– ಮದ್ವೆಯಾಗೋದಾಗಿ ಭರವಸೆ ನೀಡಿ ಮೋಸ
– ಗೆಳೆಯನ ವಿರುದ್ಧ ಗಂಭೀರ ಆರೋಪ
ಮುಂಬೈ: 23 ವರ್ಷದ ಯುವತಿಯೊಬ್ಬಳು ಆತ್ಮಹತ್ಯೆ ನಿರ್ಧಾರ ತೆಗೆದುಕೊಂಡು ಸಾವಿಗೆ ಶರಣಾಗಿದ್ದಾಳೆ. ಈ ಘಟನೆ ಉತ್ತರ ಮುಂಬೈನ ಕಂಡಿವಾಲಿ ಪ್ರದೇಶದಲ್ಲಿ ಶನಿವಾರ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡಾಕೆಗೆ ವೈದ್ಯಕೀಯ ಶಿಕ್ಷಣ ಪಡೆಯಬೇಕೆಂಬ ಬಯಕೆಯಿತ್ತು. ಈ ವಿಚಾರ ಪೊಲೀಸರಿಗೆ ಸಿಕ್ಕಿದ ಆಕೆಯ ಡೆತ್ ನೋಟ್ ನಲ್ಲಿ ಬೆಳಕಿಗೆ ಬಂದಿದೆ. ಅಲ್ಲದೆ ಈ ನಿರ್ಧಾರ ತೆಗೆದುಕೊಳ್ಳಲು ತನಗೆ ತುಂಬಾ ಹತ್ತಿರವಾದ ಗೆಳೆಯನೇ ಕಾರಣ ಎಂದು ಆಕೆ ನೇರವಾಗಿ ಆರೋಪ ಮಾಡಿದ್ದಾಳೆ.
Advertisement
Advertisement
ಯುವತಿಯ ತಾಯಿ 2004ರಲ್ಲಿ ತೀರಿಕೊಂಡಿದ್ದರು. ಆ ಬಳಿಕ ಈಕೆ ತನ್ನ ಇಬ್ಬರು ಸಹೋದರರೊಂದಿಗೆ ತಂದೆಯ ಜೊತೆ ವಾಸವಾಗಿದ್ದಳು. ಈಕೆ 2015ರಲ್ಲಿ ವಿದ್ಯಾಭ್ಯಾಸ ಮುಗಿಸಿದ್ದಳು. ಆ ಬಳಿಕ ಮೆಡಿಕಲ್ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಪ್ರಯತ್ನಿಸುತ್ತಿದ್ದಳು.
Advertisement
ಯುವತಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಹೋದರಿ ಆತ್ಮಹತ್ಯೆ ಶರಣಾಗಿದ್ದನ್ನು ಕಂಡ ಸಹೋದರ ಕೂಡಲೇ ತನ್ನ ಕುಟುಂಬದವರಿಗೆ ಮಾಹಿತಿ ನೀಡಿದ್ದಾನೆ. ನಂತರ ಫ್ಯಾನಿನಿಂದ ಶವವನ್ನು ಇಳಿಸಿ ಬಳಿಕ ಪೊಲೀಸರಿಗೆ ಕರೆ ಮಾಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದರು.
Advertisement
ಗೆಳೆಯನ ಮೇಲೆ ಯುವತಿ ಆರೋಪ:
ಯುವತಿ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಡೆತ್ ನೋಟ್ ಸಿಕ್ಕಿದ್ದು, ಅದರಲ್ಲಿ ಯುವತಿ ತನ್ನ ಗೆಳೆಯನ ವಿರುದ್ಧ ಗಂಭೀರ ಆರೋಪ ಮಾಡಿದ್ದಾಳೆ. ಕಳೆದ 4 ವರ್ಷಗಳಿಂದ ತನ್ನ ತುಂಬಾನೇ ಹತ್ತಿರದ ಗೆಳೆಯನಾಗಿರುವ ಹೃತಿಕ್ ಮಿಶ್ರಾನಿಂದ ಮಾನಸಿಕವಾಗಿ ಸಾಕಷ್ಟು ನೊಂದಿದ್ದೇನೆ. ಮಿಶ್ರಾನಿಂದಾಗಿಯೇ ನನಗೆ ಎಲ್ಲಿಯೂ ಮೆಡಿಕಲ್ ಕಾಲೇಜು ಸೇರಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಅಲ್ಲದೆ ಆತ ತನ್ನನ್ನು ಮದುವೆಯಾಗುವುದಾಗಿ ಹೇಳಿ ಇದೀಗ ಬೇರೊಬ್ಬಳನ್ನು ಮದುವೆಯಾಗಲು ತೀರ್ಮಾನಿಸಿದ್ದಾನೆ. ಹೀಗಾಗಿ ಇಂದು ನಾನು ಈ ನಿಧಾರ ತೆಗೆದುಕೊಳ್ಳಲು ಆತನೇ ಕಾರಣ ಎಂದು ನೇರವಾಗಿ ಗೆಳೆಯನ ವಿರುದ್ಧ ಆರೋಪ ಮಾಡಿದ್ದಲ್ಲದೇ ಆತನ ಫೋನ್ ನಂಬರ್ ಹಾಗೂ ಮತ್ತೆ ಮೂವರು ಹೆಸರನ್ನು ಡೆತ್ನೋಟಿನಲ್ಲಿ ಬರೆದಿದ್ದಾಳೆ.
ತನಿಖೆ ಚುರುಕುಗೊಳಿಸಿದ ಪೊಲೀಸರು:
ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ಮಿಶ್ರಾ ವಿರುದ್ಧ ಐಪಿಸಿ ಸೆಕ್ಷನ್ 306 ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಆರೋಪಿ ಹಾಗೂ ಇತರ ಮೂವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.