ChitradurgaDistrictsKarnatakaLatestMain Post

ರಮೇಶ್ ಜಾರಕಿಹೊಳಿ ಸಿಡಿ ಕೇಸ್‍ನಿಂದ ಮುಕ್ತರಾದ್ರೆ ಸಚಿವರಾಗ್ತಾರೆ: ಜೆ.ಸಿ.ಮಾಧುಸ್ವಾಮಿ

ಚಿತ್ರದುರ್ಗ: ಸಿಡಿ ಪ್ರಕರಣದಿಂದ ರಮೇಶ್ ಜಾರಕಿಹೊಳಿ ಮುಕ್ತರಾದರೆ ಮತ್ತೆ ಮಂತ್ರಿ ಆಗುತ್ತಾರೆ, ಇದರಲ್ಲಿ ಗೊಂದಲ ಇಲ್ಲ. ಕೇಸ್ ನಿಂದ ಮುಕ್ತರಾದರೆ ಮುಗಿಯಿತು ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.

ಚಿತ್ರದುರ್ಗ ನಗರದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಸಿಡಿ ಕೇಸ್ ತನಿಖೆಯಲ್ಲಿದ್ದು, ಅವರನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸಚಿವರು ತಿಳಿಸಿದರು. ಮಹಾರಾಷ್ಟ್ರ ಮಾಜಿ ಸಿಎಂ ಫಡ್ನವೀಸ್ ಭೇಟಿ ಮಾಡುವುದರಿಂದ ತಪ್ಪೇನು ಇಲ್ಲ. ಬೆಳಗಾವಿ ಹಾಗೂ ಮುಂಬೈ ನಿಕಟವಾಗಿರುವ ಜಾಗಗಳು, ಹಾಗಾಗಿ ಭೇಟಿ ಮಾಡಿರುತ್ತಾರೆ ಎಂದು ತಿಳಿಸಿದರು.

ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸಿಎಂ ಅಭ್ಯರ್ಥಿ ವಿಷಯದ ಕಚ್ಚಾಟದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಅವರ ಪಕ್ಷ ಗೆದ್ದು ಬಂದರೆ ಸಿಎಂ ಆಗೋದು? ಈಗ ಹೇಗೆ ಸಿಎಂ ಆಗ್ತಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಸಚಿವ ಮಾಧುಸ್ವಾಮಿ ವ್ಯಂಗ್ಯವಾಡಿದರು. ಅವರು ಯಾವಾಗ ಸಿಎಂ ಆಗ್ತಾರೆ. ಚುನಾವಣೆ ಆಗಬೇಕು, ಚುನಾಯಿತ ಎಂಎಲ್‍ಎ ಗಳು ಆಯ್ಕೆ ಮಾಡಬೇಕು. ಆಗ ಸಿಎಂ ಅಭ್ಯರ್ಥಿ ವಿಚಾರ ಬರುತ್ತದೆ ಎಂದರು. ಅಲ್ಲದೇ ಕಳೆದ ಬಾರಿ ಕುಮಾರಸ್ವಾಮಿ ಸಿಎಂ ಆಗ್ತಾರೆ ಅಂತ ಯಾರಿಗೆ ಗೊತ್ತಿತ್ತು? ರಾಜಕಾರಣ ಹೇಗೆ ತಿರುಗುತ್ತದೆ ಯಾರಿಗೆ ಗೊತ್ತು ಎಂದು ಹೇಳಿದರು. ಇದನ್ನೂ ಓದಿ: ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಡುವಂತದ್ದು ಏನೂ ಆಗಿಲ್ಲ: ಸಚಿವ ಬಿ.ಸಿ.ಪಾಟೀಲ್

ವಿದ್ಯಾಗಮದಿಂದಲೇ ಶಿಕ್ಷಕರು ಸಾವು ಅಂತ ಪ್ರಚಾರ ಬೇಡ. ರಾಜ್ಯದಲ್ಲಿ ಮೂರನೇ ಅಲೆ ಹೇಗೆ ರಿಯಾಕ್ಟ್ ಮಾಡುತ್ತದೆ ಅಂತ ನೋಡುತ್ತಿದ್ದೇವೆ. ಡೆಲ್ಟಾ ವೈರಸ್ ಹರಡುವ ಸಾಧ್ಯತೆ ಇದೆ. ಇದನ್ನು ನೋಡಿಕೊಂಡು ಇನ್ನೊಂದು ತಿಂಗಳು ನೋಡಿ ವಾಚ್ ಮಾಡಲಾಗುತ್ತದೆ ಎಂದು ತಿಳಿಸಿದರು. ಇದೇ ವೇಳೆ ಸರ್ಕಾರ ಡೆತ್ ರೇಟ್ ಮೆರೆಮಾಡಚುತ್ತಿದೆ ಅಂತ ಆರೋಪಿಸಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ ಸಚಿವರು, ಕೊವಿಡ್ ಡೆತ್ ರಿಪೋರ್ಟ್ ಮರೆ ಮಾಚುವ ಸ್ಥಿತಿ ನಮಗೆ ಬಂದಿಲ್ಲ. ಕೊಮಾರ್ಬಿಡ್ ಡೆತ್, ಕ್ರಾನಿಕ್ ಡಿಸೇಸ್ ಡೆತ್ ಆಗ್ತಿದೆ. ಅಕಾಸ್ಮಾತ್ ರಿಪೋರ್ಟ್ ಆಗದೆ ಡೆತ್ ಆಗಿದ್ದರೆ ನಾವೇನು ಮಾಡೋಕಾಗದಿಲ್ಲ ಎಂದು ಕೈ ನಾಯಕರ ವಿರುದ್ಧ ಕಿಡಿ ಕಾರಿದರು. ಇದನ್ನೂ ಓದಿ: ಹತ್ತು ದಿನಗಳಲ್ಲಿ ನನ್ನ ಮುಂದಿನ ರಾಜಕೀಯ ನಿರ್ಣಯ: ರಮೇಶ್ ಜಾರಕಿಹೊಳಿ

ಕೊರೊನಾ 3ನೇ ಅಲೆ, ಡೆಲ್ಟಾ ಪ್ಲಸ್ ಬಗ್ಗೆ ಪರಿಶೀಲಿಸಿ ವಿದ್ಯಾಗಮ ಸಾಧ್ಯತೆ ಇದ್ದು, ಇನ್ನೊಂದು ತಿಂಗಳು ಕಾದು ನೋಡಿ ವಿದ್ಯಾಗಮ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ಕಳೆದ ಸಲ ವಿದ್ಯಾಗಮ ವೇಳೆ ಶಿಕ್ಷಕರ ಸಾವು ವಿಚಾರವಾಗಿ ಸಾವಿಗೆ ಬೇಕಾದಷ್ಟು ಕಾರಣ ಇರುತ್ತವೆ. ಡೆತ್ ಆಡಿಟ್ ನಿಂದ ಗೊತ್ತಾಗುತ್ತದೆ. ದೈಹಿಕ ಅಂತರ ಕಾಯ್ದುಕೊಂಡು ವಿದ್ಯಾಗಮ ಮಾಡಿದ್ರೆ ತೊಂದರೆ ಇಲ್ಲ, ಸಾವಿಗೆ ವಿದ್ಯಾಗಮವೇ ಕಾರಣ ಎಂಬ ಪ್ರಚಾರ ಬೇಡ ಎಂದು ಸಚಿವರು ಮನವಿ ಮಾಡಿದರು. ಇದನ್ನೂ ಓದಿ:  ಸರ್ಕಾರ ಬೀಳಿಸಿ, ರಚಿಸುವ ಶಕ್ತಿ ದೇವರು ಕೊಟ್ಟಿದ್ದಾನೆ: ರಮೇಶ್ ಜಾರಕಿಹೊಳಿ

Leave a Reply

Your email address will not be published. Required fields are marked *

Back to top button