ಬೆಂಗಳೂರು: ರಾಜೀನಾಮೆ ನೀಡಲು ಮುಂದಾಗಿರುವ ಸಚಿವ ಆನಂದ್ ಸಿಂಗ್ ಅವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕರೆಗೂ ಡೋಂಟ್ ಕೇರ್ ಅಂದಿದ್ದಾರೆ.
ಹೌದು. ಖಾತೆ ಕ್ಯಾತೆ ಸಂಬಂಧ ಬೊಮ್ಮಾಯಿ ಕರೆ ಮಾಡಿದ್ರೂ ಆನಂದ್ ಸಿಂಗ್ ಮಾತ್ರ ಫೋನ್ ಸ್ವೀಕರಿಸುತ್ತಿಲ್ಲ. ಈ ಮೂಲಕ ಸಚಿವರು ಸಿಎಂ ಅವರ ಸಂಪರ್ಕಕ್ಕೆ ಸಿಗುತ್ತಿಲ್ಲ. ಖಾತೆ ಬದಲಾಯಿಸದ ಹಿನ್ನೆಲೆಯಲ್ಲಿ ಸಚಿವರು ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
Advertisement
Advertisement
ಸಿಎಂ ಬೊಮ್ಮಾಯಿ ಮೇಲೆ ಮುನಿಸಿಕೊಂಡಿರುವ ಆನಂದ್ ಸಿಂಗ್ ಅವರ ಕುಟುಂಬಸ್ಥರ ಮೊಬೈಲ್‍ಗೆ ಕರೆ ಮಾಡಿದ್ರೂ ಸ್ವೀಕರಿಸಿದೆ ತಮ್ಮ ಸಿಟ್ಟು ಹೊರಹಾಕುತ್ತಿದ್ದಾರೆ. ಇದನ್ನೂ ಓದಿ: ಕಚೇರಿಯ ಬೋರ್ಡ್ ತೆರವು – ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡ್ತಾರಾ ಆನಂದ್ ಸಿಂಗ್?
Advertisement
ಒಟ್ಟಿನಲ್ಲಿ ಬಿಜೆಪಿ ಸರ್ಕಾರದಲ್ಲಿ ಖಾತೆ ಕ್ಯಾತೆ ಭುಗಿಲೆದ್ದಿದ್ದು, ಪ್ರಬಲ ಖಾತೆಗೆ ಸಚಿವ ಆನಂದ್ ಸಿಂಗ್ ಪಟ್ಟುಹಿಡಿದಿದ್ದಾರೆ. ತಾನು ಬಯಸಿದ ಖಾತೆ ಸಿಕ್ಕಿಲ್ಲವೆಂದು ಸಚಿವರು ಇದೀಗ ರಾಜೀನಾಮೆಗೆ ಮುಂದಾಗಿದ್ದಾರೆ. ಇದಕ್ಕೆ ಪೂರಕವಾಗಿ ಹೊಸಪೇಟೆಯಲ್ಲಿರುವ ಶಾಸಕರ ಕಚೇರಿ ಬೋರ್ಡ್ ತೆರವುಗೊಳಿಸಿದ್ದಾರೆ. ಕ್ರೇನ್ ಬಳಸಿ ಕಚೇರಿಯ ಬೋರ್ಡ್ ತೆಗೆಸಿದ ಆನಂದ್ ಸಿಂಗ್, ಸಂಪೂರ್ಣ ಕಚೇರಿ ಬಂದ್ ಮಾಡಲು ಮುಂದಾಗಿದ್ದಾರೆ. ಕಳೆದ 14 ವರ್ಷಗಳಿಂದ ಅಚಿವರು ಈ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
Advertisement
ಬೊಮ್ಮಾಯಿ ಕ್ಯಾಬಿನೆಟ್ ನಲ್ಲಿ ಆನಂದ್ ಸಿಂಗ್ ಅವರು ಇಂಧನ ಅಥವಾ ಲೋಕೋಪಯೋಗಿ ಅಥವಾ ಗಣಿ ಇಲಾಖೆ ಬಯಸಿದ್ದರು. ಆದರೆ ಅವರಿಗೆ ಪ್ರವಾಸೋದ್ಯಮ ಮತ್ತು ಪರಿಸರ ಖಾತೆ ನೀಡಲಾಗಿದ್ದು, ಇದೇ ವಿಚಾರಕ್ಕೆ ಆನಂದ್ ಸಿಂಗ್ ಅವರು ಸಿಟ್ಟಾಗಿದ್ದು, ರಾಜೀನಾಮೆ ನೀಡುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.