ಅಬುಧಾಬಿ: ಯುಜ್ವೇಂದ್ರ ಚಹಲ್ ಅವರ ಭಾವಿ ಪತ್ನಿ ಧನಶ್ರೀ ವರ್ಮಾ ಪಂದ್ಯಕ್ಕೂ ಮುನ್ನ ಚಹಲ್ ಅವರ ರೂಮಿಗೆ ಬಂದು ಆರ್ಸಿಬಿ ಸ್ಪಿನ್ನರ್ ಗೆ ಸರ್ಪ್ರೈಸ್ ನೀಡಿರುವ ವಿಡಿಯೋವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತಮ್ಮ ಯೂಟ್ಯೂಬ್ ಖಾತೆಯನ್ನು ಹಂಚಿಕೊಂಡಿದೆ.
ಯುಜ್ವೇಂದ್ರ ಚಹಲ್ ಅವರು ಈ ಬಾರಿಯ ಐಪಿಎಲ್ನಲ್ಲಿ ಆಡಿರುವ 10 ಪಂದ್ಯಗಳಲ್ಲಿ 15 ವಿಕೆಟ್ ಪಡೆದು ಮಿಂಚುತ್ತಿದ್ದಾರೆ. ಅಕ್ಟೋಬರ್ 17ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧದ ನಡೆದ ಲೀಗ್ ಪಂದ್ಯದ ಮೊದಲು ಧನಶ್ರೀ ವರ್ಮಾ ಚಹಲ್ಗೆ ತಿಳಿಯದಂತೆ ಅವರ ರೂಮ್ ಬಳಿ ಬಂದಿದ್ದು, ಈ ವೇಳೆ ಚಹಲ್ ಶಾಕ್ ಆಗಿರುವ ಹಳೆಯ ವೀಡಿಯೋವನ್ನು ಆರ್ಸಿಬಿ ತನ್ನ ಬೋಲ್ಡ್ ಡೈರೀಸ್ನಲ್ಲಿ ಹಂಚಿಕೊಂಡಿದೆ.
Advertisement
Advertisement
ಈ ವೀಡಿಯೋವನ್ನು ಶುಕ್ರವಾರ ಶೇರ್ ಮಾಡಿರುವ ಆರ್ಸಿಬಿ ತಂಡ ಯುಜಿಯ ಖುಷಿಗೆ ಇದೇ ದೊಡ್ಡ ಕಾರಣ ಎಂಬ ಕ್ಯಾಪ್ಶನ್ ನೀಡಿದೆ. ಈ ವೀಡಿಯೋದಲ್ಲಿ ಮೊದಲು ಚಹಲ್ ಹ್ಯಾಪಿ ಆಗಿ ಕುಣಿಯುತ್ತಾ ಹೋಗುತ್ತಿರುತ್ತಾರೆ. ನಂತರ ಈ ಖುಷಿಗೆ ಕಾರಣ ಏನು ಗೊತ್ತೆ ಎಂಬ ಪ್ರಶ್ನೆ ಬರುತ್ತೆ. ನಂತರ ಚಹಲ್ಗೆ ತಿಳಿಯದಂತೆ ಧನಶ್ರೀ ವರ್ಮಾ ಅವರು ಅವರ ರೂಮಿಗೆ ಬಂದು ಸರ್ಪ್ರೈಸ್ ನೀಡಿರುವ ವೀಡಿಯೋವನ್ನು ಹಾಕಲಾಗಿದೆ.
Advertisement
Advertisement
ಈ ವೀಡಿಯೋದಲ್ಲಿ ಮಾತನಾಡಿರುವ ಧನಶ್ರೀ, ನಾನು ನಿಮ್ಮೆಲ್ಲರ ಪ್ರೀತಿಯ ಚಹಲ್ ಗೆಳತಿ ಧನಶ್ರೀ ವರ್ಮಾ, ನಾನು ಅಕ್ಟೋಬರ್ 11ರಂದೇ ದುಬೈಗೆ ಬಂದಿದ್ದೆ. ಅದು ಚಹಲ್ಗೆ ಗೊತ್ತಿತ್ತು. ಆದರೆ ಇಂದು ನಾನು ಪಂದ್ಯಕ್ಕೂ ಮುನ್ನವೇ ರೂಮಿಗೆ ಬರುತ್ತೇನೆ ಎಂದು ಆತನಿಗೆ ತಿಳಿದಿಲ್ಲ. ನಾನು ಸರ್ಪ್ರೈಸ್ ನೀಡಲು ಹೋಗುತ್ತಿದ್ದೇನೆ. ಬನ್ನಿ ಚಹಲ್ ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎಂದು ನೋಡೋಣ ಎಂದು ರೂಮಿನ ಕಡೆಗೆ ಹೋಗುತ್ತಾರೆ.
ರೂಮಿನ ಬಳಿ ಹೋಗಿ ಧನಶ್ರೀ ವರ್ಮಾ ಡೂರ್ ತಟ್ಟಿದಾಗ ಚಹಲ್ ಬಂದು ಓಪನ್ ಮಾಡಿ, ನೀನು ಪಂದ್ಯ ಮುಗಿದ ನಂತರ ಬರಬೇಕು ಎಂದು ಕೇಳುತ್ತಾರೆ. ಅದಕ್ಕೆ ಧನಶ್ರೀ ಇದು ಸರ್ಪ್ರೈಸ್ ಎಂದು ಹೇಳಿ ಅಪ್ಪಿಕೊಳ್ಳುತ್ತಾರೆ. ಜೊತೆಗೆ ಚಹಲ್ ಧನುಶ್ರೀಯನ್ನು ಬಹಳ ಮಿಸ್ ಮಾಡುತ್ತಿದ್ದೆ ಎಂದು ಹೇಳುತ್ತಾರೆ. ಅಕ್ಟೋಬರ್ 11ರಂದು ದುಬೈಗೆ ಬಂದಿದ್ದ ಧನಶ್ರೀ ವರ್ಮಾ ಅಕ್ಟೋಬರ್ 17ರವರೆಗೆ ಕ್ವಾಂರಟೈನ್ ಆಗಿದ್ದರು. ಇದನ್ನು ಓದಿ: ಭಾವಿ ಪತಿ ಪ್ರಶಸ್ತಿ ಪಡೆಯುತ್ತಿದ್ದಂತೆ ಟಿವಿ ಎದುರೇ ಚಹಲ್ ಪ್ರೇಯಸಿ ಡ್ಯಾನ್ಸ್
ಅಂದಹಾಗೇ ಚಹಲ್ ಹಾಗೂ ಧನುಶ್ರೀ ಅವರ ನಿಶ್ಚಿತಾರ್ಥ ಎರಡು ಕುಟುಂಬಗಳ ಸಮ್ಮುಖದಲ್ಲಿ ಆಗಸ್ಟ್ 8 ರಂದು ನಡೆದಿತ್ತು. ಈ ವಿಚಾರವನ್ನು ಸ್ವತಃ ಚಹಲ್ ತಮ್ಮ ಇನ್ಸ್ಟಾದಲ್ಲಿ ಘೋಷಿಸಿದ್ದರು. ಧನಶ್ರೀ ವರ್ಮಾ ಡಿಜಿಟಲ್ ಕಂಟೆಂಟ್ ಕ್ರಿಯೆಟರ್ ಆಗಿದ್ದಾರೆ. ಅಲ್ಲದೇ ಡಾಕ್ಟರ್ ಕೊರಿಯೋಗ್ರಾಫರ್, ಯೂಟ್ಯೂಬರ್ ಮತ್ತು ಧನಶ್ರೀ ವರ್ಮಾ ಕಂಪನಿಯ ಸ್ಥಾಪಕಿಯಾಗಿದ್ದಾರೆ. ಚಹಲ್ ಮದುವೆ ದಿನಾಂಕ ಇನ್ನೂ ಘೋಷಣೆಯಾಗಿಲ್ಲ.