ಬೆಂಗಳೂರು: ಯಾವುದೇ ಕಾರಣಕ್ಕೂ ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಡಬಾರದು. ಪ್ರಕರಣದ ತನಿಖೆಯ ಬಳಿಕವಷ್ಟೇ ರಾಜೀನಾಮೆ ಕೊಡಲಿ ಎಂದು ಸಹೋದರ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ಇಂದು ಸಿಎಂ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಮೇಶ್ ದೆಹಲಿಗೆ ಹೋಗಲ್ಲ, ಬೆಂಗಳೂರಿನಲ್ಲಿಯೇ ಇರುತ್ತಾರೆ. ಸಿಡಿಯಲ್ಲಿದ್ದ ಯುವತಿ ಯಾರು ಅಂತ ಗೊತ್ತಾಗಬೇಕಿದೆ. ಅವಳ ಹೆಸರು ಗೊತ್ತಾಗಬೇಕು. ಇದೊಂದು ನಕಲಿ ವಿಡಿಯೋ ಅಂತ ತನಿಖೆಗೆ ಸಿಎಂಗೆ ಒತ್ತಾಯಿಸಿದ್ದೇವೆ. ಇದು ನಿಜ ಆಗಿದ್ರೆ ರಮೇಶ್ ಜಾರಕಿಹೊಳಿಗೆ ನಿವೃತ್ತಿ ತೆಗೆದುಕೊಳ್ಳಲು ಹೇಳ್ತೀನಿ. ವಕೀಲರ ಜೊತೆ ಮಾತನಾಡಿ 100ಕೋಟಿ ಮಾನನಷ್ಟ ಮೊಕದ್ದಮೆ ಹಾಕ್ತೀವಿ ಎಂದರು.
ರಮೇಶ್ ಜಾರಕಿಹೊಳಿ ಸಿಎಂರನ್ನು ಭೇಟಿಯಾಗ್ತಾರೆ. ಇದು ತನಿಖೆಯಾಗಬೇಕು. ಯೂ ಟ್ಯೂಬ್ ನಲ್ಲಿ ದುಬೈನಲ್ಲಿ ಅಪ್ ಲೋಡ್ ಆಗಿದೆ ಅಂತಾರೆ. ಇದು ಸಿಐಡಿ ಸಿಒಡಿ ತನಿಖೆಗೆ ಕೊಡಬೇಕು. ಸಂತ್ರಸ್ತೆ ಯಾರು ಅನ್ನುವುದು ಗೊತ್ತಾಗಬೇಕು. ಹಾದಿ ಬೀದಿಯಲ್ಲಿ ಇದ್ದವರು ಬಂದು ವೀಡಿಯೋ ಬಿಡುಗಡೆ ಮಾಡಿದ್ದಾರೆ. ವೀಡಿಯೋ ಫೇಕ್ ಆಗಿದೆ. ಒಂದು ವೇಳೆ ತನಿಖೆಯಲ್ಲಿ ರಮೇಶ್ ಅನ್ನೋದು ಗೊತ್ತಾದ್ರೆ, ಅವರನ್ನೇ ನಿವೃತ್ತಿ ನೀಡಲು ತಿಳಿಸುತ್ತೇನೆ ಎಂದು ಹೇಳಿದರು.
ಬಿಜೆಪಿಯವರು ರಿಲೀಸ್ ಮಾಡಿಸಿಲ್ಲ. ಬದಲಾಗಿ ಪ್ರಭಾವಿ ರಾಜಕಾರಣಿ ಇದ್ದಾರೆ. ಸಿಡಿ ರಿಲೀಸ್ ಮಾಡಿದವರ ವಿರುದ್ಧ ನೂರು ಕೋಟಿ ಮಾನನಷ್ಟ ಮೊಕದ್ದಮೆ ಹಾಕಲು ನಿರ್ಧರಿಸುತ್ತೇವೆ. ತನಿಖೆ ಆಗಲೇ ಬೇಕು. ಯಾವುದೇ ಕಾರಣಕ್ಕೂ ರಮೇಶ್ ರಾಜೀನಾಮೆ ಕೊಡಬಾರದು. ತನಿಖೆಯಾದ ನಂತರ ರಾಜೀನಾಮೆ ಕೊಟ್ಟು ಹೊರ ಹೋಗಲಿ ಎಂದು ತಿಳಿಸಿದರು.
ಮೇಟಿಯ ವಿಚಾರದಲ್ಲಿ ಅನ್ಯಾಯವಾದವರು ನೇರವಾಗಿ ಬಂದು ಮಾತನಾಡಿದ್ರು. ಯುವತಿಯ ಹೆಸರು ಯಾರು ಏನು ಅಂತ ಗೊತ್ತಾಗಬೇಕು. ರಮೇಶ್ ದೆಹಲಿಗೆ ಹೋಗಲ್ಲ. ಬೆಂಗಳೂರಿನಲ್ಲೇ ಇರುತ್ತಾರೆ. ನಮ್ಮ ಮನೆಯ ಮರ್ಯಾದೆ ಹಾಳು ಮಾಡಿದ್ದಾರೆ ಎಂದು ಹೇಳಿದರು.