ವಾಷಿಂಗ್ಟನ್: ಮಾಹಿತಿ ತಂತ್ರಜ್ಞಾನ ಕಂಪನಿ ಮೈಕ್ರೋಸಾಫ್ಟ್ ಚೀನಿ ಟಿಕ್ಟಾಕ್ ಅಪ್ಲಿಕೇಶನ್ ಖರೀದಿಸುತ್ತಾ ಎಂಬ ಪ್ರಶ್ನೆ ಎದ್ದಿದೆ.
ಬೈಟ್ಡ್ಯಾನ್ಸ್ ಕಂಪನಿಯ ಟಿಕ್ಟಾಕ್ ಅಪ್ಲಿಕೇಶನ್ ಖರೀದಿ ಸಂಬಂಧ ಮಾತುಕತೆ ಆರಂಭವಾಗಿದೆ. ಸೋಮವಾರ ಈ ವಿಚಾರ ಅಧಿಕೃತವಾಗಿ ಪ್ರಕಟವಾಗಲಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
Advertisement
ಮೈಕ್ರೋಸಾಫ್ಟ್ ಇಲ್ಲಿಯವರೆಗೂ ಸಾಮಾಜಿಕ ಜಾಲತಾಣಕ್ಕೆ ಮಾರುಕಟ್ಟೆಯ ಮೇಲೆ ಕಾಲಿಟ್ಟಿಲ್ಲ. ಈ ನಿಟ್ಟಿನಲ್ಲಿ ವಿಡಿಯೋ ಶೇರಿಂಗ್ ಖರೀದಿಸಲು ಮುಂದಾಗುತ್ತಿದೆ ಎಂದು ವರದಿಯಾಗಿದೆ.
Advertisement
Advertisement
ಖರೀದಿ ವಿಚಾರವಾಗಿ ಮೈಕ್ರೋಸಾಫ್ಟ್ ಮತ್ತು ಬೈಡ್ ಡ್ಯಾನ್ಸ್ ಕಂಪನಿ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ. ವಿದೇಶಿ ಹೂಡಿಕೆ ಇರುವ ಕಂಪನಿಯನ್ನು ಖರೀದಿಸಬೇಕಾದರೆ ಅಮೆರಿಕ ಸರ್ಕಾರದ ಅನುಮತಿ ಅಗತ್ಯವಾಗಿದೆ. ಅಮೆರಿಕ ಮತ್ತು ಚೀನಾ ಸಂಬಂಧ ಮೊದಲೇ ವ್ಯಾಪಾರ ಸಮರದಿಂದ ಹಳಸಿತ್ತು. ಈಗ ಕೋವಿಡ್ 19ನಿಂದಾಗಿ ಸಂಬಂಧ ಮತ್ತಷ್ಟು ಹಳಸಿದೆ. ಹೀಗಿರುವಾಗ ಸರ್ಕಾರ ಈ ಖರೀದಿ ಮಾತುಕತೆಗೆ ಯಾವ ರೀತಿಯ ಪ್ರತಿಕ್ರಿಯೆ ನೀಡಬಹುದು ಎಂಬ ಕುತೂಹಲ ಎದ್ದಿದೆ.
Advertisement
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಅವರು ಜುಲೈ ಮೊದಲ ವಾರದಲ್ಲಿ, ಟಿಕ್ಟಾಕ್ ಸೇರಿದಂತೆ ಚೀನಾದ ಹಲವು ಮೊಬೈಲ್ ಅಪ್ಲಿಕೇಷನ್ಗಳನ್ನು ನಿಷೇಧಿಸಲು ಚಿಂತನೆ ನಡೆದಿದೆ ಎಂದು ಹೇಳಿದ್ದರು.
ಗಲ್ವಾನ್ ಘರ್ಷಣೆಯ ಬಳಿಕ ಭಾರತ ಟಿಕ್ಟಾಕ್ ಅಪ್ಲಿಕೇಶನ್ ಭದ್ರತೆ ಮತ್ತು ದೇಶ ಪ್ರಜೆಗಳ ಖಾಸಗಿತನವನ್ನು ರಕ್ಷಿಸುವ ಸಂಬಂಧ ಟಿಕ್ಟಾಕ್ ಸೇರಿದಂತೆ 59 ಅಪ್ಲಿಕೇಶನ್ಗಳನ್ನು ನಿಷೇಧಿಸುವ ಮೂಲಕ ಡಿಜಿಟಲ್ ಸ್ಟ್ರೈಕ್ ಮಾಡಿತ್ತು.