ಬೆಂಗಳೂರು: ರಾಜ್ಯದಲ್ಲಿಂದು 3,652 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 24 ಸೋಂಕಿತರನ್ನ ಹೆಮ್ಮಾರಿ ಬಲಿ ಪಡೆದುಕೊಂಡಿದೆ.
Advertisement
ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 8,27,064ಕ್ಕೆ ಏರಿಕೆಯಾಗಿದ್ದು, 50,592 ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿವೆ. ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 11,192ಕ್ಕೆ ಏರಿಕೆಯಾಗಿದ್ದು, 935 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.3.42 ಮತ್ತು ಮರಣ ಪ್ರಮಾಣ ಶೇ.0.65ರಷ್ಟಿದೆ.
Advertisement
Advertisement
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 20, ಬಳ್ಳಾರಿ 63, ಬೆಳಗಾವಿ 41, ಬೆಂಗಳೂರು ಗ್ರಾಮಾಂತರ 80, ಬೆಂಗಳೂರು ನಗರ 2,167, ಬೀದರ್ 5, ಚಾಮರಾಜನಗರ 25, ಚಿಕ್ಕಬಳ್ಳಾಪುರ 20, ಚಿಕ್ಕಮಗಳೂರು 43, ಚಿತ್ರದುರ್ಗ 65, ದಕ್ಷಿಣ ಕನ್ನಡ 99, ದಾವಣಗೆರೆ 47, ಧಾರವಾಡ 40, ಗದಗ 18, ಹಾಸನ 144, ಹಾವೇರಿ 20, ಕಲಬುರಗಿ 44, ಕೊಡಗು 33, ಕೋಲಾರ 60, ಕೊಪ್ಪಳ 27, ಮಂಡ್ಯ 46, ಮೈಸೂರು 147, ರಾಯಚೂರು 12, ರಾಮನಗರ 12, ಶಿವಮೊಗ್ಗ 73, ತುಮಕೂರು 104, ಉಡುಪಿ 47, ಉತ್ತರ ಕನ್ನಡ 52, ವಿಜಯಪುರ 87 ಮತ್ತು ಯಾದಗಿರಿಯಲ್ಲಿ 11 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.
Advertisement