ಬೆಂಗಳೂರು: ಸಿಎಂ ಬದಲಾವಣೆ ನನಗೆ ಗೊತ್ತಿಲ್ಲ. ಸಿಎಂ ಬದಲಾವಣೆ ಮಾಡ್ತಾರೆ ಅಂತ ಮೊದಲು ಹೇಳಿದ್ದೆ ನಾನು. ಅವಾಗ ನೀವ್ಯಾರು ನಂಬಲಿಲ್ಲ. ಈಗ ಅದು ಸನ್ನಿಹಿತವಾಗಿದೆ. ಇದು ಭ್ರಷ್ಟ ಸರ್ಕಾರ. ಯಡಿಯೂರಪ್ಪ, ಯಡಿಯೂರಪ್ಪನ ಮಕ್ಕಳು ಭ್ರಷ್ಟರಾಗಿದ್ದಾರೆ. ಭ್ರಷ್ಟ ಸರ್ಕಾರ ತೊಲಗಿದರೆ ಒಳ್ಳೆಯದು. ಯಡಿಯೂರಪ್ಪ ಹೋದರೆ ಕಾಂಗ್ರೆಸ್ಸಿಗೆ ಪ್ಲಸ್ ಮೈನಸ್ ಇಲ್ಲಾ. ಒಬ್ಬ ಕರಪ್ಟ್ ಸಿಎಂ ಹೋದ ಹಾಗಾಗುತ್ತೆ. ನಾನು ಭವಿಷ್ಯ ಹೇಳಲಿಲ್ಲ, ನನಗಿದ್ದ ಮಾಹಿತಿ ಹೇಳಿದ್ದೆ. ನನಗೆ ಭವಿಷ್ಯ ಹೇಳುವುದರ ಬಗ್ಗೆ ನಂಬಿಕೆ ಇಲ್ಲಾ. ಕಾಂಗ್ರೆಸ್ ಚುನಾವಣೆ ಎದುರಿಸಲು ಸಿದ್ಧ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
Advertisement
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈಗ ಚುನಾವಣೆ ಬರುತ್ತೆ ಅಂತ ನನಗೆ ಅನ್ನಿಸ್ತಿಲ್ಲ. ಅವಧಿಪೂರ್ವ ಚುನಾವಣೆ ಬರುತ್ತೆ ಅಂತ ನನಗೆ ಅನ್ನಿಸ್ತಿಲ್ಲ. ಯಡಿಯೂರಪ್ಪನ ತೆಗೆದರೆ ಇನ್ನೊಬ್ಬರನ್ನ ಸಿಎಂ ಮಾಡ್ತಾರೆ. ಹೊಸ ಸಿಎಂ ಆದ ನಂತರ ಮಂತ್ರಿಗಳ ಬದಲಾವಣೆ ಆಗಬಹುದು. ನಾನು ಒಂದು ವರ್ಷದ ಹಿಂದೆಯೇ ಸಿಎಂ ಬದಲಾಗ್ತಾರೆ ಅಂದಿದ್ದು ಭವಿಷ್ಯ ಅಲ್ಲ, ಅದು ನನ್ನ ಮಾಹಿತಿ. ಭವಿಷ್ಯ ಹೇಳೋದ್ರಲ್ಲಿ ನನಗೆ ನಂಬಿಕೆ ಇಲ್ಲ, ಭವಿಷ್ಯ ಹೇಳೋರನ್ನೂ ನಾನು ನಂಬಲ್ಲ. ನನಗಿದ್ದ ಮಾಹಿತಿಯನ್ನು ನಾನು ನಿಮಗೆ ಹೇಳಿದ್ದೆ ಅಷ್ಟೇ ಎಂದರು.
Advertisement
Advertisement
ನಾನು ಯಾವತ್ತೂ ಭವಿಷ್ಯ ಹೇಳಿಲ್ಲ, ಭವಿಷ್ಯ ಹೇಳೋದರಲ್ಲಿ ನನಗೆ ನಂಬಿಕೆ ಇಲ್ಲ. ನಳಿನ್ ಕುಮಾರ್ ಕಟೀಲ್ ಆಡಿಯೋವನ್ನು ಡಿನೈ ಮಾಡಿದ್ದಾರೆ. ಡಿನೈ ಮಾಡ್ತಿರೋದು ಸುಳ್ಳಾಗಿರಲೂಬಹುದು. ಒಬ್ಬ ಕರಪ್ಟ್ ಸಿಎಂ ಹೋಗ್ಬೇಕು ಅನ್ನೋದಷ್ಟೇ ನಮ್ಮದು. ಹೈಕಮಾಂಡ್ ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನ ಕಟೀಲ್ ಹೇಳಿಕೊಂಡಿರಬಹುದು. ಆದರೆ ಇದು ತಾವು ಹೇಳದ್ದಲ್ಲ, ಆಡಿಯೋ ತಮ್ಮದಲ್ಲ ಅಂತ ಕಟೀಲ್ ಹೇಳಿಕೊಂಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: Exclusive ಸಿಎಂ ಬದಲಾವಣೆ ಫಿಕ್ಸ್ – ಕಟೀಲ್ ಆಡಿಯೋ ವೈರಲ್
Advertisement
ಆಡಿಯೋ ಬಗ್ಗೆ ತನಿಖೆ ನಡೆಸಲು ಸಿಎಂ ಗೆ ಮನವಿ ಮಾಡೊದಾಗಿ ಕಟೀಲ್ ಹೇಳಿದ್ದಾರೆ. ಶೆಟ್ಟರ್ ಮತ್ತು ಈಶ್ವರಪ್ಪ ಅವರನ್ನ ಬದಲಾವಣೆ ಮಾಡುವ ಬಗ್ಗೆಯೂ ಕಟೀಲ್ ಆಡಿಯೋದಲ್ಲಿ ಹೇಳಿದ್ದಾರೆ. ಸಿಎಂ ಬದಲಾದ ಮೇಲೆ ಕೆಲವು ಸಚಿವರ ಬದಲಾವಣೆ ಕೂಡ ಆಗಬಹುದು ಎಂದು ತಿಳಿಸಿದರು. ಇದನ್ನೂ ಓದಿ: Exclusive: ಜುಲೈ 26ಕ್ಕೆ ಸಿಎಂ ಯಡಿಯೂರಪ್ಪ ರಾಜೀನಾಮೆ ಸಾಧ್ಯತೆ – ರಾಜಾಹುಲಿಗೆ ಹೈಕಮಾಂಡ್ ಸೂಚನೆ!
ಇದೇ ವೇಳೆ ದೆಹಲಿ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾವ ಕಾರಣಕ್ಕೆ ಕರೆದಿದ್ದಾರೆ ಅನ್ನೋದು ನಿಮಗೆ ಹೇಳಕ್ಕೆ ಆಗುತ್ತಾ…? ನನಗೂ ಅದರ ಬಗ್ಗೆ ಗೊತ್ತಿಲ್ಲ. ರಾಹುಲ್ ಗಾಂಧಿ ನಮ್ಮ ವರಿಷ್ಠರು ಕರೆದಿದ್ದಾರೆ ಹೋಗುತ್ತಿದ್ದೇನೆ. ಪದಾಧಿಕಾರಿಗಳ ನೇಮಕ ವಿಚಾರ ನಿಮಗೆ ಹೇಳಿದ್ದಾರಾ..ಯಾವ ವಿಚಾರಕ್ಕೆ ಕರೆದಿದ್ದಾರೆ ಅನ್ನೋದು ಯಾರಿಗೆ ಗೊತ್ತು. ಸುಮ್ಮನೆ ಊಹಾಪೋಹ ಮಾಡಬೇಡಿ ಎಂದಿದ್ದಾರೆ.