– ಡ್ರಗ್ಸ್ ಕೇಸ್‍ನಂತೆ ಸಿಡಿ ಕೇಸ್ ಸತ್ತು ಹೋಗುತ್ತೆ
ಚಿಕ್ಕಬಳ್ಳಾಪುರ: ಕೊರೊನಾ ಜೊತೆ ರಾಜ್ಯ ಸರ್ಕಾರ ಮಕ್ಕಳ ತರ ಆಡ ಆಡುತ್ತಿದೆ. ಯಡಿಯೂರಪ್ಪನವರಿಗೆ ಯಾವ ರೀತಿ ಆಡಳಿತ ಮಾಡಬೇಕು ಎಂಬುದು ಗೊತ್ತಿಲ್ಲ. ಪರಿಣಾಮಕಾರಿ ಕ್ರಮಗಳನ್ನ ಕೈಗೊಳ್ಳಲು ಸರ್ಕಾರ ಸಂಪೂರ್ಣ ವಿಫಲವಾಗಿದೆ. ಯಡಿಯೂರಪ್ಪ ಸರ್ಕಾರ ಹುಚ್ಚಾಸ್ಪತ್ರೆ ಹುಚ್ಚರ ಸಂತೆ ಆಗಿದೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Advertisement
ಚಿಕ್ಕಬಳ್ಳಾಪುರ ರೈಲ್ವೈ ನಿಲ್ದಾಣದಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, ಯಡಿಯೂರಪ್ಪ ಅವರಿಗೆ ಚಿಂತನೆ ಜವಾಬ್ದಾರಿ ಇಲ್ಲ. ಈ ಹಿಂದೆ ಖರೀದಿಸಿದ ಹಾಸಿಗೆ ಮಂಚ ವೆಂಟಿಲೇಟರ್ ಎಲ್ಲಿ?ಒಂದೇ ದಿನ 10,000 ಮಂಚ ರೆಡಿ ಮಾಡಿದ್ರಿ? ಅವು ಎಲ್ಲಾ ಎಲ್ಲಿ ಹೋದವು ಅಂತ ಪ್ರಶ್ನೆ ಮಾಡಿದ್ರು. ಈ ಕೊರೊನಾ ಭಯಂಕರ ಪರಿಸ್ಥಿತಿಯಲ್ಲಿ ಸರ್ಕಾರ ನಾಟಕ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
Advertisement
Advertisement
ಇದೇ ವೇಳೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರಕರಣ ಕೂಡ ಡ್ರಗ್ಸ್ ಪ್ರಕರಣದಂತೆ ಸತ್ತು ಹೋಗುತ್ತೆ. ಒಂದೇ ಸ್ಪೀಡಲ್ಲಿ ಡ್ರಗ್ಸ್ ಪ್ರಕರಣ ನಡೆದು, ಮೂಲೆಗುಂಪು ಆಯ್ತು. ಅದೇ ರೀತಿ ಸಿಡಿ ಪ್ರಕರಣ ಸಹ ತಣ್ಣಗಾಗುತ್ತಿದೆ. ಸಿಡಿ ಮಾಡಿದ್ದು ಯಾರು? ಹೇಗೆ? ಯಾಕೆ? ಮಾಡಿದ್ರು? ಕಾರಣ ಏನು ಎಂಬುದರ ಬಗ್ಗೆ ಸಮಗ್ರವಾದ ಉನ್ನತ ಮಟ್ಟದ ತನಿಖೆ ಆಗಬೇಕು ಅಂತ ಆಗ್ರಹಿಸಿದರು.