– ಪೀಸ್ ವುಡ್ ಇಕೋ ಫಾರಂ ಲ್ಯಾಂಡ್ ಸಂಸ್ಥೆಯ ಪರಿಸರ ಸ್ನೇಹಿ ಫಾರಂ
ಬೆಂಗಳೂರು: ಹಸಿರಿನಿಂದ ಕಂಗೊಳಿಸುತ್ತಿರುವ ರಮಣೀಯ ಪರಿಸರದಲ್ಲಿ ಮನೆ ನಿರ್ಮಿಸುವ ಆಸೆ ಹಲವರಿಗಿರುತ್ತದೆ. ಆದರೆ ಆ ಕನಸಿನ ಮನೆ ಕಟ್ಟಲು ಭೂಮಿ ಬೇಕು. ಅದು ಬೆಂಗಳೂರಿನ ಕೂಗಳತೆ ದೂರದಲ್ಲಿ ಸಿಕ್ಕರೆ ಇನ್ನೂ ಖುಷಿ.
ರಾಮನಗರ ಜಿಲ್ಲೆಯ ಕನಕಪುರ ಬಳಿಯ ಗೇರುಹಳ್ಳಿಯ ಪರಿಸರ ಸ್ನೇಹಿ ವಾತಾವರಣದಲ್ಲಿ ʼಪೀಸ್ ವುಡ್ ಇಕೋ ಫಾರಂ ಲ್ಯಾಂಡ್ ಸಂಸ್ಥೆʼ ಪರಿಸರ ಸ್ನೇಹಿ ಫಾರಂ ಲ್ಯಾಂಡ್ ಅನ್ನು ಸಿದ್ಧಪಡಿಸಿದೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಭೂಮಿಯನ್ನು ಅಭಿವೃದ್ಧಿಪಡಿಸಲಾಗಿದೆ.
Advertisement
Advertisement
ಬೆಂಗಳೂರು ಸಮೀಪವೇ ಕನಕಪುರ ಜಂಕ್ಷನ್ ನೈಸ್ ರಸ್ತೆಯಿಂದ ಕೇವಲ 50 ಕಿ.ಮೀ. ದೂರದಲ್ಲಿ ಈ ಜಾಗವಿದೆ. ಕನಕಪುರ-ಕಬ್ಬಾಳ ರಸ್ತೆಯ ಸಮೀಪದಲ್ಲಿ ಫಾರಂ ಲ್ಯಾಂಡ್ ನಿರ್ಮಾಣವಾಗಿದ್ದು, ಕನಕಪುರದಿಂದ ಕೇವಲ 9 ಕಿ.ಮೀ ದೂರದಲ್ಲಿದೆ.
Advertisement
ಗೇರುಹಳ್ಳಿ ಹಸಿರು ಪ್ರದೇಶದಲ್ಲಿ ಜಾಗವನ್ನು ಪೀಸ್ ವುಡ್ ಇಕೋ ಫಾರಂ ಲ್ಯಾಂಡ್ ಖರೀದಿಸಿದೆ. ಇಲ್ಲಿ ಮಾವು, ಹಲಸು, ನೇರಳೆ, ಕಿತ್ತಳೆ ಸೇರಿದಂತೆ ಹಲವು ಹಣ್ಣಿನ ಮರಗಳನ್ನು ಬೆಳೆಸಲಾಗಿದೆ. ಭೂಮಿ ಖರೀದಿಸುವ ಗ್ರಾಹಕರಿಗೆ ಭವಿಷ್ಯದಲ್ಲಿ ಸಹಾಯವಾಗಲೆಂದು ಶ್ರೀಗಂಧ, ತೇಗದ ಜೊತೆಗೆ ರಕ್ತ ಚಂದನ, ಅಡಿಕೆ, ತೆಂಗಿನ ಗಿಡಗಳನ್ನು ನೆಡಲಾಗಿದೆ. ಈಗಾಗಲೇ ಸುಮಾರು 20 ಜಾತಿಯ ವಿವಿಧ ಹಣ್ಣಿನ ಗಿಡಗಳು ತಲೆ ಎತ್ತಿವೆ. ಇಷ್ಟೇ ಅಲ್ಲದೇ 20 ವರ್ಷದಷ್ಟು ಹಳೆಯಾದಾದ ಮಾವಿನ ಮರಗಳು ಈ ಜಾಗದಲ್ಲಿದೆ.
Advertisement
ಪೀಸ್ ವುಡ್ ಇಕೋ ಫಾರಂ ಲ್ಯಾಂಡ್ ಮಾಲೀಕ ಜಿ.ಆರ್. ತಿರುಮಲೇಶ್(ಭಾಸ್ಕರ್) ಮಾತನಾಡಿ,ಹಸಿರು ಪರಿಸರದಲ್ಲಿ ಮನೆ ಕಟ್ಟಬೇಕೆಂದು ಕನಸು ಕಾಣುತ್ತಿರುವ ಜನರಿಗಾಗಿ ಈ ಭೂಮಿಯನ್ನು ವಿಶೇಷವಾಗಿ ಅಭಿವೃದ್ಧಿಪಡಿಸಲಾಗಿದೆ. ಶಿಂಷಾ, ಮುತ್ತತ್ತಿ ಸೇರಿದಂತೆ ಅನೇಕ ಪ್ರವಾಸಿ ತಾಣಗಳು ಈ ಪ್ರದೇಶಕ್ಕೆ ಹತ್ತಿರದಲ್ಲಿವೆ ಎಂದಿದ್ದಾರೆ.
ಹನಿ ನೀರಾವರಿ ವ್ಯವಸ್ಥೆ
ಈ ಜಾಗದಲ್ಲಿ ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ಅವಕಾಶವಿದೆ. ಖರೀದಿದಾರರು ತಮಗೆ ಬೇಕಾದ ತರಕಾರಿಗಳನ್ನು ಮನೆಯ ಮುಂಭಾಗದಲ್ಲಿ ಬೆಳೆಸಬಹುದು. ಈ ಕಾರಣಕ್ಕೆ ಹನಿ ನೀರಾವರಿ ವ್ಯವಸ್ಥೆಯನ್ನು ಅಳವಡಿಕೆ ಮಾಡಲಾಗಿದೆ. ಸುರಕ್ಷತೆಗಾಗಿ 24*7 ಭದ್ರತೆ, ಸಿಸಿಟಿವಿಗಳನ್ನು ಅಳವಡಿಸಲಾಗಿದ್ದು, ಕ್ರೀಡಾ ಚಟುವಟಿಕೆಗಳಿಗೆ ಜಾಗ ಮೀಸಲಿಡಲಾಗಿದೆ.
ದರ ಎಷ್ಟು?
ಪ್ರತಿ ಚದುರ ಮೀಟರ್ಗೆ 199 ರೂ. ದರ ನಿಗದಿ ಮಾಡಲಾಗಿದೆ. 5 ಗುಂಟೆ ಮತ್ತು 12 ಗುಂಟೆ ಪ್ಲಾಟ್ಗಳು ಕೂಡ ಖರೀದಿಗೆ ಲಭ್ಯವಿದೆ. ಹೆಚ್ಚಿನ ಮಾಹಿತಿಗೆ 98805 64557 ನಂಬರ್ ಸಂಪರ್ಕಿಸಬಹುದು ಅಥವಾ www.peacewood.in ವೆಬ್ಸೈಟಿಗೆ ಭೇಟಿ ನೀಡಬಹುದು.