ಮೈಸೂರು: ಜಿಲ್ಲೆಯಲ್ಲಿ ಬೃಹತ್ ಹನಿಟ್ರ್ಯಾಪ್ ಜಾಲವೊಂದು ಪತ್ತೆಯಾಗಿದೆ. ಯುವತಿಯನ್ನ ಬಳಸಿಕೊಂಡು ಹಣ ವಸೂಲಿಗೆ ಇಳಿದಿದ್ದ 5 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ನವೀನ್, ಶಿವರಾಜು, ಹರೀಶ್ ಹಾಗೂ ವಿಜಿ ಬಂಧಿತ ಆರೋಪಿಗಳು. ಈ ನಾಲ್ವರು ಕೂಡ ಮೈಸೂರಿನ ಪಿರಿಯಾಪಟ್ಟಣ ನಿವಾಸಿಗಳು. ಅನಿತಾ ಎಂಬ ಯುವತಿಯನ್ನು ಬಳಸಿಕೊಂಡು ಈ ತಂಡ ಹನಿಟ್ರ್ಯಾಪ್ಗೆ ಇಳಿದಿದ್ದು, ಸದ್ಯ ಈಕೆಯನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.
Advertisement
Advertisement
ಮೈಸೂರಿನ ವೈದ್ಯರೊಬ್ಬರನ್ನ ಹನಿಟ್ರ್ಯಾಪ್ ಜಾಲಕ್ಕೆ ಬೀಳಿಸಿತ್ತು. ಯುವತಿ ಹಾಗೂ ನಾಲ್ವರು ಆರೋಪಿಗಳು ಖಾಸಗಿ ವಿಡಿಯೋ ಮಾಡಿಕೊಂಡು ಒಂದು ಕೋಟಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಹಣ ನೀಡದಿದ್ದರೆ ವಿಡಿಯೋವನ್ನ ಸಾಮಾಜಿಕ ಜಾಲತಾಣಕ್ಕೆ ಹಂಚುವ ಬೆದರಿಕೆ ಹಾಕಿದ್ದರು.
Advertisement
ಪ್ರಕಾಶ್ ಬಾಬು ಪಿರಿಯಾಪಟ್ಟಣದಲ್ಲಿ ವಾಸವಿದ್ದಾಗ ಆರೋಪಿಗಳು ಒಂದು ಕೋಟಿ ಹಣ ಕೇಳಿದ್ದರು. ಈವರೆಗೆ ಡಾ.ಪ್ರಕಾಶ್ ಬಾಬು ಅವರು 31 ಲಕ್ಷದ 30 ಸಾವಿರ ಹಣ ನೀಡಿದ್ದಾರೆ. 2019ರಿಂದ ಡಿಸೆಂಬರ್ನಿಂದ 2020 ಅಕ್ಟೋಬರ್ ತಿಂಗಳವರೆಗೂ ಹಣ ವಸೂಲಿ ಮಾಡಿದ್ದರು. ಪಿರಿಯಾಪಟ್ಟಣ ಬಿಟ್ಟು ಮೈಸೂರು ನಗರಕ್ಕೆ ಬಂದ ಡಾ.ಪ್ರಕಾಶ್ ಬಾಬು, ಮೈಸೂರಿನ ಕುವೆಂಪುನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
Advertisement
ದೂರಿನ ಅನ್ವಯ ಐವರು ಆರೋಪಿಗಳನ್ನು ಬಂಧಿಸಲಾಗಿದ್ದು, ಪೊಲೀಸರು ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.