ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಭಿನ್ನಮತ, ಅಸಮಾಧಾನಗಳನ್ನೂ ಸಾವರಿಸಿಕೊಳ್ತಿರುವ ಹೊತ್ತಲ್ಲಿ ಸಿಎಂ ಯಡಿಯೂರಪ್ಪಗೆ ಮೀಸಲಾತಿ ಒತ್ತಡ ಶುರುವಾಗಿದೆ. ಪ್ರಮುಖ ಸಮುದಾಯಗಳು ಮೀಸಲಾತಿಗಾಗಿ ಸಿಎಂ ಮೇಲೆ ಒತ್ತಡ ಹೇರುತ್ತಿದ್ದಾರೆ. ಹೀಗಾಗಿ ಮೀಸಲಾತಿ ವಿಚಾರದಲ್ಲಿ ಎಚ್ಚರಿಕೆ ಹೆಜ್ಜೆ ಇಡಲು ಸಿಎಂ ಕಸರತ್ತು ನಡೆಸ್ತಿದ್ದಾರೆ. ಜೊತೆಗೆ ಮೀಸಲಾತಿ ಹೋರಾಟಗಳು, ಕೈ ಮೀರದಂತೆ ತಡೆಯಲು, ನಾಜೂಕಾಗಿ ನಿಭಾಯಿಸಲು ಸಿಎಂ ಮುಂದಾಗಿದ್ದಾರೆ. ಅಲ್ದೆ ಪ್ಲಾನ್ ಎ ಹಾಗೂ ಪ್ಲ್ಯಾನ್ ಬಿ ಸೂತ್ರ ರೆಡಿ ಮಾಡಿಕೊಂಡಿದ್ದಾರೆ.
Advertisement
ಪ್ಲ್ಯಾನ್- ಎ ಪ್ರಕಾರ ಆಯಾ ಸಮುದಾಯದ ಸಚಿವರು, ಶಾಸಕರುಗಳಿಗೆ ಮನವೊಲಿಕೆ ಹೊಣೆಗಾರಿಕೆ ನೀಡಲು ಪ್ಲಾನ್ ಮಾಡಿದ್ದಾರೆ.
* ಪಂಚಮಸಾಲಿ ಲಿಂಗಾಯತರ ಹೋರಾಟದ ಹೊಣೆ
ಸಚಿವ ಮುರುಗೇಶ್ ನಿರಾಣಿ
ಸಚಿವ ಸಿ ಸಿ ಪಾಟೀಲ್
Advertisement
Advertisement
* ಕುರುಬರ ಮೀಸಲಾತಿ ಹೋರಾಟದ ಹೊಣೆ
ಸಚಿವ ಕೆ.ಎಸ್. ಈಶ್ವರಪ್ಪ
ಸಚಿವ ಎಂಟಿಬಿ ನಾಗರಾಜ್
ಸಚಿವ ಬೈರತಿ ಬಸವರಾಜ್
ಸಚಿವ ಆರ್. ಶಂಕರ್
Advertisement
* ಒಕ್ಕಲಿಗರ ಮೀಸಲಾತಿ ಹೋರಾಟದ ಹೊಣೆ
ಡಿಸಿಎಂ ಅಶ್ವತ್ನಾರಾಯಣ
ಸಚಿವ ಆರ್. ಅಶೋಕ್
* ವಾಲ್ಮೀಕಿ ಮೀಸಲಾತಿ ಹೋರಾಟದ ಹೊಣೆ
ಸಚಿವ ಶ್ರೀರಾಮುಲು
ಸಚಿವ ರಮೇಶ್ ಜಾರಕಿಹೊಳಿ
* ಮಾದಿಗರ ಮೀಸಲಾತಿ ಹೋರಾಟದ ಹೊಣೆ
ಡಿಸಿಎಂ ಗೋವಿಂದ ಕಾರಜೋಳ
* ಗಾಣಿಗ, ಇತರ ಸಮುದಾಯಗಳ ಹೋರಾಟ ಹೊಣೆ
ಡಿಸಿಎಂ ಲಕ್ಷ್ಮಣ ಸವದಿ
ಸಚಿವ ಬಸವರಾಜ ಬೊಮ್ಮಾಯಿ
ಪ್ಲಾನ್- ಬಿ: ಶಾಸಕರು ಸಚಿವರ ಮನವೊಲಿಕೆ ಯಶಸ್ವಿ ಆಗದಿದ್ದರೆ ಖುದ್ದು ಮುಖ್ಯಮಂತ್ರಿಗಳೇ ಅಖಾಡಕ್ಕೆ ಇಳಿಯಲಿದ್ದಾರೆ. ಮುಂಚೂಣಿ ಸ್ವಾಮೀಜಿಗಳ ಮನವೊಲಿಕೆಗೆ ಸಿಎಂ ಪ್ಲಾನ್ ಮಾಡಿದ್ದಾರೆ. ಬಜೆಟ್ ಬಳಿಕ ಹೈಕಮಾಂಡ್ ವರಸೆ ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆ. ಈಗ ಎದ್ದಿರೋ ಮೀಸಲಾತಿ ಕೂಗು ತಮ್ಮ ಪರ ತಿರುಗಿಸಿಕೊಳ್ಳಲೂ ಪ್ಲಾನ್ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ಮುಖ್ಯಮಂತ್ರಿಗಳ ಈ ಪ್ಲಾನ್ ವರ್ಕೌಟ್ ಆಗುತ್ತಾ..? ಮೀಸಲಾತಿ ಒತ್ತಡದಿಂದ ಯಡಿಯೂರಪ್ಪ ಪಾರಾಗ್ತಾರಾ ಎಂಬುದನ್ನು ಕಾದು ನೋಡಬೇಕಿದೆ.