ಬೆಂಗಳೂರು: ಮೆಟ್ರೋ ಸಂಚಾರಿಗಳಿಗೆ ಗುಡ್ ನ್ಯೂಸ್. ಇಂದಿನಿಂದ ಬೆಳಗ್ಗೆಯಿಂದ ಸಂಜೆಯವರೆಗೆ ದಿನವಿಡೀ ನಮ್ಮ ಮೆಟ್ರೋ ಸಂಚಾರ ಮಾಡಲಿದೆ.
ಬೆಳಗ್ಗೆ 7ರಿಂದ ಸಂಜೆ 6 ಗಂಟೆವರೆಗೆ ಮೆಟ್ರೋ ಹಳಿಯಲ್ಲಿ ಓಡಾಡಲಿದೆ. ಜನದಟ್ಟಣೆ ಇರುವೆಡೆ ಪ್ರತಿ 5 ನಿಮಿಷಕ್ಕೊಂದು ರೈಲು ಸಂಚರಿಸಿದರೆ ಜನದಟ್ಟಣೆ ಇಲ್ಲದೆಡೆ ಪ್ರತಿ 15 ನಿಮಿಷಕ್ಕೊಂದು ರೈಲು ಸಂಚರಿಸಲಿದೆ. ಪ್ರಯಾಣಿಕರ ದಟ್ಟಣೆಯನ್ನು ಅವಲಂಬಿಸಿ ಈ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರಕಟಣೆ ಹೇಳಿದೆ.
Advertisement
Advertisement
ಸ್ಮಾರ್ಟ್ ಕಾರ್ಡ್ ಜೊತೆ ಟೋಕನ್ ಪಡೆದು ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಆದರೆ ವೀಕೆಂಡ್ ಕರ್ಫ್ಯೂ ಇರುವ ಶನಿವಾರ ಮತ್ತು ಭಾನುವಾರ ಮೆಟ್ರೋ ಸಂಚಾರ ಇರುವುದಿಲ್ಲ.
Advertisement
ಲಾಕ್ ಡೌನ್ ಸಡಿಲಿಕೆ ನಂತರ, ಬೆಳಿಗ್ಗೆ 7 ರಿಂದ 11ರವರೆಗೆ ಮತ್ತು ಮಧ್ಯಾಹ್ನ 3 ರಿಂದ 6 ರವರೆಗೆ, ಅಂದರೆ ದಿನದಲ್ಲಿ 7 ಗಂಟೆ ಮಾತ್ರ ಮೆಟ್ರೊ ರೈಲು ಸಂಚರಿಸುತ್ತಿದ್ದವು. ಇಂದಿನಿಂದ ದಿನದಲ್ಲಿ 11 ಗಂಟೆ ಮೆಟ್ರೋ ಸೇವೆ ಲಭ್ಯವಾಗಲಿದೆ. ಇದನ್ನೂ ಓದಿ: ಮುಖ್ಯಮಂತ್ರಿಯಿಂದ್ಲೇ ಕೋವಿಡ್ ರೂಲ್ಸ್ ಬ್ರೇಕ್
Advertisement
ಪ್ರಯಾಣಿಕರು ತಮ್ಮ ಸ್ಮಾರ್ಟ್ ಕಾರ್ಡ್ ಗಳನ್ನು ನಿಗಮದ ವೆಬ್ ಸೈಟ್, ಆಪ್ ಬಳಸಿ ರಿಚಾರ್ಜ್ ಮಾಡಿ ಕೊಳ್ಳಬಹುದು. ಅಲ್ಲದೆ, ಮೆಟ್ರೊ ನಿಲ್ದಾಣಗಳಲ್ಲಿನ ಕೌಂಟರ್ ಗಳಲ್ಲಿಯೂ ಎಟಿಎಂ ಕಾರ್ಡ್ ಅಥವಾ ನಗದು ಬಳಸಿ ಖರೀದಿ ಅಥವಾ ರಿಚಾರ್ಜ್ ಮಾಡಿಸಬಹುದು.