– ಕೇಂದ್ರ ಮುಂದಿರುವ ಆಯ್ಕೆಗಳೇನು?
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಯಾಸ್ ಸೈಕ್ಲೋನ್ ತಣ್ಣಗಾಗಿದೆ. ಆದ್ರೆ ರಾಜಕೀಯ ಸಂಘರ್ಷ ಮುಂದುವರಿದಿದೆ. ಮುಖ್ಯ ಕಾರ್ಯದರ್ಶಿ ಅಲ್ಪನ್ ಬಂಡೋಪಾದ್ಯಯ ನಿಯುಕ್ತಿ ವಿಚಾರವಾಗಿ ಮತ್ತೆ ಸಮರ ಏರ್ಪಟ್ಟಿದೆ. ಇಂದು ಅಲ್ಪನ್ ಬಂಡೋಪಾದ್ಯಯವರಿಗೆ ಬೆಳಗ್ಗೆ 10 ಗಂಟೆಗೆ ದೆಹಲಿಯ ನಾರ್ಥ್ ಬ್ಲಾಕ್ ನಲ್ಲಿ ರಿಪೋರ್ಟ್ ಮಾಡಿಕೊಳ್ಳುವಂತೆ ನೋಟಿಸ್ ನೀಡಿತ್ತು. ಆದ್ರೆ ಬಂಡೋಪಾದ್ಯಯ ನಾರ್ಥ್ ಬ್ಲಾಕ್ ನಲ್ಲಿ ರಿಪೋರ್ಟ್ ಮಾಡಿಕೊಂಡಿಲ್ಲ. ಹಾಗಾಗಿ ನಿಯಮ ಉಲ್ಲಂಘನೆ ಹಿನ್ನೆಲೆ ಕೇಂದ್ರ ಶಿಸ್ತು ಕ್ರಮಕ್ಕೆ ಮುಂದಾಗಿದೆ.
Advertisement
ಕೇಂದ್ರ ಪಶ್ಚಿಮ ಬಂಗಾಳ ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನಾಗಿ ಅಲ್ಪನ್ ಬಂಡೋಪಾಧ್ಯಾಯರನ್ನ ನಿಯೋಜನೆ ಮಾಡಲಾಗಿತ್ತು. ಇದೀಗ ರಾಜ್ಯ ಸೇವೆಯಿಂದ ಅಲ್ಪನ್ ಅವರನ್ನ ಬಿಡುಗೊಳಿಸುವಂತೆ ಕೇಂದ್ರ ಸರ್ಕಾರ ಪತ್ರ ಬರೆದಿತ್ತು. ಈ ಮೊದಲು ಪಶ್ಚಿಮ ಬಂಗಾಳದ ಸರ್ಕಾರ ಮನವಿ ಹಿನ್ನೆಲೆ ಅಲ್ಪನ್ ರಾಜ್ಯದಲ್ಲಿ ಸೇವಾವಧಿಯನ್ನ ಮೂರು ತಿಂಗಳು ವಿಸ್ತರಿಸಿತ್ತು. ಇದೀಗ ಕೇಂದ್ರ ತನ್ನ ವಿಸ್ತರಣೆಯನ್ನ ರದ್ದುಗೊಳಿಸಿದೆ.
Advertisement
Advertisement
ಕೇಂದ್ರಕ್ಕೆ ಸಿಎಂ ಮಮತಾ ಬ್ಯಾನರ್ಜಿ ಪತ್ರ:
ಈ ಸಂಬಂಧ ಕೇಂದ್ರಕ್ಕೆ ಮಮತಾ ಬ್ಯಾನರ್ಜಿ ಸುದೀರ್ಘವಾದ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಅನೇಕ ನಿಯಮಗಳನ್ನು ಉಲ್ಲೇಖಿಸಿರುವ ಮಮತಾ ಬ್ಯಾನರ್ಜಿ, ನಿರ್ದೇಶನವು ಕಾನೂನುಬದ್ಧವಾಗಿಲ್ಲ, ಸ್ವೀಕಾರಾರ್ಹವಲ್ಲ. ನಿಮ್ಮ ನಿರ್ದೇಶನ ಅಸಂವಿಧಾನಿಕವಾಗಿದೆ. ಕೊರೊನಾ ಸಂಕಷ್ಟ ಸಂದರ್ಭದಲ್ಲಿ ಮುಖ್ಯ ಕಾರ್ಯದರ್ಶಿದ ಬದಲಾವಣೆ ಸೂಕ್ತವಲ್ಲ. ಹಾಗಾಗಿ ನಿಮ್ಮ ನಿರ್ದೇಶನ ಹಿಂಪಡೆದುಕೊಳ್ಳಬೇಕು. ಮುಖ್ಯ ಕಾರ್ಯದರ್ಶಿಗಳನ್ನು ಸೇವೆಯಿಂದ ಈಗ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮುಂದೊಂದಿನ ಭಾರತಕ್ಕೂ ಮೋದಿ ಹೆಸರಿಡಬಹುದು: ಮಮತಾ ಬ್ಯಾನರ್ಜಿ
Advertisement
ಓರ್ವ ಅಧಿಕಾರಿಯನ್ನು ಕೇಂದ್ರ ಸರ್ಕಾರ ರಾಜ್ಯ ಸೇವೆಗೆ ನೇಮಿಸಬಹುದು. ಅಧಿಕಾರಿಯ ಸೇವಾವಧಿ ವಿಸ್ತರಿಸಬೇಕಾದ್ರೆ ರಾಜ್ಯ ಕೇಂದ್ರದ ಅನುಮತಿ ಪಡೆದುಕೊಳ್ಳಬೇಕು. ಹಾಗೆಯೇ ನಿಯೋಜಿಸಿರುವ ಅಧಿಕಾರಿಯನ್ನ ಹಿಂದಿರುಗಿಸಿಕೊಳ್ಳಬೇಕಾದ್ರೆ ಕೇಂದ್ರ ರಾಜ್ಯ ಸರ್ಕಾರದ ಒಪ್ಪಿಗೆ ಪಡೆದುಕೊಳ್ಳಬೇಕು. ಇದೀಗ ಅಲ್ಪನ್ ಬಂಡೋಪಾದ್ಯಯಗೆ ರಾಜ್ಯ ಸರ್ಕಾರ ಅನುಮತಿ ನೀಡದ ಹಿನ್ನೆಲೆ ಬೆಳಗ್ಗೆ 10 ಗಂಟೆಗೆ ದೆಹಲಿಯಲ್ಲಿ ರಿಪೋರ್ಟ್ ಮಾಡಿಕೊಂಡಿಲ್ಲ. ಇದನ್ನೂ ಓದಿ: ಮೂರನೇ ಬಾರಿ ಬಂಗಾಳದ ಗದ್ದುಗೆ ಏರಿದ ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಚುನಾವಣೆ ಪ್ರಚಾರದ ವೇಳೆ ಕಲ್ಲು ತೂರಾಟ ನಡೆದಿತ್ತು. ಅಂದು ಕೇಂದ್ರ ಸರ್ಕಾರು ಮೂವರು ಐಪಿಎಸ್ ಅಧಿಕಾರಿಗಳನ್ನು ದೆಹಲಿಗೆ ಹಿಂದಿರುಗುವಂತೆ ನಿರ್ದೇಶನ ನೀಡಿತ್ತು. ಆದ್ರೆ ಮಮತಾ ಬ್ಯಾನರ್ಜಿ ಅಧಿಕಾರಿಗಳನ್ನು ಸೇವೆಯಿಂದ ಬಿಡುಗಡೆಗೊಳಿಸಿರಲಿಲ್ಲ. ಇದನ್ನೂ ಓದಿ: ಬಿಜೆಪಿಯಿಂದ ಸಿಬಿಐ ದುರ್ಬಳಕೆ, ಪೊಲೀಸ್ ಅಧಿಕಾರಿ ಪರ ಮಮತಾ ಬ್ಯಾನರ್ಜಿ ಬ್ಯಾಟಿಂಗ್
ಆಲ್ ಇಂಡಿಯಾ ಸರ್ವಿಸ್ ರೂಲ್ 6(1) ಪ್ರಕಾರ ಅಧಿಕಾರಿಗಳು ಕೇಂದ್ರದ ಸೇವೆಗೆ ಹಿಂದಿರುಗಬೇಕಿದ್ದಲ್ಲಿ ರಾಜ್ಯದ ಅನುಮತಿಯನ್ನ ಪಡೆದುಕೊಳ್ಳುವುದು ಕಡ್ಡಾಯ. ಈಗ ಅಲ್ಪಾನ್ ಬಂಡೋಪಾಧ್ಯಯ ಕೇಂದ್ರ ಸರ್ಕಾರ ಯಾವ ಕ್ರಮಗಳನ್ನು ತೆಗೆದುಕೊಳ್ಳಬಹುದು ಮಾಹಿತಿ ಇಲ್ಲಿದೆ.
1. ಕೇಂದ್ರ ಅಲ್ಪನ್ ಬಂಡೋಪಾಧ್ಯಯ ಮೂರು ತಿಂಗಳ ಸರ್ವಿಸ್ ಅವಧಿಯನ್ನ ರದ್ದುಗೊಳಿಸಬಹುದು.
2. ಮತ್ತೊಮ್ಮೆ ದೆಹಲಿಗೆ ಬರುವಂತೆ ನಿರ್ದೇಶನ ನೀಡಬಹುದು.
3. ಶೋಕಾಸ್ ನೋಟಿಸ್ ನೀಡಿ, ನಿಮ್ಮ ವಿರುದ್ಧ ಯಾಕೆ ಕಠಿಣ ಕ್ರಮ ಜರುಗಿಸಬಾರದು ಎಂದು ಕೇಳಬಹುದು.
ಒಂದು ವೇಳೆ ಅಲ್ಪನ್ ಬಂಡೋಪಾಧ್ಯಯ ವಿರುದ್ಧ ತನಿಖೆಗೆ ಆಗ್ರಹಿಸಿದ್ರೆ ಕೇಂದ್ರ ಮತ್ತು ಪಶ್ಚಿಮ ಬಂಗಾಳದ ಸರ್ಕಾರದ ನಡುವಿನ ಗುದ್ದಾಟ ಮತ್ತಷ್ಟು ತೀವ್ರತೆ ಪಡೆದುಕೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ. ಇದನ್ನೂ ಓದಿ: ಮಮತಾ ಬ್ಯಾನರ್ಜಿ ಪ್ರತಿ ವರ್ಷ ಕುರ್ತಾ ಉಡುಗೊರೆ ನೀಡ್ತಾರೆ: ಮೋದಿ