ಬೆಂಗಳೂರು: ಭಾರೀ ಮಳೆಯಿಂದಾಗಿ ಕೆಂಗೇರಿ ರಾಜಕಾಲುವೆ ತಡೆಗೋಡೆ ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆ ಜಾಗದಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
Advertisement
ಗುರುವಾರ ಸಂಜೆ ನಗರದಲ್ಲಿ ಭಾರೀ ಮಳೆಯಾಗಿತ್ತು. ಪರಿಣಾಮ ಮೈಸೂರು ರಸ್ತೆಯಲ್ಲಿ ವೃಷಭಾವತಿ ನದಿಯ ತಡೆಗೋಡೆ ಕುಸಿದು ಬಿದ್ದಿತ್ತು. ಇದರಿಂದ ರಾಜಕಾಲುವೆ ನೀರು ರಸ್ತೆ ತುಂಬೆಲ್ಲ ಹರಿದು ವಾಹನ ಸಂಚಾರ ಕೂಡ ಸ್ಥಗಿತ ಗೊಂಡಿತ್ತು. ಈ ಹಿನ್ನೆಲೆಯಲ್ಲಿ ತಡೆಗೋಡೆ ಕುಸಿದ ಜಾಗದಲ್ಲಿ ವಾಹನ ಸಂಚಾರ ನಿಷೇಧಿಸಿದ್ದಾರೆ. ಪೊಲೀಸರು ಸುಮಾರು ಅರ್ಧ ಕಿಲೋಮೀಟರ್ ನಷ್ಟು ರಸ್ತೆಯನ್ನು ಒನ್ ವೇ ಮಾಡಿದ್ದಾರೆ. ಇತ್ತ ಸಿಬ್ಬಂದಿ ರಸ್ತೆ ಮತ್ತು ತಡೆಗೋಡೆ ದುರಸ್ತಿ ಕೆಲಸಕ್ಕೆ ಮುಂದಾಗಿದ್ದಾರೆ.
Advertisement
Advertisement
ನಗರದಾದ್ಯಂತ ನಿನ್ನೆ ಸಂಜೆ ಧಾರಾಕಾರ ಮಳೆಯಾಗಿದ್ದು, ಕೆಂಗೇರಿಯಲ್ಲಿ 65.5 ಮಿಲಿ ಮೀಟರ್ ಮಳೆ ಬಿದ್ದಿತ್ತು. ಭಾರೀ ಮಳೆಗೆ ಸಿಲಿಕಾನ್ ಸಿಟಿ ಮಂದಿ ತತ್ತರಿಸಿ ಹೋಗಿದ್ದರು. ಕೆಂಗೇರಿ ರಸ್ತೆಯಲ್ಲಿ 5 ಅಡಿಯಷ್ಟು ನೀರು ನಿಂತಿತ್ತು. ಬಸ್ ಅರ್ಧ ಮುಳುಗುವಷ್ಟು ನೀರು ತುಂಬಿಕೊಂಡಿದ್ದು, ಕಾರುಗಳು ಮಳೆ ನೀರಿನಲ್ಲಿ ತೇಲಾಡುತ್ತಿದ್ದವು. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದರು.