-ಬೆಂಗ್ಳೂರಿನಲ್ಲಿ 28, ಉಡುಪಿ 73
ಬೆಂಗಳೂರು: ಭಾನುವಾರ ದಾಖಲೆ ಬರೆದಿದ್ದ ಕೊರೊನಾ ವೈರಸ್ ಇಂದು ಸೆಂಚುರಿ ಬಾರಿಸಿದೆ. ಇವತ್ತು 187 ಮಂದಿಗೆ ಕೊರೊನಾ ತಗುಲಿದ್ದು, ಸೋಂಕಿತರ ಸಂಖ್ಯೆ 3408ಕ್ಕೇರಿಕೆಯಾಗಿದೆ. ಇಂದು ಪತ್ತೆಯಾದ ಬಹುತೇಕ ಸೋಂಕಿತರು ಅಂತಾರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ.
Advertisement
ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಬುಲೆಟಿನ್ ಪ್ರಕಾರ, ಬೆಂಗಳೂರು 28, ಕಲಬುರಗಿ 24, ಮಂಡ್ಯ 15, ಉಡುಪಿ 73, ಹಾಸನ 16, ಬೀದರ್ 2, ಚಿಕ್ಕಬಳ್ಳಾಪುರ 5, ದಕ್ಷಿಣ ಕನ್ನಡ 4, ವಿಜಯಪುರ 1, ಬಾಗಲಕೋಟೆ 2, ಬಳ್ಳಾರಿ 3, ಶಿವಮೊಗ್ಗ 9, ಧಾರವಾಡ 2, ಕೋಲಾರ 1, ಹಾವೇರಿ 1 ಮತ್ತು ರಾಮನಗರದಲ್ಲಿ 1 ಪ್ರಕರಣ ಕಂಡು ಬಂದಿದೆ.
Advertisement
Advertisement
ಇಂದು ಕೊರೊನಾದಿಂದ ಗುಣಮುಖರಾಗಿ 110 ಮಂದಿ ಕೋವಿಡ್-19 ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಒಟ್ಟು 3408 ಕೊರೊನಾ ಸೋಂಕಿತರ ಪೈಕಿ 2026 ಸಕ್ರಿಯ ಪ್ರಕರಣಗಳಿವೆ. ಇದುವರೆಗೂ ರಾಜ್ಯದಲ್ಲಿ ಕೊರೊನಾದಿಂದ 52 ಮಂದಿ ಸಾವನ್ನಪ್ಪಿದ್ದಾರೆ.
Advertisement
ಬೆಂಗಳೂರಿನ 90 ವರ್ಷದ ವೃದ್ಧ (ರೋಗಿ 492) ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ವೃದ್ಧ ರೋಗಿ 419ರ ದ್ವಿತೀಯ ಸಂಪರ್ಕದಲ್ಲಿದ್ದರು. ಏಪ್ರಿಲ್ 24ರಂದು ಕೋವಿಡ್-19 ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಬಹು ಅಂಗಾಂಗ ವೈಫಲ್ಯದಿಂದ ಮೇ 31ರಂದು ನಿಧನರಾಗಿದ್ದಾರೆ.