618 ರ್ಯಾಪಿಡ್ ಟೆಸ್ಟ್ ನಲ್ಲಿ 39,000 ಆರ್ ಟಿ ಪಿಸಿಆರ್ ಮತ್ತು ಇತರೇ ಪರೀಕ್ಷೆ ಮಾಡಿದ್ದು, ಒಟ್ಟು 58,618 ಮಂದಿಗೆ ಪರೀಕ್ಷೆ ಮಾಡಲಾಗಿದೆ. ಒಟ್ಟು 6,50,720 ಮಂದಿಗೆ ರ್ಯಾಪಿಡ್ ಟೆಸ್ಟ್, 17,22,383 ಮಂದಿಗೆ ಆರ್ ಟಿ ಪಿಸಿಆರ್ ಮತ್ತು ಇತರೇ ಪರೀಕ್ಷೆ ಮಾಡಿದ್ದು ಒಟ್ಟು ಕರ್ನಾಟಕದಲ್ಲಿ 23,73,103 ಮಂದಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ಇಂದು 2,979 ಮಂದಿಗೆ ಸೋಂಕು ದೃಢವಾಗಿದ್ದು, 28 ಮಂದಿ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,05,749 ಏರಿಕೆ ಆಗಿದೆ. ಬಳ್ಳಾರಿ 533, ಬೆಳಗಾವಿ 312, ಬೆಂಗಳೂರು ನಗರ 2,979, ದಕ್ಷಿಣ ಕನ್ನಡ 228, ದಾವಣಗೆರೆ 277, ಧಾರವಾಡ 253, ಹಾಸನ 209, ಶಿವಮೊಗ್ಗ 221 ಹಾಗೂ ಉಡುಪಿಯ 348 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಇಂದು ಒಟ್ಟು 9 ಜಿಲ್ಲೆಯಲ್ಲಿ 200ಕ್ಕಿಂತ ಹೆಚ್ಚು ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
ಬಾಗಲಕೋಟೆ 122, ಬಳ್ಳಾರಿ 522, ಬೆಳಗಾವಿ 511, ಬೆಂಗಳೂರು ಗ್ರಾಮಾಂತರ 45, ಬೆಂಗಳೂರು ನಗರ 3,259, ಬೀದರ್ 144, ಚಾಮರಾಜನಗರ 71, ಚಿಕ್ಕಬಳ್ಳಾಪುರ 17, ಚಿಕ್ಕಮಗಳೂರು 51, ಚಿತ್ರದುರ್ಗ 154, ದಕ್ಷಿಣ ಕನ್ನಡ 320, ದಾವಣಗೆರೆ 349, ಧಾರವಾಡ 121, ಹಾಸನ 245, ಹಾವೇರಿ 47, ಕಲಬುರಗಿ 198, ಕೊಡಗು 64, ಕೋಲಾರ 70, ಕೊಪ್ಪಳ 225, ಮಂಡ್ಯ 72, ಶಿವಮೊಗ್ಗ 130, ರಾಯಚೂರು 200, ರಾಮನಗರ 48, ತುಮಕೂರು 79, ಉಡುಪಿ 235, ಉತ್ತರ ಕನ್ನಡ 70, ವಿಜಯಪುರ 130, ಯಾದಗಿರಿಯಲ್ಲಿ 34 ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಇಂದಿನ 22/08/2020 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.@CMofKarnataka @BSYBJP @DVSadanandGowda @SureshAngadi_ @MoHFW_INDIA @UNDP_India @WHOSEARO @UNICEFIndia @sriramulubjp @drashwathcn @BSBommai https://t.co/neUDyQ02wH pic.twitter.com/7KsjECE4Ps
— K'taka Health Dept (@DHFWKA) August 22, 2020