CrimeLatestMain PostNational

ಸಂಚಾರ ಉಲ್ಲಂಘನೆ, ರತನ್‌ ಟಾಟಾಗೆ ಬಂತು ಚಲನ್‌ – ತನಿಖೆಗೆ ಇಳಿದಾಗ ಸ್ಫೋಟಕ ಸತ್ಯ ಬಯಲು

– ಮಹಿಳೆಯಿಂದ ಟ್ರಾಫಿಕ್ ರೂಲ್ಸ್ ಬ್ರೇಕ್, ದಂಡದ ಚಲನ್ ಟಾಟಾಗೆ ರವಾನೆ

ಮುಂಬೈ: ರತನ್ ಟಾಟಾ ಕಾರ್ ನಂಬರ್ ನಕಲಿ ಮಾಡಿಸಿ ಮಹಿಳೆಯೊಬ್ಬಳು ತನ್ನ ವಾಹನಕ್ಕೆ ಹಾಕಿಸಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.

ಮಹಾರಾಷ್ಟ್ರದ ಮುಂಬೈನಲ್ಲಿ ಘಟನೆ ನಡೆದಿದ್ದು, ಮಹಿಳೆಯೊಬ್ಬಳು ಕಾರ್ ರಿಜಿಸ್ಟ್ರೇಶನ್ ನಂಬರ್ ನ್ನೇ ನಕಲಿ ಮಾಡಿದ್ದಾಳೆ. ಅದೂ ಸಹ ಟಾಟಾ ಕಂಪನಿ ಮಾಲೀಕ ರತನ್ ಟಾಟಾ ಅವರ ಕಾರ್ ನಂಬರ್ ನ್ನು ನಕಲಿ ಮಾಡಿದ್ದಾಳೆ. ಸಂಖ್ಯಾಶಾಸ್ತ್ರದ ಕಾರಣದಿಂದ ನಂಬರ್ ಬದಲಿಸಿರುವುದಾಗಿ ಹೇಳಿದ್ದಾಳೆ. ನಕಲಿ ನಂಬರ್ ಪ್ಲೇಟ್ ಹಾಕಿದ್ದ ಬಿಎಂಡಬ್ಲ್ಯೂ ಕಾರನ್ನು ಪೊಲೀಸರು ಸೀಜ್ ಮಾಡಿದ್ದಾರೆ.

ಇನ್ನೂ ಆಘಾತಕಾರಿ ವಿಷಯವೆಂದರೆ ಮಹಿಳೆ ತನ್ನ ಐಶಾರಾಮಿ ಬಿಎಂಡಬ್ಲ್ಯೂ ಕಾರ್ ಮೂಲಕ ಹಲವು ಬಾರಿ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿದ್ದು, ಇದರ ಚಲನ್ ರತನ್ ಟಾಟಾ ಅವರಿಗೆ ಹೋಗಿವೆ. ಈ ಕುರಿತು ಪೊಲೀಸರು ತನಿಖೆ ನಡೆಸಿದ್ದು, ಈ ವೇಳೆ ನಕಲಿ ನಂಬರ್ ಕುರಿತು ಬೆಳಕಿಗೆ ಬಂದಿದೆ.

ಮಾತುಂಗಾ ಪೊಲೀಸರು ಕಾರ್ ಒಡತಿ ಮಹಿಳೆಯನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಐಪಿಸಿ ಸೆಕ್ಷನ್ 420 ಹಾಗೂ 465 ಮೋಸ ಹಾಗೂ ವಂಚನೆ ಪ್ರಕರಣ ದಾಖಲಿಸಿದ್ದಾರೆ. ತನಿಖೆ ಬಳಿಕ ಪೊಲೀಸರು ಈ ಕಾರು ಎಂ.ಎಸ್ ನರೇಂದ್ರ ಫಾರ್‍ವಾಡ್ರ್ಸ್ ಪ್ರೈ.ಲಿ.ಗೆ ಸೇರಿದೆ ಎಂದು ಪತ್ತೆ ಹಚ್ಚಿದ್ದಾರೆ. ಬಳಿಕ ಮಹಿಳೆಯನ್ನು ವಿಚಾರಣೆ ನಡೆಸಲಾಗಿದ್ದು, ಸಂಖ್ಯಾಶಾಸ್ತ್ರದ ಕಾರಣದಿಂದಾಗಿ ಈ ನಂಬರ್ ಪಡೆದಿರುವುದಾಗಿ ಹೇಳಿದ್ದಾಳೆ. ಅಲ್ಲದೆ ಇದು ರತನ್ ಟಾಟಾ ಅವರ ಕಾರ್ ನಂಬರ್ ಎಂದು ನನಗೆ ತಿಳಿದಿರಲಿಲ್ಲ ಎಂದು ಮಹಿಳೆ ತಿಳಿಸಿದ್ದಾರೆ.

Leave a Reply

Your email address will not be published.

Back to top button