CinemaLatestMain PostSandalwood

ಯಾರು ಏನೇ ಅಂದ್ರೂ ಚಿರು ಹುಟ್ಟುಹಬ್ಬ ಸೆಲೆಬ್ರೇಟ್ ಮಾಡುತ್ತೇವೆ: ಮೇಘನಾ ರಾಜ್

– ಚಿರುಗೆ ಸಂಡೇ ಎಂದರೆ ತುಂಬಾ ಇಷ್ಟವಾದ ದಿನ
-ಪನ್ನ ನನಗೋಸ್ಕರ ಈ ಕಥೆಯನ್ನು ಮಾಡಿದ್ದಾರೆ

ಬೆಂಗಳೂರು: ಮೇಘನಾ ರಾಜ್ ಯಾವಾಗ ಸಿನಿಮಾ ಮಾಡುತ್ತಾರೆ ಎಂದು ಕೇಳುತ್ತಿದ್ದ ಅಭಿಮಾನಿಗಳ ಪ್ರಶ್ನೆಗೆ ಮೇಘನಾ ರಾಜ್ ಉತ್ತರವನ್ನು ನೀಡಿದ್ದಾರೆ. ಪತಿಯ ಜನ್ಮ ದಿನದಂದೇ ಮತ್ತೆ ಬಣ್ಣ ಹಚ್ಚುತ್ತಿರುವ ಖುಷಿಯನ್ನು ಹಂಚಿಕೊಂಡಿದ್ದಾರೆ.

ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ಅವರು ಚಿರು ಹುಟ್ಟುಹಬ್ಬದ ದಿನವಾದ ಇಂದು ಸುದ್ದಿಗೋಷ್ಠಿಯಲ್ಲಿ, ತಮ್ಮ ಹೊಸ ಸಿನಿಮಾ ಕುರಿತಾಗಿ ಕೆಲವು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ಸಿನಿಮಾವನ್ನು ಪನ್ನಗಾಭರಣ ಪ್ರೊಡ್ಯೂಸ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಮಹಾರಾಣಿ ಧಿರಿಸಿನಲ್ಲಿ ಮೇಘನಾ ಫುಲ್ ಮಿಂಚಿಂಗ್

ಈ ಒಂದು ವರ್ಷ ನನ್ನ ಕುಟುಂಬ, ಸ್ನೇಹಿತರ ಬಳಗಕ್ಕೆ ತುಂಬಾ ಕಷ್ಟದ ದಿನಗಳಾಗಿತ್ತು. ನನಗೆ ಯಾವಾಗ ಸಿನಿಮಾ ಮಾಡುತ್ತೀರಾ ಎಂದು ಹಲವು ಮಂದಿ ಕೇಳುತ್ತಿದ್ದರು. ಆದರೆ ಸಿನಿಮಾ ಮಾಡಲು ಸಮಯ ಇದೆ. ನಾನು ಎಲ್ಲವನ್ನೂ ಮರೆತು ಸಿನಿಮಾ ಮಾಡಬೇಕಿತ್ತು. ನಾನು ಒಂದು ದಿನ ಜಾಹೀರಾತು ಚಿತ್ರೀಕರಣ ಮುಗಿಸಿದೆ. ಆಗ ನನಗೆ ಪನ್ನಾಗಾಭರಣ ಹೇಗಿತ್ತು ಶೂಟಿಂಗ್ ಎಂದು ಕೇಳಿದ್ದನು. ನಾನು ಆಗ ಹೇಳಿದೆ, ನನಗೆ ಒಂದು ಸಹಜ ಅನುಭವ ಬಂದಿರುವ ಹಾಗೆ ಆಗಿದೆ ಎಂದು. ಆಗ ಅವರು ಒಂದು ಸಿನಿಮಾ ಕಥೆ ಇದೆ ಎಂದು ಹೇಳಿದರು. ಸಿನಿಮಾ ಕಥೆಯನ್ನು ಕೇಳಿ ನಾನು ಅರ್ಧ ಗಂಟೆ ಶಾಕ್‍ನಲ್ಲಿದ್ದೆ. ಒಂದು ಬಿರುಗಾಳಿ ಬಂದು ಹೋಗಿರುವ ಹಾಗೆ ಈ ಸಿನಿಮಾ ಕಥೆ ನನಗೆ ಅನುಭವವನ್ನು ನೀಡಿತ್ತು ಎಂದು ಸಿನಿಮಾ ಕಥೆಯ ಕುರಿಯಾಗಿ ಮೇಘನಾ ಮಾತನಾಡಿದ್ದಾರೆ. ಇದನ್ನೂ ಓದಿ:  ಗೊಂಬೆಗಳ ಮಧ್ಯೆ ಪುಟ್ಟ ಗೊಂಬೆಯಂತೆ ಕುಳಿತ ರಾಯನ್

ನಾನು ಈ ಕಥೆಯನ್ನು ಪ್ರೊಡ್ಯೂಸ್ ಮಾಡುತ್ತಿದ್ದೇನೆ. ನೀನು ಈ ಸಿನಿಮಾದಲ್ಲಿ ನಟಿಸುತ್ತೀಯ ಎಂದು ಕೇಳಿದಾಗ ನನಗೆ ತುಂಬಾ ಸಂತೋಷವಾಯಿತು. ಚಿರು ಅವರು ಮಾಸ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಅವರಿಗೆ ಥ್ರಿಲ್ಲರ್ ಸಿನಿಮಾ ಎಂದರೆ ತುಂಬಾ ಇಷ್ಟವಾಗುತ್ತಿತ್ತು. ಈ ಸಿನಿಮಾ ಕಥೆಯನ್ನು ಕೇಳಿದಾಗ ಚಿರು ಈ ಕಥೆಯನ್ನು ಇಷ್ಟ ಪಡುತ್ತಾನೆ ಎಂದು ನನಗೆ ಗೊತ್ತು, ಹೀಗಾಗಿ ಸಿನಿಮಾ ಮಾಡಲು ಒಪ್ಪಿಕೊಂಡಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಚಿರಂಜೀವಿ ಸರ್ಜಾ ಸವಿ ನೆನಪು

ದಸರಾ ಹಬ್ಬ, ಚಿರು ಹುಟ್ಟುಹಬ್ಬ ಆಗಿರುವುದರಿಂದ ನನಗೆ ವಿಶೇಷ ದಿನವಾಗಿದೆ. ಹೀಗಾಗಿ ನಾವು ಈ ಪ್ರತಿ ವರ್ಷ ಚಿರು ಹುಟ್ಟುಹಬ್ಬವನ್ನು ಆಚರಣೆ ಮಾಡುತ್ತೇವೆ, ಯಾರು ಏನೇ ಅಂದ್ರೂ ಕೂಡಾ ನಾವು ಸೆಲೆಬ್ರೆಟ್ ಮಾಡುತ್ತೇವೆ. ಭಾನುವಾರ ಚಿರು ಅವರಿಗೆ ತುಂಬಾ ಇಷ್ಟವಾಗುವ ದಿನವಾಗಿದೆ. ಸಂಡೇ ಖುಷಿ ಪಡುತ್ತಿದ್ದರು, ನೆಮ್ಮದಿಯಾಗಿ ಇರುತ್ತಿದ್ದರು. ಹೀಗಾಗಿ ನಾವು ಭಾನುವಾರ ಹೊಸ ದಿನದ ಆರಂಭವಾಗುವ ಈ ವಾರದಂದೇ ಒಳ್ಳೆ ಕೆಲಸಕ್ಕೆ ಕೈ ಹಾಕುತ್ತಿದ್ದೇವೆ. ಪನ್ನಗಾಭರಣ ಅವರ ತಂದೆ ನಾಗಾಭರಣ ಅವರು ಮತ್ತು ನಮ್ಮ ತಂದೆ ಸುಂದರ್ ರಾಜ್ ಅವರು ಹಲವು ಸಿನಿಮಾಗಳನ್ನು ಮಾಡಿದ್ದಾರೆ, ಅವರ ಮಕ್ಕಳಾಗಿರುವ ನಾವು ಅವರಂತೆ ನಾವು ಹಿಟ್ ಸಿನಿಮಾ ನೀಡಲು ಬಯಸುತ್ತೇವೆ. ಪನ್ನಾ ನನಗೋಸ್ಕರ ಈ ಕಥೆಯನ್ನು ಮಾಡಿದ್ದಾರೆ. ವಾಸುಕಿ ವೈಭವ್ ಅವರ ಸಂಗೀತದ ಇರಲಿದೆ ಎಂದು ಸಿನಿಮಾ ಕುರಿತಾಗಿ ಮಾತನಾಡಿದ್ದಾರೆ.

Leave a Reply

Your email address will not be published. Required fields are marked *

Back to top button