ಬೆಂಗಳೂರು: ಗಡಿಯಲ್ಲಿ ಚಿನಾ ಕಿರಿಕ್ ಮಾಡಿದ ಬೆನ್ನಲ್ಲೇ ಚೀನಾ ಉತ್ಪನ್ನಗಳ ಬಳಕೆಯನ್ನು ನಿಷೇಧಿಸುವಂತೆ ಭಾರತದಲ್ಲಿ ಭಾರೀ ಅಭಿಯಾನ ನಡೆಯುತ್ತಿದೆ. ಈ ಅಭಿಯಾನದ ವೇಳೆ ಟಿಕ್‍ಟಾಕ್ ರೀತಿಯಲ್ಲಿರುವ ಮಿಟ್ರಾನ್ ಅಪ್ಲಿಕೇಶನ್ ಭಾರೀ ಸದ್ದು ಮಾಡುತ್ತಿದೆ.
ಮಿಟ್ರಾನ್ ಆ್ಯಪ್ ಚರ್ಚೆ ಆಗುತ್ತಿದ್ದಂತೆ ಇದು ಪಾಕಿಸ್ತಾನ ಆ್ಯಪ್. ನಾವು ಯಾಕೆ ಡೌನ್‍ಲೋಡ್ ಮಾಡಬೇಕು ಟಿಕ್ ಟಾಕ್ ಬೇಡ, ಈ ಮಿಟ್ರಾನ್ ಆ್ಯಪ್ ಬೇಡ ಎಂಬ ಅಭಿಪ್ರಾಯಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿದೆ. ಆದರೆ ಈ ಮಿಟ್ರಾನ್ ಆ್ಯಪ್ ಮೂಲತ: ಪಾಕಿಸ್ತಾನದ್ದಾಗಿದ್ದರೂ ಈಗ ಭಾರತದ್ದು.
Advertisement
Advertisement
ಹೌದು. ಪಾಕಿಸ್ತಾನದ ಕ್ಯೂಬಾಕ್ಸಸ್ ಹೆಸರಿನ ಕಂಪನಿ ಅಪ್ಲಿಕೇಶನ್ ಸೋರ್ಸ್ ಕೋಡ್ ಅನ್ನು ಮಿಟ್ರಾನ್ ಕಂಪನಿಗೆ ಮಾರಾಟ ಮಾಡಿದೆ. ಈ ಸಂಬಂಧ ಕ್ಯೂಬಾಕ್ಸಸ್ ಕಂಪನಿಯ ಸಿಇಒ ಇರ್ಫಾನ್ ಶೇಖ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಮಿಟ್ರಾನ್ ಪಾಲುದಾರರಿಗೆ 34 ಡಾಲರ್(2,600 ರೂ.) ಬೆಲೆಗೆ ಸೋರ್ಸ್ ಕೋಡ್ ಮಾರಾಟ ಮಾಡಿದ್ದೇವೆ. ಈಗ ಡೆವಲಪರ್ ಗಳು ಅದರ ಲೋಗೋ ಬದಲಾವಣೆ ಮಾಡಿ ಪ್ಲೇ ಸ್ಟೋರ್ ನಲ್ಲಿ ಬಿಟ್ಟಿದ್ದಾರೆ ಎಂದು ಹೇಳಿದ್ದಾರೆ. ಮಾರಾಟದ ಮಾಡಿದ ಕಾರಣ ಈ ಆ್ಯಪ್ ಭಾರತದ್ದಾಗಿದೆ.
Advertisement
Advertisement
ಮಿಟ್ರಾನ್ ಅಪ್ಲಿಕೇಶನ್ ಗೆ ಗೂಗಲ್ ಪ್ಲೇ ಸ್ಟೋರ್ ನಲ್ಲಿ 4.7 ರೇಟಿಂಗ್ ನೀಡಲಾಗಿದೆ. ಟಿಕ್ ಟಾಕ್ ಅಪ್ಲಿಕೇಶನ್ ಗೆ ಲಕ್ಷಾಂತರ ಮಂದಿ ಸಂಖ್ಯೆಯಲ್ಲಿ ನೆಗೆಟಿವ್ ರೇಟಿಂಗ್ ನೀಡಿದ ಪರಿಣಾಮ ಪ್ಲೇ ಸ್ಟೋರ್ ನಲ್ಲಿ 1.2ಕ್ಕೆ ಕುಸಿದಿತ್ತು. ಆದರೆ ಗೂಗಲ್ ಈ ನೆಗೆಟಿವ್ ರಿವ್ಯೂ ಡಿಲೀಟ್ ಮಾಡಿದ ಪರಿಣಾಮ ಈಗ 4.4 ರೇಟಿಂಗ್ ನೀಡಲಾಗಿದೆ.
7.7 ಎಂಬಿ ಗಾತ್ರದ ಮಿಟ್ರಾನ್ ಅಪ್ಲಿಕೇಶನ್ ಅನ್ನು 50 ಲಕ್ಷಕ್ಕೂ ಅಧಿಕ ಮಂದಿ ಡೌನ್ ಲೋಡ್ ಮಾಡಿದ್ದಾರೆ.