ಮುಂಬೈ: ಪ್ರಯಾಣಿಕರ ಸುರಕ್ಷತೆಯ ನಿಟ್ಟಿನಲ್ಲಿ ಮುಂಬೈನ ಸ್ಥಳೀಯ ರೈಲುಗಳಲ್ಲಿ ಆಡಿಯೋ ಮತ್ತು ವೀಡಿಯೋ ರೆಕಾರ್ಡ್ ವ್ಯವಸ್ಥೆಯನ್ನು ಅಳವಡಿಸುವುದಾಗಿ ಪಶ್ಚಿಮ ರೈಲ್ವೆ ಘೋಷಿಸಿದೆ.
ಇತ್ತೀಚೆಗಷ್ಟೇ 2021ರ ಕೇಂದ್ರ ಬಜೆಟ್ ನಡೆದಿದ್ದು, ಈ ವೇಳೆ ರೈಲ್ವೆ ಅಭಿವೃದ್ಧಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ 1.10 ಲಕ್ಷ ಹಣ ಘೋಷಿಸಿದ್ದಾರೆ. ಈ ಹಿನ್ನೆಲೆ ಇದೀಗ 110 ಮುಂಬೈ ಸ್ಥಳೀಯ ರೈಲುಗಳಲ್ಲಿ ವಿಡಿಯೋ ಮತ್ತು ಆಡಿಯೋ ರೆಕಾರ್ಡಿಂಗ್ ವ್ಯವಸ್ಥೆಯನ್ನು ಅಳವಡಿಸಲು ಪಶ್ಚಿಮ ರೈಲ್ವೆ ಇಲಾಖೆ ಮುಂದಾಗಿದೆ.
Advertisement
Advertisement
ರೈಲಿನಲ್ಲಿ ಮೋಟಾರ್ ಮ್ಯಾನ್ ಹಾಗೂ ಗಾರ್ಡ್ಗಳ ಕ್ಯಾಬಿನ್ ಬಳಿ ಹೊರಗೆ ಮತ್ತು ಒಳಗೆ ಆಡಿಯೋ, ವೀಡಿಯೋ ರೆಕಾರ್ಡಿಂಗ್ ವ್ಯವಸ್ಥೆಯ ಕ್ಯಾಮೆರಾವನ್ನು ಫಿಕ್ಸ್ ಮಾಡಲಾಗುತ್ತದೆ. ಹೀಗೆ ಒಟ್ಟಾರೆಯಾಗಿ 110 ರೈಲುಗಳಲ್ಲಿ ಆಡಿಯೋ ಮತ್ತು ವೀಡಿಯೋ ರೆಕಾರ್ಡಿಂಗ್ ವ್ಯವಸ್ಥೆಗೊಳಿಸಲಾಗುತ್ತಿದೆ.
Advertisement
ಈ ಕ್ರಮದ ಮೂಲಕ ರೈಲ್ವೆ, ಸ್ಥಳೀಯ ರೈಲುಗಳ ಕಾರ್ಯಾಚರಣೆ ಅಂದರೆ ಚಾಲಕರು ಹಾಗೂ ಗಾರ್ಡ್ಗಳ ಕಾರ್ಯನಿರ್ವಹಿಸುವ ರೀತಿ, ರೈಲಿನ ವೇಗದ ನಿರ್ಬಂಧ, ರೈಲ್ವೆ ಅಪಘಾತ ಇತರ ವಿಚಾರಗಳ ತಿಳಿದುಕೊಳ್ಳುವ ಗುರಿ ಹೊಂದಿದೆ. ಜೊತೆಗೆ ಈ ವ್ಯವಸ್ಥೆಯಿಂದ ಪ್ರಯಾಣಿಕರ ಸುರಕ್ಷತೆಯನ್ನು ತಿಳಿಯಲು ಸಹಾಯಕವಾಗಿದೆ ಎಂದು ಡಬ್ಲ್ಯೂ ಆರ್ ಮುಖ್ಯ ಜನಸಂಪರ್ಕ ಅಧಿಕಾರಿ ಸುಮಿತ್ ಠಾಕೂರ್ ಹೇಳಿದ್ದಾರೆ.