– ಭಜರಂಗದಳದ ಕಾರ್ಯಾಚರಣೆಯಿಂದ ಬಹಿರಂಗ
ಮಂಗಳೂರು: ಮೀನು ಸಾಗಾಟದ ಟೆಂಪೋದಲ್ಲಿ ಬರೋಬ್ಬರಿ 12 ಟನ್ ಗೋಮಾಂಸ ಸಾಗಣೆ ಮಾಡುತ್ತಿದ್ದ ವೇಳೆ ಭಜರಂಗ ದಳದ ಕಾರ್ಯಕರ್ತರು ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಪತ್ತೆ ಮಾಡಿದ್ದಾರೆ.
Advertisement
ಮಂಗಳೂರಿನಲ್ಲಿ ಘಟನೆ ನಡೆದಿದ್ದು, ಭಾರೀ ಪ್ರಮಾಣದಲ್ಲಿ ಗೋಮಾಂಸವನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಮಂಗಳೂರಿನ ಭಜರಂಗದಳದ ಕಾರ್ಯಕರ್ತರಿಗೆ ಮಾಹಿತಿ ಸಿಕ್ಕಿತ್ತು. ಈ ಹಿನ್ನಲೆಯಲ್ಲಿ ನಗರದ ಹೊರವಲಯದ ಅಡ್ಯಾರ್ ನಿಂದ ಮೀನು ಸಾಗಟದ ಟೆಂಪೋವನ್ನು ಭಜರಂಗದಳದ ಕಾರ್ಯಕರ್ತರು ಬೆನ್ನಟ್ಟಿಕೊಂಡು ಬಂದಿದ್ದರು. ಇದೇ ವೇಳೆ ಕಂಕನಾಡಿ ನಗರ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ನಗರದ ಪಡೀಲ್ ನಲ್ಲಿ ಟೆಂಪೋವನ್ನು ತಡೆದಿದ್ದಾರೆ.
Advertisement
Advertisement
ಬಳಿಕ ತಪಾಸಣೆ ನಡೆಸಿದಾಗ ಮೀನು ಸಾಗಾಟದ ಟೆಂಪೋದಲ್ಲಿ ಬರೋಬ್ಬರಿ 12 ಟನ್ ಗೋಮಾಂಸ ಪತ್ತೆಯಾಗಿದ್ದು, ಪೊಲೀಸರು ಗೋಮಾಂಸವನ್ನು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಹುಬ್ಬಳ್ಳಿಯಿಂದ ಮಂಗಳೂರಿಗೆ ಈ ಗೋಮಾಂಸವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರೋದಾಗಿ ಆರೋಪಿಗಳು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾರೆ.
Advertisement
ಕಳೆದ ಒಂದು ವಾರದ ಹಿಂದೆ ಇದೇ ರೀತಿ ಹಾಲು ಸಾಗಾಟದ ಟೆಂಪೋದಲ್ಲಿ ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದಾಗ ಭಜರಂಗದಳದ ಕಾರ್ಯಕರ್ತರು ಅಡ್ಡ ಹಾಕಿ ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿತ್ತು.