ಯಾದಗಿರಿ: ಕೋವಿಡ್ ಲಸಿಕೆ ನೀಡುವಲ್ಲಿ ಯಾದಗಿರಿ ತೀರಾ ಹಿಂದುಳಿದೆ. ಲಸಿಕೆ ಆರಂಭದಿಂದಲೂ ಇಲ್ಲಿಯವರೆಗೆ ಕೇವಲ ಶೇ.40 ಮಾತ್ರ ಲಸಿಕೆ ವಿತರಣೆಯಾಗಿದೆ. ಹೀಗಾಗಿ ಕೊರೊನಾ ಮೂರನೇ ಅಲೆಯಲ್ಲಿ ಡೇಂಜರ್ ಝೋನ್ ನಲ್ಲಿ ಯಾದಗಿರಿ ಇರುವ ಬಗ್ಗೆ ತಜ್ಞರು ವರದಿ ನೀಡಿದ್ದಾರೆ.
Advertisement
ತಜ್ಞರ ವರದಿಯಿಂದ ಜಿಲ್ಲಾಡಳಿತ ಫುಲ್ ಅಲರ್ಟ್ ಆಗಿದೆ. ಸದ್ಯ ಝೀರೋ ಪಾಸಿಟಿವಿಟಿ ರೇಟ್ ಇದ್ದರೂ ಸಹ ಮಹಾರಾಷ್ಟ್ರ ಪ್ರಯಾಣಿಕರ ಮೇಲೆ ತೀವ್ರ ನಿಗಾ ವಹಿಸಲಾಗುತ್ತಿದೆ. ರೈಲ್ವೆ ನಿಲ್ದಾಣದಲ್ಲಿ ಅಂತರ್ ರಾಜ್ಯ ಮತ್ತು ಅಂತರ್ ಜಿಲ್ಲಾ ಪ್ರಯಾಣಿಕರನ್ನು ಕಡ್ಡಾಯವಾಗಿ ತಪಾಸಣೆ ಮಾಡಲಾಗುತ್ತಿದೆ. ಇದನ್ನೂ ಓದಿ: ಸರ್ಕಾರ ಸಾರ್ವಜನಿಕ ಗಣೇಶೋತ್ಸವದ ನಿಷೇಧವನ್ನು ಹಿಂಪಡೆಯಬೇಕು: ಶ್ರೀರಾಮಸೇನೆ
Advertisement
Advertisement
ಎಸಿ ಪ್ರಶಾಂತ್ ನೇತೃತ್ವದಲ್ಲಿ ಬೆಳಗ್ಗಿನ ಜಾವದಿಂದಲೇ ಮಹಾರಾಷ್ಟ್ರದಿಂದ ಜಿಲ್ಲೆಗೆ ಟ್ರೈನ್ ಮೂಲಕ ಎಂಟ್ರಿ ನೀಡುತ್ತಿರುವ ಎಲ್ಲಾ ಪ್ರಯಾಣಿಕರು ಮತ್ತು ಮಕ್ಕಳ ಮೇಲೆ ಹದ್ದಿನ ಕಣ್ಣಿಡಲಾಗುತ್ತಿದೆ.
Advertisement