ಲಕ್ನೋ: ಜನವರಿ 18 ರಂದು ಅಪಹರಣಕ್ಕೊಳಗಾಗಿದ್ದ ಮೆಡಿಕಲ್ ಕಾಲೇಜ್ ವಿದ್ಯಾರ್ಥಿಯನ್ನು ಜಂಟಿ ಕಾರ್ಯಾಚರಣೆಯ ಮೂಲಕ ಉತ್ತರ ಪ್ರದೇಶದ ಗುಂಡಾ ಜಿಲ್ಲೆಯ ವಿಶೇಷ ಕಾರ್ಯಪಡೆ ರಕ್ಷಿಸುವಲ್ಲಿ ಯಶಸ್ವಿಯಾಗಿದೆ. ಅಪಹರಣಕ್ಕೊಳಗಾಗಿದ್ದ ವಿದ್ಯಾರ್ಥಿ ಕುಟುಂಬಸ್ಥರ ಬಳಿ 70 ಲಕ್ಷ ಬೇಡಿಕೆ ಇಟ್ಟಿದ್ದ ನಾಲ್ವರು ಆರೋಪಿಗಳಲ್ಲಿ ಮೂವರನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ.
ನಾಲ್ಕು ಜನ ಆರೋಪಿಗಳಲ್ಲಿ ಇಬ್ಬರು ವೈದ್ಯರು ಎಂದು ತಿಳಿದುಬಂದಿದ್ದು, ಅದರಲ್ಲಿ ಓರ್ವ ಮಹಿಳೆ ದೆಹಲಿ ಮೂಲದವಳಾಗಿದ್ದಾಳೆ. ಆರೋಪಿಗಳನ್ನು ಡಾ. ಅಭಿಷೇಕ್, ಡಾ. ಪ್ರೀತಿ ಮೆಹ್ರಾ, ನಿತೀಷ್ ಮತ್ತು ಮೋಹಿತ್ ಸಿಂಗ್ ಎಂದು ಗುರುತಿಸಲಾಗಿದ್ದು, ಇದೀಗ ಮೂರು ಜನ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.
Advertisement
Advertisement
ಅಪಹರಣಕ್ಕೊಳಗಾದ ಗೌರವ್ ಹಾಲ್ಡರ್ ಎಸ್ಸಿಪಿಎಸ್ ಕಾಲೇಜಿನ ಬಿಎಎಂಎಸ್ ವಿದ್ಯಾರ್ಥಿಯಾಗಿದ್ದು, ಉತ್ತರ ಪ್ರದೇಶದ ಬಹೇಚ್ ಜಿಲ್ಲೆಯ ನಿವಾಸಿ. ತನಿಖೆ ವೇಳೆ ಗೌರವ್ ಹಾಲ್ಡರ್, ಡಾ. ಅಭಿಷೇಕ್ ಸಿಂಗ್ ಸ್ನೇಹಿತೆ ಮತ್ತು ಡಾ ಪ್ರೀತಿ ಮೆಹ್ರಾರವರು ನಡೆಸಿದ ಹನಿಟ್ರ್ಯಾಪ್ ನಂತರ ಆರೋಪಿಗಳು ಅನಸ್ತೆಷಿಯಾ(ಮಾದಕ ವಸ್ತು) ನೀಡಿ ನನ್ನನ್ನು ದೆಹಲಿಯಿಂದ ಅಪಹರಿಸಿದ್ದಾರೆ ಹಾಗೂ ತನ್ನ ಕುಟುಂಬಸ್ಥರ ಬಳಿ 70 ಲಕ್ಷ ರೂ ನೀಡುವಂತೆ ಬೇಡಿಕೆ ಇಟ್ಟಿರುವುದಾಗಿ ತಿಳಿಸಿದ್ದಾರೆ.
Advertisement
ಈ ಕುರಿತಂತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಶ್ಚಿಮ ಉತ್ತರ ಪ್ರದೇಶದ ಪೊಲೀಸ್ ವರಿಷ್ಠಾಧಿಕಾರಿ(ಎಸ್ಪಿ) ಕುದೀಪ್ ನಾರಾಯಣ್ ಮತ್ತು ಗೊಂಡಾ ಎಸ್ ಪಿ ಶೈಲೇಂದ್ರ ಪಾಂಡೆ, ಇದೀಗ ಹಾಲ್ಡರ್ ಅವರನ್ನು ಎನ್ಸಿಆರ್ ನಲ್ಲಿ ಇರಿಸಲಾಗಿದೆ. ಈ ಕುರಿತಂತೆ ತನಿಖೆ ನಡೆಸುತ್ತಿರುವಾಗ ಆರೋಪಿಗಳ ಸುಳಿವು ಸಿಕ್ಕ ಬಳಿಕ ನೋಯ್ಡಾದ ಎಸ್ಟಿಎಫ್ ಮೆಹ್ರಾರವರು, ಶುಕ್ರವಾರ ನೋಯ್ಡಾ ಎಕ್ಸ್ಪ್ರೆಸ್ ವೇ ನಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಅಪಹರಣ ವೇಳೆ ಆರೋಪಿಗಳು ಬಳಸಿದ್ದ ಕಾರು, ಪಿಸ್ತೂಲ್, ಡ್ರಗ್ ಇಂಜೆಕ್ಷನ್ನನ್ನು ವಶಪಡಿಕೊಂಡಿದ್ದಾರೆ ಎಂದು ಹೇಳಿದರು.
Advertisement
ಈ ಪ್ರಕರಣದ ಪ್ರಮುಖ ಆರೋಪಿ ಡಾ. ಅಭಿಷೇಕ್ ಗುಂಡಾ ಜಿಲ್ಲೆಯ ನಿವಾಸಿ. ಆರೋಪಿ ಅಭಿಷೇಕ್ ದೆಹಲಿಯ ನಜಾಫ್ ಗರ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರೀತಿ ಮೆಹ್ರಾ ಜೊತೆ ಅಪರಿಹಿಸಲು ಸಂಚು ರೂಪಿಸಿ ಆಕೆಗೆ ಗೌರವ್ ಹಾಲ್ಡರ್ ನೊಂದಿಗೆ ಹನಿಟ್ರ್ಯಾಪ್ ಮಾಡಿ ನಂತರ ಆತನನ್ನು ಗುಂಡಾಗೆ ಬಂದು ಭೇಟಿ ಮಾಡುವಂತೆ ತಿಳಿಸುವುದಾಗಿ ಸೂಚಿಸಿದ್ದಾನೆ.
ಬಳಿಕ ಆರೋಪಿಗಳು ಆತನಿಗೆ ಡ್ರಗ್ ಇಂಜೆಕ್ಷನ್ ನೀಡಿ ದೆಹಲಿಯ ಬಕ್ಕರ್ ವಾಲಾ ಪ್ರದೇಶದ ಡಿಡಿಎ ಫ್ಲ್ಯಾಟ್ ವೊಂದರಲ್ಲಿ ಅಡವಿಸಿಟ್ಟಿದ್ದರು. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ರೋಹಿತ್ ಮತ್ತು ಸತೀಶ್ ಎಂಬ ಇಬ್ಬರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ತನಿಖೆ ವೇಳೆ ನಿತೀಶ್ ಕಾಲ್ ಸೆಂಟರ್ ಮೂಲಕ ಜನರಿಗೆ ನಕಲಿ ಕರೆ ಮಾಡಿ ಮೋಸ ಮಾಡುತ್ತಿರುವುದಾಗಿ ತಿಳಿಸಿದ್ದಾನೆ. ಅಲ್ಲದೆ ಕಳೆದ ವರ್ಷ ದೀಪಾವಳಿ ಸಂದರ್ಭದಲ್ಲಿ ಗೌರವ್ ನನ್ನು ಅಪಹರಿಸಲು ಸಂಚು ರೂಪಿಸಿದ್ದೆವು ಎಂದು ಸತ್ಯ ಬಹಿರಂಗ ಪಡಿಸಿದ್ದಾರೆ.