ಬೆಳಗಾವಿ: ಸಾರಿಗೆ ಮುಷ್ಕರಕ್ಕೆ ಇಳಿದಿರುವ ಸಾರಿಗೆ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಸಾರಿಗೆ ಬಸ್‍ಗಳನ್ನು ರಸ್ತೆಗೆ ಇಳಿಸಲು ಅಧಿಕಾರಿಗಳು ಇನ್ನಿಲ್ಲದ ಹರಸಾಹಸ ಮಾಡುತ್ತ ಇದ್ದಾರೆ. ಸಿಬ್ಬಂದಿ ಮೇಲೆ ಒತ್ತಡ ಹೇರಿ ಡ್ಯೂಟಿಗೆ ಕಳುಹಿಸುತ್ತಿದ್ದಾರೆ. ಹೀಗಾಗಿ ಬಸ್ ಚಾಲಕರೊಬ್ಬರು ಮುಷ್ಕರಕ್ಕೆ ಹೆದರಿ ಹೆಲ್ಮೆಟ್ ಧರಿಸಿ ಬಸ್ ಚಾಲನೆ ಮಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
Advertisement
Advertisement
ಬೆಳಗಾವಿ ಜಿಲ್ಲೆಯಲ್ಲಿ ಸಾರಿಗೆ ಬಸ್‍ಗಳ ಓಡಾಟ ಸ್ಥಬ್ದವಾದ ಪರಿಣಾಮ ಸಾರಿಗೆ ಇಲಾಖೆ ಅಧಿಕಾರಿಗಳು ಇಂದು ಕೆಲವು ಸಿಬ್ಬಂದಿಗೆ ಒತ್ತಡ ಹೇರಿ ಡ್ಯೂಟಿಗೆ ನಿಯೋಜನೆ ಮಾಡಿದ್ದಾರೆ. ಹೀಗಾಗಿ ಮುಷ್ಕರಕ್ಕೆ ಹೆದರಿ ಬಸ್ ಚಾಲಕರೊಬ್ಬರು ಬಸ್ ಒಳಭಾಗದಲ್ಲಿ ಹೆಲ್ಮೆಟ್ ಧರಿಸಿ ಬೆಳಗಾವಿಯಿಂದ ಧಾರವಾಡಕ್ಕೆ ಬಸ್ ಚಾಲನೆ ಮಾಡಿದರು.
Advertisement
Advertisement
ಸಾರಿಗೆ ಇಲಾಖೆಯ ಹಲವು ಚಾಲಕ ಹಾಗೂ ನಿರ್ವಾಹಕರಿಗೆ ಇಂದು ಮುಂಜಾನೆ ಡ್ಯೂಟಿ ಮುಗಿದ ಬಳಿಕವೂ ಹಿರಿಯ ಅಧಿಕಾರಿಗಳು ಡ್ಯೂಟಿ ಮುಂದುವರೆಸುವಂತೆ ಒತ್ತಡ ಹೇರುತ್ತಿದ್ದರು. ಪರಿಣಾಮ ಒಲ್ಲದ ಮನಸ್ಸಿನಿಂದಲೇ ಚಾಲಕರು ಮತ್ತು ನಿರ್ವಾಹಕರು ಬಸ್‍ಗಳನ್ನು ರಸ್ತೆ ಇಳಿಸಿದ್ದಾರೆ. ಹೀಗಾಗಿ ಸುರಕ್ಷತಾ ದೃಷ್ಟಿಯಿಂದ ಹೆಲ್ಮೆಟ್ ಧರಿಸಿ ಬಸ್ ಚಾಲನೆ ಮಾಡಿದ್ದು ವಿಶೇಷವಾಗಿದೆ.