ಚಿಕ್ಕೋಡಿ: ಸಾರಿಗೆ ನೌಕರರ ಮುಷ್ಕರದ ನಡುವೆಯು ಸಂಚಾರ ಮಾಡುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ಗೆ ಕಿಡಿಗೇಡಿಗಳು ಕಲ್ಲು ತೂರಿ ಪರಾರಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಾದಗೂಡು ಗ್ರಾಮದ ಬಳಿ ನಡೆದಿದೆ.
Advertisement
ಬಸ್ಗೆ ಕಲ್ಲು ತೂರಿದ್ದರಿಂದ ಬಸ್ನ ಮುಂಭಾಗದ ಗಾಜಿಗೆ ಹಾನಿಯಾಗಿದೆ. ಸಾರಿಗೆ ನೌಕರರ ಮುಷ್ಕರ ಮುಂದುವರೆದಿರುವ ಪರಿಣಾಮ ಮುಷ್ಕರದ ನಡುವೆಯೂ ಜಿಲ್ಲೆಯಲ್ಲಿ ಕೆಲವು ಬಸ್ಗಳು ಸಂಚಾರ ಮಾಡುತ್ತಿವೆ. ಈ ನಡುವೆ ಸಂಚಾರ ಮಾಡುತ್ತಿದ್ದ ಬಸ್ನ ಮೇಲೆ ಕಲ್ಲು ತೂರಾಟ ನಡೆದಿದೆ.
Advertisement
ಕೆ.ಎಸ್.ಆರ್.ಟಿಸಿ ಬಸ್ ಸಂಚರಿಸುತ್ತಿದ್ದಂತೆ ಯಾದಗೂಡು ಗ್ರಾಮ ಬಳಿ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಬಸ್ ಮೇಲೆ ಕಲ್ಲು ತೂರಿ ಪರಾರಿಯಾಗಿದ್ದಾರೆ. ಚಿಕ್ಕೋಡಿ- ಹುಕ್ಕೇರಿ ಪಟ್ಟಣಗಳ ನಡುವೆ ಈ ಬಸ್ ಸಂಚಾರ ಮಾಡುತ್ತಿತ್ತು. ಕಲ್ಲು ಹೊಡೆದ ಪರಿಣಾಮ ಚಾಲಕ ಸೇರಿದಂತೆ ಪ್ರಯಾಣಿಕರಿಗೆ ಯಾವುದೇ ಅಪಾಯ ಸಂಭವಿಸಿಲ್ಲ.
Advertisement
Advertisement
ಕಲ್ಲು ತೂರಿದ ನಂತರ ಹುಕ್ಕೇರಿ ಬಸ್ ನಿಲ್ದಾಣಕ್ಕೆ ಚಾಲಕ ಬಸ್ ತೆಗೆದುಕೊಂಡು ಬಂದು ಘಟನೆಯ ಕುರಿತು ಮಾಹಿತಿ ನೀಡಿದ್ದಾರೆ. ಹುಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಹುಕ್ಕೇರಿ ಠಾಣೆಯ ಪಿ.ಎಸ್.ಐ ಸಿದ್ದರಾಮಪ್ಪ ಉನ್ನದ ಭೇಟಿ ನೀಡಿ ಪರಿಶೀಲನೆ ನಡೆಸಿ, ಕಿಡಿಗೇಡಿಗಳ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ.