ಮುಂಬೈ: ಕೊರೊನಾ ಪ್ರಕರಣಗಳ ಇಳಿಕೆ ಹಿನ್ನೆಲೆ ಮಹಾರಾಷ್ಟ್ರ ಹಂತ ಹಂತವಾಗಿ ಅನ್ಲಾಕ್ ಆಗುತ್ತಿದೆ. ಆದ್ರೆ ಲೋಕಲ್ ರೈಲುಗಳಲ್ಲಿ ಮಹಿಳೆಯರ ಸಂಚಾರಕ್ಕೆ ನಿರ್ಬಂಧ ಹಾಕಿರುವ ನಿಯಮ ವಿವಾದಕ್ಕೆ ಕಾರಣವಾಗಿದೆ. ಅನ್ಲಾಕ್ ಮೂರನೇ ಹಂತದಲ್ಲಿ ಲೋಕಲ್ ರೈಲುಗಳಿಗೆ ಹಸಿರು ನಿಶಾನೆ ಸಿಗಲಿದೆ ಎನ್ನಲಾಗಿತ್ತು. ಆದ್ರೆ ಇದೀಗ ಕೇವಲ ಆರೋಗ್ಯ ಕಾರ್ಯಕರ್ತರು ಸೇರಿದಂತೆ ನಿಯಮಿತ ವರ್ಗಕ್ಕೆ ಮಾತ್ರ ರೈಲುಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ.
Advertisement
ಲಾಕ್ಡೌನ್ ವೇಳೆಯಲ್ಲಿಯೂ ಲೋಕಲ್ ಟ್ರೈನ್ ಗಳಲ್ಲಿ ಕೇವಲ ತುರ್ತುಸೇವೆಗೆ ಮೀಸಲಿರಿಸಲಾಗಿತ್ತು. ಸದ್ಯ ಮುಂಬೈ ಮಹಾನಗರ ಪಾಲಿಕೆಯ ಮಾರ್ಗಸೂಚಿ ಮಹಿಳೆಯರ ಕೆಂಗಣ್ಣಿಗೆ ಗುರಿಯಾಗಿದೆ. ಆದ್ರೆ ಈ ಸಂಬಂಧ ಪಾಲಿಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇತ್ತ ಜೂನ್ 7ರಿಂದ ಈ ನಿಯಮ ಜಾರಿಗೆ ಬರಲಿದೆ.
Advertisement
Advertisement
ಮಧ್ಯಾಹ್ನ 4 ಗಂಟೆವರೆಗೆ ಅಂಗಡಿಗಳಿಗೆ ತೆರೆಯಲು ಅನುಮತಿ ನೀಡಲಾಗಿದೆ. ಹೆಚ್ಚು ಜನ ಸೇರುವ ಸಾರ್ವಜನಿಕ ಸ್ಥಳಗಳಲ್ಲಿ ಸೆಕ್ಷನ್ 144 ಜಾರಿಯಲ್ಲಿರಲಿದ್ದು, ಯಾವುದೇ ಕಾರ್ಯಕ್ರಮ ಆಯೋಜನೆಗೆ ಅನುಮತಿ ನೀಡಿಲ್ಲ. ಮಾಲ್ ಮತ್ತು ಚಿತ್ರಮಂದಿರಗಗಳು ಮೊದಲಿನಂತೆಯೇ ಬಂದ್ ಇರಲಿವೆ. ಜಿಮ್, ಸ್ಪಾಗಳಿಗೆ ಷರತ್ತು ಬದ್ಧ ಅನುಮತಿ ನೀಡಲಾಗಿದೆ.
Advertisement