ಲಕ್ನೋ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಸಿದ್ಧತೆ ನಡೆಸಿದ್ದು, ಸ್ಥಳೀಯ ನಾಯಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಕ್ರಿಯರಾಗುತ್ತಿದ್ದಾರೆ. ಇತ್ತ ಉತ್ತರ ಪ್ರದೇಶ ಚುನಾವಣಾ ಅಖಾಡಕ್ಕೆ ಎಂಟ್ರಿ ಕೊಡಲು ಎಐಎಂಐಎಂ ಸಹ ತಯಾರಿ ನಡೆಸಿದೆ. ಆದ್ರೆ ನಾವು ಸಮಾಜವಾದಿ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳಲ್ಲ ಎಂದು ಎಐಎಂಐಎಂ ಪಕ್ಷದ ಮುಖ್ಯಸ್ಥ, ಸಂಸದ ಅಸಾದುದ್ದೀನ್ ಓವೈಸಿ ಸ್ಪಷ್ಟಪಡಿಸಿದ್ದಾರೆ.
ಉತ್ತರ ಪ್ರದೇಶದ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಗೆದ್ದು ಅಧಿಕಾರಕ್ಕೆ ಬಂದ್ರೆ, ಮುಸ್ಲಿಂ ನಾಯಕನನ್ನು ಉಪಮುಖ್ಯಮಂತ್ರಿಯಾಗಿ ಮಾಡುವ ಷರತ್ತನ್ನು ಒಪ್ಪಿದ್ರೆ ಚುನಾವಣೆ ಪೂರ್ವ ಮೈತ್ರಿ ಮಾಡಿಕೊಳ್ಳಲು ಅಸಾದುದ್ದೀನ್ ಓವೈಸಿ ಮುಂದಾಗಿದ್ದಾರೆ ಎಂಬಿತ್ಯಾದಿ ಸುದ್ದಿಗಳು ಉತ್ತರ ಪ್ರದೇಶ ರಾಜಕೀಯ ವಲಯದಲ್ಲಿ ಕೇಳಿ ಬಂದಿದ್ದವು. ಈ ಎಲ್ಲ ಊಹಾಪೋಹಗಳಿಗೆ ಓವೈಸಿ ತೆರೆ ಎಳೆದಿದ್ದಾರೆ.
Advertisement
Advertisement
ಸಮಾಜವಾದಿ ಪಕ್ಷದ ಜೊತೆಗಿನ ಮೈತ್ರಿ ಕುರಿತು ನಾನು ಅಥವಾ ನಮ್ಮ ಪಕ್ಷದ ಯಾವ ಮುಖಂಡರು ಹೇಳಿಲ್ಲ. ಈ ಹಿಂದೆ ಶೇ.20ರಷ್ಟು ಮುಸ್ಲಿಂ ಮತಗಳನ್ನು ಅಖಿಲೇಶ್ ಯಾದವ್ ಪಡೆದುಕೊಂಡಿದ್ದರೂ ನಮ್ಮ ಸಮುದಾಯದವರನ್ನು ಡಿಸಿಎಂ ಮಾಡಿರಲಿಲ್ಲ ಎಂದು ಹೇಳಿದ್ದಾರೆ.
Advertisement
ಉತ್ತರ ಪ್ರದೇಶದ ಸುಮಾರು 110 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹಾಕಲು ಒವೈಸಿ ಮುಂದಾಗಿದ್ದಾರೆ. ಹೆಚ್ಚು ಮುಸ್ಲಿಂ ಮತಗಳಿರೋ ಕ್ಷೇತ್ರದಲ್ಲಿ ಎಐಎಂಐಎಂ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಉತ್ತರ ಪ್ರದೇಶದಲ್ಲಿ 110 ಕ್ಷೇತ್ರಗಳಲ್ಲಿ ಶೇ.30-39 ರಷ್ಟು ಮುಸ್ಲಿಂ ಮತದಾರರಿದ್ದಾರೆ. 44 ಕ್ಷೇತ್ರಗಳಲ್ಲಿ ಶೇ.40-49, 11 ಕ್ಷೇತ್ರಗಳು ಶೇ.50-65 ರಷ್ಟು ಮತದಾರರನ್ನು ಹೊಂದಿವೆ. ಇದನ್ನೂ ಓದಿ: ಈ ದ್ವೇಷ ಹಿಂದುತ್ವದ ಕೊಡುಗೆ: ಭಾಗವತ್ ಹೇಳಿಕೆಗೆ ಓವೈಸಿ ಕಿಡಿ
Advertisement
2017ರ ಚುನಾವಣೆಯಲ್ಲಿ ಬಿಜೆಪಿ 312 ಕ್ಷೇತ್ರಗಳನ್ನು ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿದಿದೆ. ಸಮಾಜವಾದಿ ಪಕ್ಷ 47, ಬಹುಜನ ಸಮಾಜವಾದಿ ಪಕ್ಷ 19 ಮತ್ತು ಕಾಂಗ್ರೆಸ್ ಕೇವಲ ಏಳರಲ್ಲಿ ಗೆದ್ದಿತ್ತು. ಇದನ್ನೂ ಓದಿ: RSS ಬುದ್ಧಿ 0, ಮುಸ್ಲಿಮರ ಮೇಲಿನ ದ್ವೇಷ 100%: ಭಾಗವತ್ ಹೇಳಿಕೆಗೆ ಓವೈಸಿ ಪ್ರತಿಕ್ರಿಯೆ