CrimeDistrictsKarnatakaLatestMain PostMysuru

ಮೈಸೂರಲ್ಲಿ ಮುಖಕ್ಕೆ ಟಾರ್ಚ್ ಹಾಕಿದ್ದಕ್ಕೆ ಕಗ್ಗೊಲೆ

ಮೈಸೂರು: ಮುಖದ ಮೇಲೆ ಮೊಬೈಲ್ ಟಾರ್ಚ್ ಬಿಟ್ಟಿದ್ದಕ್ಕೆ ಕೊಲೆ ನಡೆದ ಪ್ರಸಂಗವೊಂದು ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಸೋಮಶೇಖರ್(36) ಮೃತ ದುರ್ದೈವಿ. ರೌಡಿ ಶೀಟರ್ ಸತ್ಯ ಎಂಬಾತ ಮೈಸೂರಿನ ಬಿ.ಎಂ.ಶ್ರೀ.ನಗರದಲ್ಲಿ ಸೋಮಶೇಖರ್ ನನ್ನು ಕೊಲೆ ಮಾಡಿದ್ದಾನೆ.

ಮುಖಕ್ಕೆ ಟಾರ್ಚ್ ಹಾಕಿದನೆಂದು ಸಿಟ್ಟುಗೊಂಡ ಸತ್ಯ, ಸೋಮಶೇಖರ್ ನನ್ನು ಆಯುಧದಿಂದ ಇರಿದು ಕೊಲೆ ಮಾಡಿದ್ದಾನೆ. ಹತ್ಯೆಯ ಬಳಿಕ ಆರೋಪಿ ರೌಡಿಶೀಟರ್ ಸತ್ಯ ಪರಾರಿಯಾಗಿದ್ದಾನೆ.

ಈ ಸಂಬಂಧ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Back to top button