ಮಡಿಕೇರಿ: ಅನಾರೋಗ್ಯದಿಂದ ಬಳಲುತ್ತಿದ್ದ ಒಂದು ತಿಂಗಳ ಮಗವಿಗೆ ಚಿಕಿತ್ಸೆ ಕೊಡಿಸಲೆಂದು ತಾಯಿಯೊಬ್ಬರು ಎರಡು ಕಿಲೋಮೀಟರ್ ನಡೆದುಕೊಂಡು ಬಂದು ಮಗುವಿಗೆ ಚಿಕಿತ್ಸೆ ಕೊಡಿಸಿದ ಘಟನೆ ಮಡಿಕೇರಿ ನಗರದಲ್ಲಿ ಇಂದು ನಡೆದಿದೆ.
Advertisement
ಲಾಕ್ಡೌನ್ ಆಗಿದ್ದ ಪರಿಣಾಮ ಮಡಿಕೇರಿ ನಗರದಲ್ಲಿ ವಾಹನಗಳ ಸಂಚಾರ ಇಲ್ಲದೇ ನಗರದ ಮಹದೇವಪೇಟೆಯಿಂದ ಖಾಸಗಿ ಆಸ್ಪತ್ರೆಗೆ ಬಾಣಂತಿಯನ್ನು ಅವರ ತಾಯಿ ಕರೆದುಕೊಂಡು ಹೋಗಿದ್ದಾರೆ.
Advertisement
ವಾಹನಗಳು ಯಾವುದು ಇರದ ಕಾರಣ ಸುಡುವ ಬಿಸಿಲಲ್ಲೇ ಮಗುವನ್ನು ಹೊತ್ತುಕೊಂಡು ಸಾಗಿದ್ದು, ರಶ್ಮಿ ಅವರೊಂದಿಗೆ ಅವರು ತಾಯಿ ಚಿಕಿತ್ಸೆಗಾಗಿ ಸಂಕಷ್ಟ ಎದುರಿಸಿದ್ದಾರೆ.
Advertisement
Advertisement
ಹಸುಗೂಸುನ್ನು ಹೊತ್ತು ನಡೆದ ತಾಯಿಯ ಪರಿಸ್ಥಿತಿಯನ್ನು ಕಂಡು ಕರುಳು ಹಿಂಡಿ ಬರುವಂತಿತ್ತು. ಲಾಕ್ಡೌನ್ ಆಗಿರುವುದರಿಂದ ಜಿಲ್ಲೆಯಲ್ಲಿ ಇರುವ ಪೊಲೀಸರು ಕಟ್ಟಿನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಿರುವ ಪರಿಣಾಮದಿಂದ ತುರ್ತುಸೇವೆಗಳಿಗೆ ಬರಲು ಕೂಡ ಅಟೋ ಚಾಲಕರು ಹಿಂದೆಟ್ಟು ಹಾಕಿದರು. ಹೀಗಾಗಿ ಎರಡು ಕಿಲೋಮೀಟರ್ ಹಸುಗೂಸನ್ನು ಹೊತ್ತು ನಡೆಯುವ ಪರಿಸ್ಥಿತಿ ಒದಗಿಬಂತು ಎಂದು ನೋವಿನಲ್ಲೇ ಬಾಣಂತಿ ರಶ್ಮಿ ಹೇಳಿದ್ದಾರೆ