ಚೆನ್ನೈ: ಐಪಿಎಲ್ ಪ್ರಾರಂಭಗೊಳ್ಳುತ್ತಿದ್ದಂತೆ ಮೊದಲ ಪಂದ್ಯದಿಂದಲೇ ಬ್ಯಾಟ್ಸ್ ಮ್ಯಾನ್‍ಗಳು ಸಿಕ್ಸರ್ ಗಳ ಹಬ್ಬ ಶುರುಮಾಡಿಕೊಂಡಿದ್ದಾರೆ. ಆರ್‌ಸಿಬಿ ಮತ್ತು ಮುಂಬೈ ನಡುವಿನ ಮೊದಲ ಪಂದ್ಯದಲ್ಲಿ ಆರ್‌ಸಿಬಿ ತಂಡದ ಬ್ಯಾಟ್ಸ್ ಮ್ಯಾನ್ ಗ್ಲೇನ್ ಮ್ಯಾಕ್ಸ್ ವೆಲ್ ಸಿಡಿಸಿದ ಆಕರ್ಷಕ ಸಿಕ್ಸ್ ಕಂಡ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ದಂಗಾಗಿದ್ದಾರೆ.
Advertisement
ಮುಂಬೈ ವಿರುದ್ಧದ ಪಂದ್ಯದಲ್ಲಿ 160 ರನ್‍ಗಳ ಸವಾಲಿನ ಮೊತ್ತವನ್ನು ಬೆನ್ನಟ್ಟಲು ಹೊರಟ ವೇಳೆ ಆರ್‌ಸಿಬಿ ತಂಡದ ಆಟಗಾರ ಮ್ಯಾಕ್ಸ್ ವೆಲ್, 11ನೇ ಓವರ್ ಎಸೆಯಲು ಬಂದ ಕೃಣಾಲ್ ಪಾಂಡ್ಯ ಅವರ ಮೊದಲ ಎಸೆತವನ್ನೇ ಭರ್ಜರಿ ಸಿಕ್ಸರ್ ಗಟ್ಟಿದರು. ಈ ಬಾಲ್ 100 ಮೀಟರ್ ಮೇಲೆ ಹೋಗಿ ಸ್ಟೇಡಿಯಂನಿಂದ ಹೊರ ಬಿದ್ದಿತ್ತು. ಇದನ್ನು ನಾನ್‍ಸ್ಟ್ರೈಕ್‍ನಲ್ಲಿದ್ದ ವಿರಾಟ್ ಕಂಡು ಸ್ಟನ್ ಆಗಿ ಮುಖದ ಭಾವದ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿರು.
Advertisement
Advertisement
ಈ ಪಂದ್ಯದಲ್ಲಿ ಮ್ಯಾಕ್ಸ್ ವೆಲ್ 39ರನ್(28 ಎಸೆತ, 3ಬೌಂಡರಿ, 2 ಸಿಕ್ಸರ್) ಸಿಡಿಸಿ ತಂಡಕ್ಕೆ ಆಸರೆಯಾದರು. ಈ ಬಾರಿಯ ಐಪಿಎಲ್‍ನಲ್ಲಿ ಆರ್‌ಸಿಬಿ ತಂಡದ ಪರ ಆಡುತ್ತಿರುವ ಮ್ಯಾಕ್ಸಿ ಆಡಿದ ಮೊದಲ ಪಂದ್ಯದಿಂದಲೇ ಅಬ್ಬರಿಸುವ ಸೂಚನೆ ನೀಡಿದ್ದಾರೆ. ಆದರೆ ಕಳೆದ ಬಾರಿಯ ಐಪಿಎಲ್‍ನಲ್ಲಿ ಪಂಜಾಬ್ ಪರ ಆಡುತ್ತಿದ್ದ ಮ್ಯಾಕ್ಸಿ ಕಳಪೆ ಪ್ರದರ್ಶನ ನೀಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ಕಳೆದ ಬಾರಿ ಪಂಜಾಬ್ ಪರ 13 ಪಂದ್ಯಗಳನ್ನು ಆಡಿ 108 ರನ್ ಬಾರಿಸಿದ್ದರು ಈ 13 ಪಂದ್ಯಗಳಲ್ಲೂ ಕೂಡ ಮ್ಯಾಕ್ಸ್‍ವೆಲ್ ಬ್ಯಾಟ್‍ನಿಂದ ಒಂದೇ ಒಂದು ಸಿಕ್ಸ್ ಸಿಡಿದಿರಲಿಲ್ಲ. ಆದರೆ ಈ ಬಾರಿ ಭರ್ಜರಿ ಲಯದಲ್ಲಿರುವಂತೆ ಕಂಡು ಬಂದಿರುವ ಮ್ಯಾಕ್ಸ್ ವೆಲ್ ಬ್ಯಾಟ್‍ನಿಂದ ರನ್‍ಹೊಳೆ ಹರಿದು ಬಂದರೆ ಆರ್‌ಸಿಬಿ ಚಾಂಪಿಯನ್ ಆಗೋದ್‍ರಲ್ಲಿ ನೋ ಡೌಟ್.
Advertisement