Bengaluru CityCinemaKarnatakaLatestMain PostSandalwood

ಮೇಘನಾ ರಾಜ್ ಭೇಟಿ ಮಾಡಿದ ಸ್ಯಾಂಡಲ್‍ವುಡ್ ಹಿರಿಯ ತಾರೆಯರು

– ಸುಧಾರಾಣಿ, ಮಾಳವಿಕಾ ಅವಿನಾಶ್, ಶೃತಿ ಸೇರಿ ಹಲವರು ಭೇಟಿ

ಬೆಂಗಳೂರು: ಸ್ಯಾಂಡಲ್‍ವುಡ್ ಹಿರಿಯ ತಾರೆಯರು ನಟ ಚಿರಂಜೀವಿ ಸರ್ಜಾ ಪತ್ನಿ, ನಟಿ ಮೇಘನಾ ರಾಜ್ ಅವರನ್ನು ಭೇಟಿ ಮಾಡಿ, ಕುಶಲೋಪಚರಿ ವಿಚಾರಿಸಿದ್ದಾರೆ.

ಈ ಕುರಿತು ಮಾಳ್ವಿಕಾ ಅವಿನಾಶ್ ಅವರು ಟ್ವೀಟ್ ಮಾಡುವ ಮೂಲಕ ಸ್ಪಷ್ಟಪಡಿಸಿದ್ದಾರೆ. ಭೇಟಿಯಾದ ಕುರಿತು ಫೋಟೋಗಳನ್ನು ಹಂಚಿಕೊಂಡು ಸಾಲುಗಳನ್ನು ಬರೆದಿರುವ ಮಾಳವಿಕಾ ಅವಿನಾಶ್, ನಾನು ಬಾಲ ನಟಿಯಾಗಿದ್ದಾಗಿನಿಂದ ಸುಂದರ್ ರಾಜ್ ಅವರನ್ನು ಬಲ್ಲೆ. ನಾವಿಬ್ಬರೂ ಪ್ರತ್ಯೇಕವಾಗಿ ಹಾಗೂ ಒಟ್ಟಿಗೆ ಚಲನಚಿತ್ರ ಭ್ರಾತೃತ್ವದಲ್ಲಿ ತುಂಬಾ ಪ್ರಯಾಣಿಸಿದ್ದೇವೆ ಎಂದು ಹೇಳಿದ್ದಾರೆ.

ಇದೀಗ ಪ್ರಮೀಳಾ ಅವರು ಪ್ರೀತಿಯಿಂದ ಮಾಡಿದ ಮಸಾಲಾ ದೋಸೆಯೊಂದಿಗೆ ತಾಯಿಯಾಗುತ್ತಿರುವ ಮೇಘನಾ ಅವರನ್ನು ಸುಧಾರಾಣಿ, ಶೃತಿ ಹಾಗೂ ಅವರ ಮಗಳು ಮಿಲಿ ಅವರೊಂದಿಗೆ ಭೇಟಿಯಾದೆವು. ಇದೊಂದು ಹೃದಯಸ್ಪರ್ಶಿ ಕ್ಷಣವಾಗಿತ್ತು ಎಂದು ಟ್ವೀಟ್‍ನಲ್ಲಿ ಬರೆದುಕೊಂಡಿದ್ದಾರೆ.

ಮಾಳವಿಕಾ ಅವಿನಾಶ್ ಅವರು ಸಿನಿಮಾ ಇಂಡಸ್ಟ್ರಿಯ ಉತ್ತಮ ಸ್ನೇಹಿತೆಯರಾದ ಸುಧಾರಾಣಿ, ಶೃತಿ ಹಾಗೂ ಸುಂದರ್ ರಾಜ್ ಕುಟುಂಬದವರೊಂದಿಗೆ ತೆಗೆದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಶೃತಿ ಮಗಳು ಮಿಲಿ ಸಹ ಸೇರಿದ್ದಾರೆ.

ಮೇಘನಾ ಗರ್ಭಿಣಿ ಹಿನ್ನೆಲೆ ಸ್ಯಾಂಡಲ್‍ವುಡ್ ಹಿರಿಯ ನಟಿಯರು ಭೇಟಿಯಾಗಿ ಮಾತುಕತೆ ನಡೆಸಿ ಸ್ವಲ್ಪ ಹೊತ್ತ ಕಾಲ ಕಳೆದು ಬಂದಿದ್ದಾರೆ. ಪರಸ್ಪರ ಮಾತುಕತೆ ನಡೆಸಿ, ಮೇಘನಾ ಅವರ ಆರೋಗ್ಯ ವಿಚಾರಿಸಿ ಬಂದಿದ್ದಾರೆ. ಅಲ್ಲದೆ ಕುಟುಂಬದೊಂದಿಗೆ ಕಾಲ ಕಳೆದು ಹರಟೆ ಹೊಡೆದಿದ್ದಾರೆ. ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಮೆಘನಾ ರಾಜ್ ಇತ್ತೀಚೆಗಷ್ಟೇ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಮನೆಯಲ್ಲೇ ಕುಟುಂಬಸ್ಥರ ಜೊತೆ ಕಾಲ ಕಳೆಯುತ್ತಿದ್ದಾರೆ. ಮೆಘನಾ ಅವರು ಸೃಜನ್ ಲೋಕೇಶ್ ಜೊತೆ ಸೆಲ್ಪೀ ಮಮ್ಮಿ ಗೂಗಲ್ ಡ್ಯಾಡಿ ಚಿತ್ರದಲ್ಲಿ ನಟಿಸಿದ್ದು, ಈ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರಮಂದಿರಗಳು ಪ್ರದರ್ಶನ ಆರಂಭಿಸಿದ ಬಳಿಕ ಚಿತ್ರ ಬಿಡುಗಡೆಯಾಗಲಿದೆ.

Leave a Reply

Your email address will not be published.

Back to top button