ಬೆಂಗಳೂರು: ಸಿಡಿ ಲೇಡಿ ಇಂದು ನ್ಯಾಯಾಧೀಶರ ಮುಂದೆ ಹಾಜರಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಕಾನೂನು ಪ್ರಕ್ರಿಯೆಗಳನ್ನು ಹೇಗೆ ನಡೆಸಬೇಕು ಎಂಬುದನ್ನು ತಿಳಿಯಲು ಸೋಮವಾರ ರಾತ್ರಿ ಬಾಲಚಂದ್ರ ಜಾರಕಿಹೊಳಿ ಹಿರಿಯ ವಕೀಲರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ನ್ಯಾಯಾಧೀಶರ ಮುಂದೆ ಹೇಳಿಕೆ ಕೊಟ್ಟರೆ ರಮೇಶ್ ಜಾರಕಿಹೊಳಿಗೆ ಸಂಕಷ್ಟ ಗ್ಯಾರಂಟಿ. ಆಕೆಯ ಹೇಳಿಕೆ ವಿಡಿಯೋ ಹೇಳಿಕೆಗೆ ತದ್ವಿರುದ್ಧವಾಗಿ ಇದ್ರೆ ಮಾತ್ರ ಈ ಪ್ರಕರಣದಲ್ಲಿ ಪಾರು. ಇಲ್ಲದಿದ್ದರೆ ರಮೇಶ್ ಜಾರಕಿಹೊಳಿಗೆ ಸಂಕಷ್ಟ ಆಗಲಿದೆ ಎಂದು ಹಿರಿಯ ವಕೀಲರು ಹೇಳಿದ್ದಾರೆ.
Advertisement
Advertisement
ಆಕೆ ನ್ಯಾಯಾಲಯದ ಮುಂದೆ ಬಂದಾಗ ಎಸ್ಐಟಿ ವಶಕ್ಕೆ ಕೊಡುವಂತೆ ಸರ್ಕಾರಿ ಪರ ವಕೀಲರು ಕೇಳಿದರೆ ಮಾತ್ರ ನಿಮಗೂ ಕೇಸ್ ವಿಚಾರದಲ್ಲಿ ಅಭಿಪ್ರಾಯ ಮಂಡಿಸಲು ಅವಕಾಶ ಇರಲಿದೆ ಎಂದು ವಕೀಲರು ಸಲಹೆ ನೀಡಿದ್ದಾರೆ.
Advertisement
ಒಂದೊಮ್ಮೆ ಇವತ್ತು ಯುವತಿ ಸ್ವಯಿಚ್ಚೆ ಹೇಳಿಕೆಗೆ ಹಾಜರಾಗದಿದ್ದರೆ ಪೋಷಕರು ಹೈಕೋರ್ಟ್ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಹಾಕುವ ಸಾಧ್ಯತೆಯಿದೆ. ಯುವತಿ ಪತ್ತೆಯಾಗಿ ಪೋಷಕರ ವಶಕ್ಕೆ ನ್ಯಾಯಾಲಯ ನೀಡಿದರೆ ಮುಂದಿನ ಕಾನೂನು ಅವಕಾಶಗಳ ಬಗ್ಗೆಯೂ ಚರ್ಚೆ ನಡೆದಿದೆ.
Advertisement
ಜಾರಕಿಹೊಳಿ ಮುಂದಿನ ನಡೆ ಏನು?
ದೂರಿನಂತೆ ಯುವತಿ ಹೇಳಿಕೆ ನೀಡಿದರೆ ಜಾರಕಿಹೊಳಿ ಬಂಧನ ಮಾಡುವ ಸಾಧ್ಯತೆಯಿದೆ. ಹೀಗಾಗಿ ಯುವತಿ ಇವರ ವಿರುದ್ಧ ಹೇಳಿಕೆ ಕೊಟ್ಟ ತಕ್ಷಣವೇ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಬಹುದು. ಬಳಿಕ ತನ್ನ ವಿರುದ್ಧ ದಾಖಲಾಗಿರುವ ಎಫ್ಐಆರ್ನ್ನು ರದ್ದು ಮಾಡುವ ಬಗ್ಗೆ ಅರ್ಜಿ ಸಲ್ಲಿಸಬಹುದು.