BelgaumKarnatakaLatestMain Post

ಮೂಢನಂಬಿಕೆ ಮೊರೆ ಹೋದ ಬಿಜೆಪಿ ಶಾಸಕ – ಕ್ಷೇತ್ರದ ಪ್ರತಿ ಗಲ್ಲಿಗಳಲ್ಲಿ ಹೋಮ

ಬೆಳಗಾವಿ: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ಆರ್ಭಟ ಹೆಚ್ಚಾಗಿರುವ ಹಿನ್ನೆಲೆ ವಾತಾವರಣ ಶುದ್ಧಿ ಮಾಡಲು ಬಿಜೆಪಿ ಶಾಸಕ ಅಭಯ್ ಪಾಟೀಲ್ ಹೋಮ, ಹವನ ಮೊರೆ ಹೋಗಿದ್ದಾರೆ. ಸೆಮಿ ಲಾಕ್‍ಡೌನ್ ಮಧ್ಯೆ ಬೆಳಗಾವಿ ದಕ್ಷಿಣ ಬಿಜೆಪಿ ಶಾಸಕ ಅಭಯ್ ಪಾಟೀಲ್ ಹೋಮ ಹವನ ಮಾಡಿದ್ದಾರೆ. ಜೂನ್ 15ರ ವರೆಗೆ ಕ್ಷೇತ್ರದ ಎಲ್ಲ ಕಡೆ ಹೋಮ ಮಾಡುವುದಾಗಿ ತಿಳಿಸಿದ್ದಾರೆ.

ಬೆಳಗಾವಿ ದಕ್ಷಿಣ ಮತಕ್ಷೇತ್ರದ ಪ್ರತಿ ಗಲ್ಲಿ, ಬಡಾವಣೆಯಲ್ಲಿ ಅಭಯ ಪಾಟೀಲ್ ನೇತೃತ್ವದಲ್ಲಿ ಹೋಮ, ಹವನ ಕಾರ್ಯ ನಡೆಸಲಾಗಿದೆ. ದಕ್ಷಿಣ ಮತಕ್ಷೇತ್ರದ ಎಲ್ಲ ಗಲ್ಲಿ, ಬಡಾವಣೆಗಳ ಮನೆಗಳ ಮುಂದೆ ಅಗ್ನಿಕುಂಡ ಸ್ಥಾಪನೆ, ಅಗ್ನಿಕುಂಡದಲ್ಲಿ ಭೆರಣಿ, ಕರ್ಪೂರ, ತುಪ್ಪ, ಗುಗ್ಗಳ, ಬೇವಿನ ಎಲೆ, ಅಕ್ಕಿ, ಕವಡಿ ಧೂಪ ಹಾಗೂ ಲವಂಗ ಹಾಕಿ ಹೋಮ ಮಾಡಲಾಗಿದೆ.

ಹೋಮ ಹವನದಿಂದ ವಾತಾವರಣ ಶುದ್ಧಿಯಾಗಿ ಸೋಂಕು ನಿವಾರಣೆ ಆಗಲಿದೆ ಎಂಬ ನಂಬಿಕೆಯಿಂದ ಒಂದೇ ದಿನ 50 ಕಡೆಗಳಲ್ಲಿ ಹೋಮ ಮಾಡಲಾಗಿದೆ. ಜೂನ್ 15ರ ವರೆಗೆ ಕ್ಷೇತ್ರದ ಎಲ್ಲ ಕಡೆಯಲ್ಲಿ ಹೋಮ ಮಾಡಲಾಗುವುದು ಎಂದು ಅಭಯ ಪಾಟೀಲ್ ಹೇಳಿದ್ದಾರೆ.

Leave a Reply

Your email address will not be published.

Back to top button