– ಮುಂದೆ ಯತ್ನಾಳ್ ಸಿಎಂ ಆಗಬಹುದು
ಚಿಕ್ಕಬಳ್ಳಾಪುರ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಇರೋ ಗಟ್ಸ್ ರಾಜು ಬಿಜೆಪಿ ನಾಯಕರಿಗಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಹೊರಟ್ಟಿ, ಬಿಜೆಪಿ ಹೈಕಮಾಂಡ್ ತನ್ನ ಅಭಿಪ್ರಾಯಗಳನ್ನು ಯತ್ನಾಳ್ ಅವರ ಮೂಲಕ ಹೇಳಿಸುತ್ತಿದೆ. ಹಾಗಾಗಿ ಯತ್ನಾಳ್ ವರಿಗೆ ಬಿಜೆಪಿ ಹೈಕಮಾಂಡ್ ಶ್ರೀರಕ್ಷೆ ಇರುವ ಕಾರಣಕ್ಕೆ ರಾಜ್ಯ ಬಿಜೆಪಿ ನಾಯಕರು ಕ್ರಮ ಕೈಗೊಳ್ಳಲು ಆಗಿಲ್ಲ. ಈ ರೀತಿ ಬೇರೆ ಯಾರಾದ್ರೂ ಮಾತಾಡಿದ್ರೆ ಪಕ್ಷದಿಂದ ಕ್ಷಣಾರ್ಧದಲ್ಲಿ ಪಕ್ಷದಿಂದ ಉಚ್ಛಾಟನೆ ಮಾಡುತ್ತಿದ್ದರು. ಇನ್ನು ಈಶ್ವರಪ್ಪ ಸಹ ಹಿಂದೆ ಇದನ್ನೇ ಮಾಡಿದ್ದರು ಎಂದರು.
Advertisement
Advertisement
ಯಾರ ಬೆಂಬಲವಿಲ್ಲದೇ ಸಿಎಂ ಬದಲಾವಣೆ ಕುರಿತು ಹೇಳಿಕೆ ನೀಡಲು ಬರಲ್ಲ. ಯತ್ನಾಳ್ ಅವರಿಗೆ ಉತ್ತರ ಕರ್ನಾಟಕ ಭಾಗದವರನ್ನೇ ಮುಖ್ಯಮಂತ್ರಿ ಮಾಡಲಾಗುದು ಎಂದು ಹೇಳಿರಬೇಕು. ಹಾಗಾಗಿ ಅಷ್ಟು ಗಟ್ಟಿಯಾಗಿ ಸಿಎಂ ಬದಲಾವಣೆ ಕುರಿತು ಹೇಳಿತ್ತಿದ್ದಾರೆ. ಮುಂದೆ ಯತ್ನಾಳ್ ಅವರೇ ಸಿಎಂ ಅಗಬಹುದು ಎಂದು ಹೊರಟ್ಟಿ ಭವಿಷ್ಯ ನುಡಿದರು. ಇದನ್ನೂ ಓದಿ: ಸಚಿವನಾಗುವುದಕ್ಕೆ ಯಾರದ್ದೋ ಕಾಲು, ತಲೆ ಹಿಡಿಯುವ ಕೆಲಸ ಮಾಡಿಲ್ಲ-ಮತ್ತೆ ಯತ್ನಾಳ್ ಕಿಡಿ
Advertisement
Advertisement
ಯತ್ನಾಳ್ ಹೇಳಿದ್ದೇನು?: ಬಿಎಸ್ವೈ ಸಿಎಂ ಆಗಿ ಬಹಳ ದಿನ ಉಳಿಯುವುದಿಲ್ಲ. ಕೇಂದ್ರ ಸರ್ಕಾರದವರಿಗೂ ಸಿಎಂ ಬಿಎಸ್ವೈ ಸಾಕಾಗಿ ಹೋಗಿದ್ದಾರೆ. ಉತ್ತರ ಕರ್ನಾಟಕದವರೇ ಮುಂದಿನ ಸಿಎಂ ಆಗುತ್ತಾರೆ. ಉತ್ತರ ಕರ್ನಾಟಕದವರು 100 ಶಾಸಕರನ್ನು ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸುತ್ತಾರೆ. ಆದರೆ ಉಳಿದ ಭಾಗದಲ್ಲಿ ಕೇವಲ 15 ಶಾಸಕರು ಬಿಜೆಪಿಯಿಂದ ಗೆದ್ದು ಅವರಲ್ಲೇ ಒಬ್ಬರು ಸಿಎಂ ಆಗುತ್ತಾರೆ. ಹೀಗಾಗಿ ಮುಂದಿನ ಬಾರಿ ಉತ್ತರ ಕರ್ನಾಟಕದವರೇ ಸಿಎಂ ಆಗೋದು ಪಕ್ಕಾ. ಜೊತೆಗೆ ಉತ್ತರ ಕರ್ನಾಟಕದವರನ್ನೇ ಸಿಎಂ ಮಾಡುವ ಭರವಸೆಯನ್ನು ಪ್ರಧಾನಿ ಮೋದಿ ಅವರು ನೀಡಿದ್ದಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದರು. ಇದನ್ನೂ ಓದಿ: ಕಾಲಾಯ ತಸ್ಮೈ ನಮಃ – ರಾಜ್ಯ ಸರ್ಕಾರದ ವಿರುದ್ಧ ಯತ್ನಾಳ್ ಮಾರ್ಮಿಕ ನುಡಿ
ಇತ್ತ ಯತ್ನಾಳ್ ಹೇಳಿಕೆ ಬೆನ್ನಲ್ಲೇ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಅವರನ್ನ ಪಕ್ಷದಿಂದ ಉಚ್ಛಾಟಿಸಬೇಕು. ಯತ್ನಾಳ್ ಉತ್ತರನ ಪೌರುಷನಂತೆ ಮೂರ್ಖತನದ ಹೇಳಿಕೆ ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿದ್ದ ಸಿಎಂ, ಕರೆದು ಮಾತನಾಡುತ್ತೇನೆ ಎಂದು ಹೇಳಿದ್ದರು.