-ಗೋಹತ್ಯೆ ನಿಷೇಧ ಆಗಬೇಕು
ಚಿಕ್ಕಬಳ್ಳಾಪುರ: ಗೋಹತ್ಯೆ ಮಹಾಪಾಪ. ರಾಕ್ಷಸ ಗುಣವುಳ್ಳವರು ಗೋ ಮಾಂಸ ಸೇವಿಸುತ್ತಾರೆ. ಗೋಹತ್ಯೆ ನಿಷೇಧ ಮಾಡಬೇಕು ಅಂತ ಚಿಕ್ಕಬಳ್ಳಾಪುರದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಚಿಕ್ಕಬಳ್ಳಾಪುರ ನಗರ ಹೊರವಲಯದಲ್ಲಿ ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟದಿಂದ ಆರಂಭವಾದ ನೂತನ ಗೋಶಾಲೆ ಉದ್ಗಾಟಿಸಿ ಮಾತನಾಡಿದರು. ಈ ವೇಳೆ ಗೋವಿನ ಮಹತ್ವದ ಬಗ್ಗೆ ಮಾತನಾಡಿದ ಸಚಿವ ಸುಧಾಕರ್, ಗೋವು ದೈವಸಂಭೂತ. ವಯಸ್ಸು ಇರೋವರಗೂ ತೋಟ ಹೊಲಗಳಲ್ಲಿ ರೈತನ ಪರ ಕೆಲಸ ಮಾಡುತ್ತೆ. ರೈತನ ಬೆನ್ನುಲುಬಾಗಿ ಮನೆ ಮಗನ ತರ ದುಡಿಯುತ್ತೆ. ಆದರೆ ವಯಸ್ಸಾದ ಮೇಲೆ ಅದರಿಂದ ಲಾಭ ಇಲ್ಲ ಅಂತ ತಿಳಿದು ಹಣಕ್ಕಾಗಿ ಕಟುಕರ ಕೈಗೆ ಮಾರಾಟ ಮಾಡುತ್ತಾರೆ. ಅದನ್ನ ದೇಶ ವಿದೇಶಗಳಿಗೆ ಕಳಿಸಿ ಆ ಮಾಂಸವನ್ನು ಮಾರಲಾಗುತ್ತಿದೆ. ಅದು ಈಗ ದೊಡ್ಡ ದಂಧೆ ವಹಿವಾಟಾಗಿದೆ. ಹೀಗಾಗಿ ಗೋ ಮಾಂಸ ರಫ್ತು ನಿಷೇಧ ಮಾಡಬೇಕು ಅನ್ನೋರಲ್ಲಿ ನಾನು ಕೂಡ ಒಬ್ಬ ಎಂದರು.
Advertisement
Advertisement
ಮಾನವರಾಗಿರುವವರು ಭಾರತೀಯ ಸಂಸ್ಕೃತಿಯ ಬಗ್ಗೆ ಗೌರವ ಇರುವಂತಹವರು ಮತ್ತು ನಮ್ಮ ಸಂಪ್ರದಾಯಗಳಲ್ಲಿ ನಂಬಿಕೆಯುಳ್ಳವರು ಗೋ ಮಾಂಸ ಸೇವನೆ ಮಾಡೋದು ಅಂತ್ಯಂತ ಪಾಪದ ಕೆಲಸ. ಹಾಗಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಿಂದಲೇ ಗೋಹತ್ಯೆ ವಿರುದ್ಧ ಆಂದೋಲನಕ್ಕೆ ಕರೆ ಕೊಡೋಣ. ಗೋಮಾಂಸ ಸೇವೆನೆ ಅಪಾಯಕಾರಿ ಮತ್ತುಷ ಅಮಾನವೀಯ. ರಾಕ್ಷಸ ಗುಣಗಳನ್ನು ಹೊಂದಿರುವವರು ಮಾತ್ರ ಗೋ ಮಾಂಸ ಸೇವನೆ ಮಾಡಲು ಸಾಧ್ಯ. ಕಾನೂನಲ್ಲಿ ಅವಕಾಶ ಇದ್ದರೆ ಈ ಕೂಡಲೇ ಗೋಮಾಂಸ ಸೇವನೆ ನಿಷೇಧ ಮಾಡುವಂತೆ ಸಿಎಂ ಯಡಿಯೂರಪ್ಪರಲ್ಲಿ ಮನವಿ ಮಾಡುತ್ತೇನೆ ಎಂದು ತಿಳಿಸಿದರು.
Advertisement