ಮುಂಬೈ: ಮೋರಿ ಕ್ಲೀನ್ ಮಾಡಿಸಿಲ್ಲ ಎಂದು ಕಂಟ್ರಾಕ್ಟರ್ ಮೇಲೆ ಶಾಸಕ ಕಸ ಸುರಿದಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಚರಂಡಿಗಳನ್ನು ಸರಿಯಾಗಿ ಸ್ವಚ್ಛ ಮಾಡಿಲ್ಲ ಎಂದು ಶಿವಸೇನಾ ಶಾಸಕ ಕಂಟ್ರಾಕ್ಟರ್ನ್ನು ಮಳೆ ನೀರು ತುಂಬಿರುವ ರಸ್ತೆಯಲ್ಲಿ ಕೂರಿಸಿ, ಅವರ ಮೇಲೆ ಕಸ ಎಸೆಯುವಂತೆ ಜನರಿಗೆ ಹೇಳಿದ್ದಾರೆ. ಚರಂಡಿಗಳನ್ನು ಸರಿಯಾಗಿ ಸ್ವಚ್ಛ ಮಾಡಿಲ್ಲ ಎಂದು ಶಾಸಕರು ಗುತ್ತಿಗೆದಾರರಿಗೆ ಈ ಶಿಕ್ಷೆ ನೀಡುವ ಮೂಲಕವಾಗಿ ಸುದ್ದಿಯಾಗಿದ್ದಾರೆ.
Advertisement
Advertisement
ಮುಂಬೈನ ಕಂಡಿವಲಿ ಕ್ಷೇತ್ರದ ಶಿವಸೇನಾ ಶಾಸಕ ದಿಲೀಪ್ ಲ್ಯಾಂಡೆ ಕಂಟ್ರಾಕ್ಟರ್ ಜೊತೆ ಈ ರೀತಿ ನಡೆದುಕೊಂಡಿದ್ದಾರೆ. ಶಾಸಕ ದಿಲೀಪ್ ನೀರು ತುಂಬಿರುವ ರಸ್ತೆಯಲ್ಲಿ ಕುಳಿತುಕೊಳ್ಳಲು ಗುತ್ತಿಗೆದಾರರಿಗೆ ಹೇಳಿದ್ದಾರೆ. ನಂತರ ಕಸವನ್ನು ಆ ಗುತ್ತಿಗೆದಾರನ ಮೇಲೆ ಸುರಿಯುವಂತೆ ಹೇಳಿದ್ದಾರೆ. ಇದನ್ನೂ ಓದಿ: ವೀಡಿಯೋ ವೈರಲ್: ಸೀರೆಯುಟ್ಟು ಮ್ಯಾನ್ಹೋಲ್ಗೆ ಇಳಿದ ಮುನ್ಸಿಪಲ್ ಆಫೀಸರ್
Advertisement
Advertisement
ಮುಂಬೈನಲ್ಲಿ ಕಳೆದ ಕೆಲವು ದಿನಗಳಿಂದ ಮುಂಗಾರು ಮಳೆಯಾಗುತ್ತಿದೆ. ಚರಂಡಿಗಳು ಬ್ಲಾಕ್ ಆಗಿರುವುದರಿಂದ ಮಳೆ ನೀರು ಸರಾಗವಾಗಿ ಹೋಗದೆ, ರಸ್ತೆಗಳು ಜಲಾವೃತಗೊಳ್ಳುತ್ತಿವೆ. ಪರಿಸ್ಥಿತಿ ಹೀಗಿದ್ದರೂ ಸಹ ಗುತ್ತಿಗೆದಾರ ಚರಂಡಿಗಳನ್ನು ಸ್ವಚ್ಛಗೊಳಿಸಲು ಮುಂದಾಗಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ದಿಶಾ ಪಟಾನಿ ಬಿಕಿನಿ ಫೋಟೋಗೆ ಪಡ್ಡೆಗಳು ಫಿದಾ
ರಸ್ತೆಗಳು ಜಲಾವೃತಗೊಳ್ಳದಂತೆ ನೋಡಿಕೊಳ್ಳುವುದು ಅವರ ಜವಾಬ್ದಾರಿಯಾಗಿದೆ. ಆದರೆ ತಮ್ಮ ಕರ್ತವ್ಯ ನಿಭಾಯಿಸುವಲ್ಲಿ ಅವರು ವಿಫಲರಾಗಿದ್ದಾರೆ. ಜನರು ನನ್ನ ಮೇಲೆ ನಂಬಿಕೆ ಇಟ್ಟು ನನ್ನನ್ನು ಶಾಸಕನನ್ನಾಗಿ ಆಯ್ಕೆ ಮಾಡಿದ್ದಾರೆ. ಹೀಗಾಗಿ ನಾನು ನನ್ನ ಕರ್ತವ್ಯಗಳನ್ನು ಮಾಡುತ್ತಿದ್ದೇನೆ. ನಾನು ಸ್ಥಳೀಯ ಪಕ್ಷದ ಘಟಕದ ಮುಖ್ಯಸ್ಥರು ಹಾಗೂ ಶಿವ ಸೈನಿಕರನ್ನು ಕರೆದುಕೊಂಡು ಬಂದು ಚರಂಡಿಗಳನ್ನು ಸ್ವಚ್ಛಗೊಳಿಸಿದ್ದೇನೆ. ಗುತ್ತಿಗೆದಾರ ತನ್ನ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿಲ್ಲವೆಂದು ಆತನನ್ನು ಇಲ್ಲಿ ಕರೆದು ಶಿಕ್ಷೆ ನೀಡಲಾಯಿತು ಎಂದು ಶಾಸಕ ದಿಲೀಪ್ ಲ್ಯಾಂಡೆ ಹೇಳಿದ್ದಾರೆ. ಇದನ್ನೂ ಓದಿ: ಮದ್ವೆಯಾದ ಮೊದಲ ರಾತ್ರಿಯೇ ತಾನು ಯಾವುದಕ್ಕೂ ಉಪಯೋಗವಿಲ್ಲದವನೆಂದ ವರ- ವಧು
ವೀಡಿಯೋ ವೈರಲ್: ಸೀರೆಯುಟ್ಟು ಮ್ಯಾನ್ಹೋಲ್ಗೆ ಇಳಿದ ಮುನ್ಸಿಪಲ್ ಆಫೀಸರ್ https://t.co/meqbBUnXUd#ViralVideo #Manhole #KannadaNews #Cleaning
— PublicTV (@publictvnews) June 11, 2021
ಇತ್ತೀಚೆಗಷ್ಟೇ ಮುಂಬೈನಲ್ಲಿ ಒಬ್ಬ ಮಹಿಳಾ ಮುನ್ಸಿಪಲ್ ಆಫೀಸರ್ ಖುದ್ದಾಗಿ ಮ್ಯಾನ್ಹೋಲ್ಗೆ ಇಳಿದು ಚರಂಡಿ ಸ್ವಚ್ಛತಾ ಕಾರ್ಯವನ್ನು ಪರಿಶೀಲಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು.